Subscribe to Updates
Get the latest creative news from FooBar about art, design and business.
Author: vikimasters
ಮನರಂಜನೆ ಅಂತ ಬಂದಾಗ ಕನ್ನಡಿಗರ ಮೊದಲ ಆಯ್ಕೆಯೇ ‘ಸ್ಟಾರ್ ಸುವರ್ಣ'(Star Suvarna). ಆಸೆ, ನಿನ್ನಜೊತೆ ನನ್ನಕಥೆ, ನೀನಾದೆ ನಾ, ರೇಣುಕಾ ಯಲ್ಲಮ್ಮ, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರದಂತಹ ಧಾರಾವಾಹಿಗಳು ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ಸಿನ ಮೆಟ್ಟಿಲೇರಿದೆ. ಈ ಸಾಲಿಗೆ ಸೇರಲಿರುವ ಹೊಸ ಕಥೆ ‘ಶಾರದೆ(Sharade)’.ಜಗತ್ತಿನ ಎಲ್ಲಾ ಪ್ರೀತಿಯನ್ನು ಧಾರೆಯೆರೆಯೋ ನಿಷ್ಕಲ್ಮಶ ಜೀವ ಅಂದ್ರೆ ಅದು ‘ಅಮ್ಮ’. ಈ ಕಥೆಯಲ್ಲೂ ಅಷ್ಟೇ ನಾಯಕಿ ಶಾರದಾ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಯಾರೋ ಮಾಡಿದ ಕುತಂತ್ರದಿಂದ ಬಡತನದಲ್ಲಿ ಬೆಳೆದಿರುತ್ತಾಳೆ. ಗಂಡ ಮಾಡಿದ ಮೋಸದಿಂದಾಗಿ ಎಷ್ಟೇ ನೋವಿದ್ದರೂ ಈಕೆ ತನ್ನ ಮಗಳಿಗಾಗಿ ಹೋರಾಡುತ್ತಾ ಜೀವನ ನಡೆಸುತ್ತಿರ್ತಾಳೆ. ಇನ್ನೊಂದೆಡೆ ಕೂಡು ಕುಟುಂಬದಲ್ಲಿ ಬೆಳೆದಿರೋ ನಾಯಕ ಸಿದ್ದಾರ್ಥ್, ಇಷ್ಟವಿಲ್ಲದಿದ್ದರೂ ಅತ್ತೆ ಮಗಳಾದ ಜ್ಯೋತಿಕಾಳ ಜೊತೆ ಮದುವೆಯಾಗಲು ತಯಾರಾಗಿರ್ತಾನೆ. ಆದರೆ ಈ ಮನೆಗೆ ಮನೆಕೆಲಸದವಳಾಗಿ ಬರೋ ಶಾರದಾಳ ಬದುಕಲ್ಲಿ ಮುಂದೆ ಏನೆಲ್ಲಾ ತಿರುವುಗಳು ಬರಲಿದೆ? ಕಷ್ಟ, ನೋವು, ಅವಮಾನಗಳನ್ನೇ ಎದುರಿಸುತ್ತಾ ಬಂದಿರೋ ಶಾರದೆಗೆ(Sharade) ತನ್ನ ಜನ್ಮರಹಸ್ಯದ ಬಗ್ಗೆ ತಿಳಿಯುತ್ತಾ? ಒಬ್ಬಂಟಿಯಾಗಿ ಬದುಕುತ್ತಿರೋ ಶಾರದೆಯ…
6 ಮಾರ್ಚ್ 2025, ಬೆಂಗಳೂರು: ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಯ 22ನೇ ವಾರ್ಷಿಕೋತ್ಸವವನ್ನು ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ವೇದಾಧ್ಯಯನದ ಪ್ರಮುಖ ಸಂಸ್ಥೆಗಳಲ್ಲೊಂದಾದ ಈ ಪಾಠಶಾಲೆಯ ವಾರ್ಷಿಕ ಕಾರ್ಯಕ್ರಮವು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರ ದಿವ್ಯ ಆಶೀರ್ವಾದದೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ವಿದ್ವತ್ಪೂರ್ಣ ಸಮ್ಮೇಳನ, ಭವ್ಯ ಪ್ರದರ್ಶನ ಹಾಗೂ ಬಹು-ನಿರೀಕ್ಷಿತ ಪದವೀಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ರತ್ನಗಿರಿಯ ಶ್ರೀ ಬಾಲಮುರುಗನ್ ದೇವಸ್ಥಾನದ ಶ್ರೀ ಬಾಲಮುರುಗನ್ ಆದಿಮಾಯಿ ಸ್ವಾಮಿಗಳು ಮುಖ್ಯ ಅತಿಥಿಯಾಗಿ ಪದವೀಪ್ರದಾನ ಭಾಷಣವನ್ನು ನೀಡಿದರು. ಈ ಸಂದರ್ಭದಲ್ಲಿ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ(Shivagama Vidyanidhi) ಎಂಬ ಗೌರವಾನ್ವಿತ ಪದವಿ ಪ್ರದಾನ ಮಾಡಲಾಯಿತು. ಅವರು ವೇದ ಆಗಮ ಶಾಸ್ತ್ರಗಳಲ್ಲಿ ಎಂಟು ವರ್ಷಗಳ ಕಠಿಣ, ಸಮಗ್ರ ವಸತಿ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಪದವೀಧರರಲ್ಲಿ ಹಲವರು ದೇಶ-ವಿದೇಶಗಳ ಗೌರವಾನ್ವಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದು, ಭವ್ಯ ವೇದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಈ ಅದ್ಭುತ ಕ್ಷಣಕ್ಕೆ ಮತ್ತಷ್ಟು…
ಉದಿತ್ ನಾರಾಯಣ್ (Udit Narayan)ಭಾರತದ ಖ್ಯಾತ ಗಾಯಕ. ದಶಕಗಳಿಂದಲೂ ಭಾರತೀಯ ಚಿತ್ರರಂಗದ ಮೇರು ಗಾಯಕ ಎನಿಸಿಕೊಂಡಿದ್ದಾರೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಬಳಿಕ ಚಿತ್ರರಂಗದ ಹಿರಿಯ ಮತ್ತು ಗೌರವಾನ್ವಿತ ಗಾಯಕ ಎನಿಸಿಕೊಂಡಿರುವವರು, ಆದರೆ ಇತ್ತೀಚೆಗೆ ನಡೆದಿರುವ ಘಟನೆಯೊಂದು ಅವರ ಇಷ್ಟು ವರ್ಷದ ಗೌರವವನ್ನು ಮಣ್ಣುಪಾಲು ಮಾಡುತ್ತಿದೆ. ಇದೀಗ ಆ ಕೆಟ್ಟ ಘಟನೆ ಬಗ್ಗೆ ಸ್ವತಃ ಉದಿತ್ ನಾರಾಯಣ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಉದಿತ್ ನಾರಾಯಣ್ (Udit Narayan) ಅವರು ಇತ್ತೀಚೆಗಷ್ಟೆ ಲೈವ್ ಕಾನ್ಸರ್ಟ್ ಒಂದನ್ನು ನಡೆಸಿಕೊಟ್ಟರು. ಕಾನ್ಸರ್ಟ್ ವೇಳೆ ವೇದಿಕೆ ಬಳಿ ಇದ್ದ ಯುವತಿಯೊಬ್ಬಾಕೆ ಹಿರಿಯ ಗಾಯಕನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು ಉದಿತ್ ನಾರಾಯಣ್ ಸಹ ವೇದಿಕೆ ಮೇಲೆ ಕುಳಿತುಕೊಂಡೆ ಅಭಿಮಾನಿಗೆ ಸೆಲ್ಫಿ ನೀಡಿದರು. ಆದರೆ ಆ ವೇಳೆ ಮಹಿಳಾ ಅಭಿಮಾನಿ ಉದಿತ್ ನಾರಾಯಣ್ ಅವರ ಕೆನ್ನೆಗೆ ಮುತ್ತು ಕೊಟ್ಟಳು. ಕೂಡಲೇ ಉದಿತ್ ನಾರಾಯಣ್, ಆ ಮಹಿಳಾ ಅಭಿಮಾನಿಯನ್ನು ಹಿಡಿದು ಎಳೆದುಕೊಂಡು ತುಟಿಗೆ ತುಟಿ ಒತ್ತಿ ಮುತ್ತು ಕೊಟ್ಟೇ ಬಿಟ್ಟರು. ಈ ಹಿಂದೆ ಇದೇ…
