Site icon BosstvKannada

ಮಗನಿಗಾಗಿ ಲಾಲಿ ಹಾಡಿದ ನಟಿ Haripriya: ವಿಡಿಯೋ ವೈರಲ್!

ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ ದಂಪತಿಗೆ ಇದೇ ವರ್ಷದಾರಂಭದಲ್ಲಿ ಮುದ್ದಾದ ಗಂಡು ಮಗು ಜನಿಸಿದೆ. ನಟಿ ಹರಿಪ್ರಿಯಾ ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ.

ನಟಿ ಹರಿಪ್ರಿಯಾ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಗುವಿಗೆ ರಾಮನ ಹಾಡು ಹೇಳಿ ಮಲಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನಟಿ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishtha Simha), ಪೆರೆಂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ಮುದ್ದು ಮಗನಿಗೆ ಪಾಲಕರಾಗಿರುವ ಸೆಲೆಬ್ರಿಟಿ ಜೋಡಿ, ಮಗು ಜೊತೆಗಿರುವ ಅನೇಕ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ.

Also Read: Balochistan Independence : ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ ; ಹೊಸ ನಕ್ಷೆ, ಧ್ವಜ ಪ್ರದರ್ಶಿಸಿ ಸಂಭ್ರಮ!

ಮದರ್ಸ್ ಡೇ ಸಂದರ್ಭದಲ್ಲಿ ಹರಿಪ್ರಿಯಾ ಮುದ್ದಾದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲ ಅಮ್ಮಂದಿರಂತೆ ಹರಿಪ್ರಿಯಾ ಮಗನಿಗೆ ಲಾಲಿ ಹಾಡು ಹೇಳ್ತಾ ಮಲಗಿಸುತ್ತಿರೋದನ್ನು ನೀವು ನೋಡ್ಬಹುದು. ಹರಿಪ್ರಿಯಾ ಹೇಳಿದ ಲಾಲಿ ಹಾಡು ಎಲ್ಲರ ಗಮನ ಸೆಳೆದಿದೆ. ಹರಿಪ್ರಿಯಾ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.


Exit mobile version