ನಿನ್ನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ( Ahmedabad plane crash ) ಭೀಕರ ಏರ್ ಇಂಡಿಯಾ ವಿಮಾನ ದುರಂತ, ಭಾರತ ಮಾತ್ರವಲ್ಲದೇ ಇಡೀ ಜಗತ್ತನ್ನು ದುಃಖದ ಕೂಪಕ್ಕೆ ತಳ್ಳಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ದುರಂತ ಅಂತ್ಯ ಕಂಡಿದೆ. ಸದ್ಯಕ್ಕೆ ಈ ಅಪಘಾತದಿಂದ 241 ಜನರು ಬಲಿಯಾಗಿದ್ದು, ಇನ್ನು ನಿಖರವಾದ ಮೃತರ ಸಂಖ್ಯೆ ಗೊತ್ತಾಗಿಲ್ಲ.
ಈ ವಿಮಾನ ದುರಂತದಲ್ಲಿ ಅನೇಕರು ತಮ್ಮ ಕುಟುಂಬದವರನ್ನ ಕಳೆದುಕೊಂಡರೆ, ಒಂದು ಕುಟುಂಬವೇ ಸರ್ವಾನಾಶವಾಗಿದೆ. ಗುರುವಾರ 242 ಜನರನ್ನ ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊತ್ತೊಯ್ಯುತ್ತಿದ್ದ ವಿಮಾನ ಹಾರಿದ ಕೆಲವೆ ಕ್ಷಣದಲ್ಲಿ ನೆಲಕಪ್ಪಳಿಸಿ ಬೆಂಕಿಗೆ ಆಹುತಿಯಾಗಿತ್ತು. ಈ ವಿಮಾನದಲ್ಲಿ ಲಂಡನ್‌ಗೆ ತೆರಳುತ್ತಿದ್ದ ರಾಜಸ್ಥಾನದ ಪ್ರತೀಕ್ ಜೋಶಿ ಕುಟುಂಬವು ಸಂಪುರ್ಣ ಬೆಂಕಿಗೆ ಆಹುತಿಯಾಗಿದ್ದಾರೆ.
ಲಂಡನ್‌ನಲ್ಲಿ ಆರು ವರ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರತೀಕ್ ಜೋಶಿ, ತನ್ನ ಕುಟುಂಬದವರ ಜೊತೆ ಲಂಡನ್‌ನಲ್ಲಿ ವಾಸಿಸಲು ತಯಾರಿ ನಡೆಸಿದ್ದರು. ಡಾ ಕೋಮಿ ವ್ಯಾಸ್ ಲಂಡನ್‌ಗೆ ಹೋಗುವ ಕಾರಣ ತಮ್ಮ ಕೆಲಸವನ್ನ ಎರಡು ದಿನದ ಹಿಂದೆಯಷ್ಟೇ ಬಿಟ್ಟು ಲಂಡನ್‌ಗೆ ಹೋಗುವ ತಯಾರಿ ನಡೆಸಿದ್ದರು.
ಪ್ರತೀಕ್ ಜೋಶಿ ಹಾಗೂ ಡಾ ಕೋಮಿ ವ್ಯಾಸ್ ದಂಪತಿಗೆ ಮೂವರು ಮಕ್ಕಳಿದ್ದು, ಒಂದು ಹೆಣ್ಣು ಹಾಗೂ ಇಬ್ಬರು ಅವಳಿ ಗಂಡುಮಕ್ಕಳು. ಆದರೆ ಗುರುವಾರ ನಡೆದ ಏರ್ ಇಂಡಿಯಾ ದುರಂತ ಈ ಕುಟುಂಬವನ್ನೇ ನುಂಗಿ ಹಾಕಿದೆ. ಫ್ಲೈಟ್ ಟೇಕಾಫ್‌ಗೂ ಮುನ್ನ ಕೊನೆ ಕ್ಷಣದಲ್ಲಿ ಅವರು ಕುಟುಂಬದೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು, ಪೋಸ್ಟ್ ಮಾಡಿದ್ದಾರೆ.
Read Also: ಜೀವ ಉಳಿಸಿದ ʻಆʼ 10 ನಿಮಿಷ..! ಟ್ರಾಫಿಕ್‌ನಿಂದ ಮಹಿಳೆ ಬದುಕಿದ್ದೇ ಪವಾಡ
ಅವರ ಕೊನೆ ಕ್ಷಣದ ಸೆಲ್ಫಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ತೆಗೆದ ಸಾಫ್ಟ್‌ವೇರ್ ಕುಟುಂಬದ ಸೆಲ್ಫಿ ವೈರಲ್ ಆಗುತ್ತಿದ್ದು, ಈ ದುರಂತಕ್ಕೆ ಇಡೀ ಕುಟುಂಬವೇ ಸರ್ವನಾಶವಾಗಿದೆ. ಇವರ ಸಾವು ಕುಟುಂಬಸ್ಥರಿಗೆ ಹಾಗೂ ಎಲ್ಲರನ್ನು ದುಖಃದ ಮಡುವಿನಲ್ಲಿ ಮಲಗಿಸಿದೆ..