ಡೆಲ್ಲಿ ಬೆಡಗಿಗೆ ಕ್ಲೀನ್ ಬೋಲ್ಡ್ ಆದ್ರಾ ಅಭಿಷೇಕ್ ಶರ್ಮಾ? ಟೀಂ ಇಂಡಿಯಾದ ಯಂಗ್ ಓಪನರ್ ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ(IPL) ಸನ್‌ರೈಸರ್ಸ್ ಪರ ಆಡಿದ ನಂತರ ಟೀಮ್ ಇಂಡಿಯಾಗೆ ಪ್ರವೇಶಿಸಿದರು. ಅದರಲ್ಲೂ 2024ರ ಸೀಸನ್ ನಲ್ಲಿ ತಮ್ಮ ಆಕ್ರಮಣಕಾರಿ ಪ್ರದರ್ಶನದಿಂದ ಎಲ್ಲರ ಮನಗೆದ್ದಿದ್ದರು ಅಭಿಷೇಕ್ ಶರ್ಮಾ(Abhishek Sharma). ಈಗ ಇಂಗೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ… ಸಧ್ಯ ಅವರ ಲವ್ ಸ್ಟೋರಿ ವಿಚಾರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ವಾಂಖೆಡೆ ಅಂಗಳದಲ್ಲಿ ಬೌಂಡರಿಗಳ ಬೋರ್ಗರೆತ, ಸಿಕ್ಸರ್ಗಳ ಸುರಿಮಳೆ ಸುರಿಸಿದ ಯುವ ಆಟಗಾರ ಜಸ್ಟ್ 37 ಎಸೆತಕ್ಕೆ ಬಂದ ಸೆಂಚುರಿ ಚಚ್ಚಿ ಬಿಸಾಕಿದ್ರು. ಈ ಸೆನ್ಸೇಷನಲ್ ಶತಕದ ಬಳಿಕ ಸೆಂಚುರಿ ಸ್ಟಾರ್ ಸಿಂಗಲ್ಲಾ? ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ ನಡೆದಿದೆ. ಅಭಿಷೇಕ್ ಶರ್ಮಾ ಹೆಸ್ರಿನ ಜೊತೆ ಹಿಂದೆ ಹಲವು ಯುವತಿಯರ ಹೆಸರು ತಳುಕು ಹಾಕಿಕೊಂಡಿದ್ದು ಗೊತ್ತಿರಬಹುದು. ಆದ್ರೀಗ ಅಭಿಷೇಕ್ ಲೈಫಲ್ಲಿ ಹೊಸ ಹುಡುಗಿಯ ಎಂಟ್ರಿಯಾಗಿದೆ. ಡೆಲ್ಲಿ…
ಮತ್ತೊಂದು ಮದುವೆಯಾಗಲು ಸಜ್ಜಾದ್ರಾ ಸಮಂತಾ? ನಾಗ ಚೈತನ್ಯ ಮತ್ತು ಸಮಂತಾ(Samantha) 2017 ರಲ್ಲಿ ವಿವಾಹವಾದರು. ಆದರೆ ದಂಪತಿಗಳು ಕೆಲವು ವರ್ಷಗಳ ಭಿನ್ನಾಭಿಪ್ರಾಯದ ನಂತರ ಅಕ್ಟೋಬರ್ 2021 ರಲ್ಲಿ ವಿಚ್ಚೇದನ ಪಡೆದು ದೂರಾಗಿದ್ದಾರೆ… ವಿಚ್ಛೇದನದ ನಂತರ ಸಮಂತಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಸಮಂತಾ ಎರಡನೇ ಮದುವೆ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡ್ತಿದೆ…. ಖ್ಯಾತ ನಿರ್ದೇಶಕನ ಜತೆ ಸಮಂತಾ ಹೆಸರು ತಳುಕು ಹಾಕಿಕೊಂಡಿದೆ.. ಸಮಂತಾ(Samantha) ಮತ್ತೆ ಮದುವೆಯಾಗುವುದಿಲ್ಲ ಎಂದು ಎಲ್ಲೂ ಹೇಳುತ್ತಿಲ್ಲ. ಸಮಂತಾ ಎರಡನೇ ಮದುವೆಯ ಸುದ್ದಿಯೊಂದು ಇದೀಗ ಸಂಚಲನ ಮೂಡಿಸಿದೆ. ಕೆಲ ದಿನಗಳಿಂದ ಬಾಲಿವುಡ್ ನಲ್ಲಿ ನಿರ್ದೇಶಕರೊಬ್ಬರ ಜೊತೆ ಸಮಂತಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ನಿರ್ದೇಶಕ ಬೇರೆ ಯಾರೂ ಅಲ್ಲ ರಾಜು ನಿಡುಮೋರು. ರಾಜು ನಿಡುಮೋರು ನಿರ್ದೇಶನದ ಸಮಂತಾ ಅಭಿನಯದ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್‌ನಲ್ಲಿ ಸ್ಯಾಮ್ ನಟಿಸಿದ್ದರು.. ಈ ವೇಳೆ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿದ್ದು, ಇವರಿಬ್ಬರು ಬಹಳ ದಿನಗಳಿಂದ ಡೇಟಿಂಗ್…
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ವಿಶ್ವಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ 5 ವರ್ಷಗಳೇ ಕಳೆದಿವೆ. ಆದರೂ ಅವರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಸದ್ಯ, ಐಪಿಎಲ್‌ನಲ್ಲಿ ಮಾತ್ರ ಧೋನಿ ಕಾಣಿಸಿಕೊಳ್ಳುತ್ತಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಐಸಿಸಿಯ ಮೂರು ಕಪ್ ಗೆದ್ದ ವಿಶ್ವದ ಏಕೈಕ ನಾಯಕ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಕೇವಲ ಉತ್ತಮ ನಾಯಕ ಮಾತ್ರವಲ್ಲದೇ ಬೆಸ್ಟ್ ಫಿನಿಶರ್ ಜೊತೆಗೆ ಉತ್ತಮ ವಿಕೆಟ್ ಕೀಪರ್ ಆಗಿಯೂ ಹಲವಾರು ದಾಖಲೆಗಳನ್ನು ಅವರು ಬರೆದಿದ್ದಾರೆ. ಇದೀಗ ಧೋನಿ ರಾಜಕೀಯ ಎಂಟ್ರಿ ಕೊಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಹೌದು, ಹಲವು ವರ್ಷಗಳಿಂದಲೂ ಧೋನಿ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಮತ್ತೆ ಈ ವಿಚಾರ ಮುನ್ನಲೆಗೆ ಬಂದಿದೆ. ಆದರೆ ಧೋನಿ…
ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳ ದಂಡೇ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದು, ನಿನ್ನೆಯ ರೀತಿ ಇಂದು ಬೆಳಿಗ್ಗೆ ನೂಕುನುಗ್ಗಲು ಉಂಟಾಗಿದೆ. ಪಂದ್ಯದ ನಡುವೆಯೇ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ(Virat Kohli) ಕಾಲಿಗೆ ಬಿದ್ದಿದ್ದಾರೆ. ದೆಹಲಿ ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದು, ರೈಲ್ವೇಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಸ್ಟೇಡಿಯಂನ ಹೊರಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಗುನುಗ್ಗಲು