Author: Theertha

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg boss kannada 11) ಟ್ವಿಸ್ಟ್ ಮೇಲೆ ಟ್ವಿಸ್ಟ್​ಗಳು ಸಿಕ್ಕಿವೆ. ದಿನದಿಂದ ದಿನಕ್ಕೆ ರೋಚಕತೆ ಮೂಡುತ್ತಿದ್ದು, ಸ್ಪರ್ಧಿಗಳ ನಡುವೆ ಈಗ ಭಾರೀ ಪೈಪೋಟಿ ನಡಿತಿದೆ. ಅದರಲ್ಲೂ ಬಿಗ್‌ ಮನೆಯಲ್ಲಿ ಮಹಿಳಾ ಮಣಿಯರಾದ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ನಡುವೆ ಇರುವ ಮನಸ್ತಾಪ ದೊಡ್ಡದಾಗಿದೆ. ನಿನ್ನೆ ಬಿಗ್‌ಬಾಸ್‌ ನೀಡಿದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ವಾಭಿಮಾನವನ್ನು ಬಿಟ್ಟು ಗೌತಮಿ(Gautami) ಎದುರು ಸಹಾಯ ಪಡೆಯಲ್ಲ ಎಂದು ಮೋಕ್ಷಿತಾ(Mokshita) ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ರು. ಅವರ ಈ ನಿರ್ಧಾರದಿಂದ ಕ್ಯಾಪ್ಟೆನ್ಸಿ ಟಾಸ್ಕ್​ ಆಟದ ಅವಕಾಶ ಅವರಿಗೆ ಮಿಸ್​ ಆಗಿತ್ತು. ವೀಕ್ಷಕರ ವೋಟ್​ಗೆ ಬೆಲೆ ನೀಡಿಲ್ಲ ಎಂಬ ಕಾರಣಕ್ಕೆ ಬಿಗ್ ಬಾಸ್ ಮೋಕ್ಷಿತಾಗೆ ಎಚ್ಚರಿಕೆ ನೀಡಿದ್ರು. ಆದ್ರೆ ತಮಗೆ ಸಿಕ್ಕ ಅವಕಾಶವನ್ನ ಸರಿಯಾಗೇ ಬಳಸಿಕೊಂಡ ಗೌತಮಿ(Gautami) ಈಗ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಇದನ್ನ ಮೋಕ್ಷಿತಾಗೆ ತಡೆದುಕೊಳ್ಳಲು ಆಗದೆ. ನಾನು ಈ ವಾರ ತಲೆಕೆಡಿಸಿಕೊಳ್ಳ ಎಂಬ ಉಡಾಫೆಯ ಮಾತನ್ನಾಡಿದ್ದಾರೆ. ಆರಂಭದಲ್ಲಿ ಗೌತಮಿ…

Read More

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಫೆಂಗಲ್‌ ಚಂಡಮಾರುತ ತೀವ್ರತೆ ಪಡೆದಿದ್ದು, ಇಂದು ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ಗುಡುಗು ಸಹಿತ ಮಳೆ ಎದುರಿಸುತ್ತಿರುವ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ತೀವ್ರ ಚಂಡಮಾರುತವಾಗಿ ಗಂಟೆಗೆ 70ರಿಂದ 80 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಚಂಡಮಾರುತ ನೆಲೆಯಾಗುವ ಸಮಯದಲ್ಲಿ ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಹೇಳುತ್ತಾರೆ. ಶಾಲಾ-ಕಾಲೇಜುಗಳಿಗೆ ರಜೆ; ರೆಡ್‌ ಅಲರ್ಟ್..! ಅಲ್ಲದೇ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ತಮಿಳುನಾಡು, ಪುದುಚೇರಿಯ ಜೊತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್‌ ಅಲರ್ಟ್‌ ಘೋಷಿಸಿದೆ. ತಮಿಳುನಾಡು ರಾಜ್ಯ ಸರ್ಕಾರ ಚೆನ್ನೈ,…

Read More