Site icon BosstvKannada

ನಟಿ Namrata ಗೌಡಗೆ ಡೇಟಿಂಗ್ ಕಿರುಕುಳ : ಟಾರ್ಚರ್ ಕೊಟ್ಟ ಅಪರಿಚಿತ

Namrata Gowda: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ನಟಿ ನಮ್ರತಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ನಮ್ರತಾ ಅವರಿಗೆ ಅಸಭ್ಯವಾದ ಮೆಸೇಜ್‌ಗಳನ್ನ ಕಳಿಸಿದ್ದು, ಕೋಪಗೊಂಡ ನಟಿ ತನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಮೆಸೆಜ್‌ಗಳ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿಕೊಂಡಿದ್ದಾರೆ.

ನಟಿ ನಮ್ರತಾ ಅವರಿಗೆ ವ್ಯಕ್ತಿಯೊಬ್ಬ ಪದೇ ಪದೇ ಸಂದೇಶ ಕಳಿಸಿ ಟಾರ್ಚರ್ ಕೊಟ್ಟಿದ್ದಾನೆ. ಒಂದೇ ರೀತಿಯ ಮೆಸೇಜ್‌ಗಳು 2-3 ಬಾರಿ ಕಳುಹಿಸಲಾಗಿದೆ. ಮೊದಲು, ಎರಡನೇ ಬಾರಿ ನಿರ್ಲಕ್ಷ್ಯ ಮಾಡಿದ್ದ ನಮ್ರತಾ, ಇದೀಗ ಕಿಡಿಗೇಡಿಗಳ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.

ರಾಕಿ ಜಿ43 (Rocky.g43) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಿಂದ Namrata Gowda ಅವರಿಗೆ ಈ ಮೆಸೇಜ್‌ಗಳು ಬಂದಿದೆ. ನೇರವಾಗಿ ನನಗೆ ಸಾಕಷ್ಟು ರಾಜಕಾರಣಿಗಳ ಜೊತೆ ನಂಟು ಇದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್​ಗೆ ಬರಲು ಇಚ್ಛೆ ಇದೆಯಾ? ಅಂತ ನಮ್ರತಾ ಅವರನ್ನು ಕೇಳಿದ್ದಾರೆ. ಡೇಟಿಂಗ್​ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ಸಹ ಒತ್ತಾಯಿಸಲಾಗಿದೆ.

ನಾನು ಅವನ ರಿಕ್ವೆಸ್ಟ್ ಮೆಸೇಜ್‌ಗಳನ್ನ ಒಪ್ಪಿಕೊಂಡಿಲ್ಲ. ಇವತ್ತು ನನ್ನ ರಿಕ್ವೆಸ್ಟ್ ಮೆಸೇಜ್‌ಗಳ ಲಿಸ್ಟ್ ನೋಡುವಾಗ ಇದು ನನ್ನ ಕಣ್ಣಿಗೆ ಬಿತ್ತು. ಹೀಗಾಗಿ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದೇನೆ. ಇಂತಹ ತುಂಬಾ ಮೆಸೇಜ್‌ಗಳು ಬರುತ್ತಾ ಇರ್ತಾವೆ. ಬಂದಾಗ ನಿರ್ಲಕ್ಷಿಸಿ ನಾವು ಮುಂದೆ ಹೋಗುತ್ತೇವೆ.

Also Read: ಮಗನಿಗಾಗಿ ಲಾಲಿ ಹಾಡಿದ ನಟಿ Haripriya: ವಿಡಿಯೋ ವೈರಲ್!

ಈ ಬಾರಿ ನಿರ್ಲಕ್ಷ್ಯ ಮಾಡಿದ್ರೂ ಇವರಿಗೆ ಭಯ ಹುಟ್ಟಲ್ಲ ಎಂದು ನಾನು ಇವತ್ತು ಇನ್ಸ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿ ಬಹಿರಂಗ ಮಾಡಿದ್ದೇನೆ. ಇನ್ನು ಮುಂದೆ ಬೇರೆ ಯಾರು ಯಾರಿಗೂ ಈ ರೀತಿಯ ಮೆಸೇಜ್ ಹಾಕಬಾರದು ಅಂತ ಈ ರೀತಿ ಮಾಡಿದ್ದೇನೆ ಅಂತ ಹೇಳಿಕೊಂಡಿದ್ದಾರೆ.

Exit mobile version