ಉಂಟಾಯಿತು. ಆರಂಭದಲ್ಲಿ, ಪ್ರವೇಶಕ್ಕಾಗಿ ಒಂದು ಗೇಟ್ ಮಾತ್ರ ತೆರೆದಿತ್ತು ಮತ್ತು ಜನರು ಕ್ರೀಡಾಂಗಣದೊಳಗೆ ಪ್ರವೇಶಿಸಲು ಪರಸ್ಪರ ತಳ್ಳಲು ಪ್ರಾರಂಭಿಸಿದರು. ಹೀಗಾಗಿ ಕೂಡಲೇ ಹೆಚ್ಚುವರಿ ಗೇಟ್‌ಗಳನ್ನು ತೆರೆಯಲಾಯಿತು. ಪರಿಸ್ಥಿತಿಯನ್ನು ಸುಗಮಗೊಳಿಸಲಾಯಿತು. ಮೊದಲಿಗೆ, DDCA ಸುಮಾರು 6,000 ಆಸನ ಸಾಮರ್ಥ್ಯದ ಗೌತಮ್ ಗಂಭೀರ್ ಸ್ಟ್ಯಾಂಡ್ ಅನ್ನು ವೀಕ್ಷಕರಿಗೆ ತೆರೆಯಿತು. ಆದರೆ, ಪ್ರೇಕ್ಷಕರು ಹೆಚ್ಚಿದ್ದ ಕಾರಣ ಪರಿಸ್ಥಿತಿ ಕೈ ಮೀರಬಹುದೆಂದು ಗ್ರಹಿಸಿದ ಅಧಿಕಾರಿಗಳು…
ಮೈಸೂರು ಒಡೆಯರ್(Wodeyar) ಮನೆತನದ ವಿರುದ್ಧ ಸಮರ ಸಾರಿದ್ದ ಸಿಎಂ ಸಿದ್ದರಾಮಯ್ಯ ಈಗ ಗೆದ್ದು ಬೀಗಿದ್ದಾರೆ.. ಬೆಂಗಳೂರು ಅರಮನೆ (Bangalore Palace) ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿರುವ ಅರಮನೆಯ ನೂರಾರು ಎಕರೆ ಹಾಗೂ ಕೋಟ್ಯಂತರ ರೂಪಾಯಿ ಆದಾಯ ಸರ್ಕಾರದ ಪಾಲಾಗಿದೆ.. ರಾಜರ ವಿರೋಧದ ಮಧ್ಯೆಯೂ ಸರ್ಕಾರದ ಸುಪರ್ದಿಗೆ ಆಸ್ತಿ!ಮೈಸೂರು ರಾಜಮನೆತನದ ವಿರೋಧದ ಮಧ್ಯೆಯೂ ಸರ್ಕಾರ ಈ ಆದೇಶ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ರಾಜವಂಶಸ್ಥರಿಗೆ ಟಿಡಿಆರ್ ನೀಡದಿರಲು ಸರ್ಕಾರ ನಿರ್ಧರಿಸಿದೆ. ಕಳೆದ ಸಂಪುಟದಲ್ಲಿ ಟಿಡಿಆರ್ ನೀಡದಿರಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅರಮನೆ (Bangalore Palace) ಭೂ ಕಬಳಿಕೆ ಮತ್ತು ನಿಯಂತ್ರಣ ಅಧ್ಯಾದೇಶ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅರಮನೆಯ ಭೂಮಿ ಎಷ್ಟು ಎಕರೆ? ಆದಾಯ ಎಷ್ಟು..?ರಾಜ್ಯ ಸರ್ಕಾರ ಬೆಂಗಳೂರು ಅರಮನೆಯ (Bangalore Palace) ಆಸ್ತಿಯ ಮೇಲೆ ಹಕ್ಕು ಸಾಧಿಸಿದೆ. ಅರಮನೆಯ ಭೂಮಿ ಮತ್ತು ಅದ್ರಿಂದ ಬರುತ್ತಿದ್ದ ಆದಾಯವನ್ನು…
ರಾಜ್ಯ ಕಾಂಗ್ರೆಸ್‌ನಲ್ಲೀಗ ಮತ್ತೊಂದು ಸುತ್ತಿನ ವಾರ್ ಶುರುವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್(DK Sivakumar) ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ತಣ್ಣಗಾಗಿದ್ದ ಹೊಗೆ ಈಗ ಜ್ವಾಲೆಯಾಗಿ ಧಗಧಗಿಸುತ್ತಿದೆ. ಇದರ ಪರಿಣಾಮ ಏನಾಗಿದೆ ಅಂದ್ರೆ ಬ್ರೇಕ್ ಬಿದ್ದಿದ್ದ ಸತೀಶ್ ಜಾರಕಿಹೊಳಿಯವರ ದುಬೈ ಪ್ರವಾಸದ ಪ್ಲ್ಯಾನ್ ಮತ್ತೆ ಚಾಲ್ತಿಗೆ ಬಂದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಡಿಕೆಶಿ-ಸತೀಶ್ ಮಧ್ಯೆ ಮತ್ತೊಂದು ಸುತ್ತಿನ ಯುದ್ಧ..! ಬೆಳಗಾವಿ ರಾಜಕೀಯಕ್ಕೆ ಡಿಸಿಎಂ ಡಿಕೆಶಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಿರುಸುಗೊಂಡಿದ್ದ ಬಣ ಕಿತ್ತಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶ ಮತ್ತು ವಾರ್ನಿಂಗ್ ಬಳಿಕ ತುಸು ತಣ್ಣಗಾದಂತೆ ಕಂಡಿದ್ದ ಬಣ ಸಂಘರ್ಷ ಈಗ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. ಯಾಕಂದ್ರೆ, ಸಚಿವ ಸತೀಶ್(Satish Jarakiholi) ಜಾರಕಿಹೊಳಿ ಬಣದ 15 ಶಾಸಕರ ತಂಡ ತೆರೆ ಮರೆಯಲ್ಲೇ ದುಬೈ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.. ಡಿಕೆಶಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸತೀಶ್ ಜಾರಕಿಹೊಳಿಕಾಂಗ್ರೆಸ್‌ನಿಂದ…
ಉತ್ತರ ಪ್ರದೇಶದ (Uttar Pradesh) ಪ್ರಯಾಗ್ ರಾಜ್‌ನಲ್ಲಿ(Prayag Raj) ನಡೆಯುತ್ತಿರುವ ಜಾಗತೀಕ ಮಟ್ಟದ ಹಿಂದೂ ಧರ್ಮದ ಅತ್ಯಂತ ಬೃಹತ್ ಉತ್ಸವ ಮಹಾ ಕುಂಭಮೇಳ ಹದಿನಾರು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೇಳನೇ ದಿನಕ್ಕೆ ಕಾಲಿಟ್ಟಿದ್ದೆ. ಈವರೆಗೂ ಶಾಂತಿಯುತವಾಗಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಇಂದು ಅವಘಡ ಸಂಭವಿಸಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ(Prayag Raj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಾಘ ಮಾಸದ ಅಮಾವಾಸ್ಯೆ/ ಮೌನಿ ಅಮಾವಾಸ್ಯೆಯ ಇಂದು ಸಂಗಮ್‌ನಲ್ಲಿ ಪುಣ್ಯ ಸ್ನಾನದ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದಾರೆ. ಭಾರತದ ಮೂರು ಪವಿತ್ರ ನದಿಗಳು ಒಟ್ಟಿಗೆ ಸೇರುವ ಈ ಸಂಗಮದಲ್ಲಿ ಮೌನಿ ಅಮಾವಾಸ್ಯೆಯಂದು ಪುಣ್ಯ ಸ್ನಾನಕ್ಕಾಗಿ ಕೋಟ್ಯಾಂತರ ಭಕ್ತಾಧಿಗಳು ಕೂಡ ನೆರೆದಿದ್ದಾರೆ. ಈ ಸಂದರ್ಭದಲ್ಲಿ ಸಂಗಮ್ನಿಂದ ಸುಮಾರು ಒಂದು ಕಿಲೋಮೀಟರ್ ವರೆಗೂ ಜನಸಂದಣಿ ಮಧ್ಯೆ ಬ್ಯಾರಿಕೇಡ್‌ಗಳು ಮುರಿದು ಕೆಲವು ಮಹಿಳೆಯರು…