Site icon BosstvKannada

Balochistan Independence : ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ ; ಹೊಸ ನಕ್ಷೆ, ಧ್ವಜ ಪ್ರದರ್ಶಿಸಿ ಸಂಭ್ರಮ!

ದೀರ್ಘ ಸಮಯದಿಂದಲೂ ಪಾಕಿಸ್ತಾನದಿಂದ ಮುಕ್ತರಾಗಲು ಬಲೂಚಿಸ್ತಾನ ಹೋರಾಡ್ತಿತ್ತು. ಕೊನೆಗೂ ಆ ಕ್ಷಣ ಈಗ ಕೂಡಿ ಬಂದಿದ್ದು, ಇದೀಗ ಬಲೂಚ್‌ ಖುದ್ದಾಗಿ ಸ್ವಾತಂತ್ರ್ಯ (Balochistan independence) ಘೋಷಿಸಿಕೊಂಡಿದೆ. ನಾವು ಪಾಕಿಸ್ತಾನದಿಂದ ಪ್ರತ್ಯೇಕವಾಗಿದ್ದೇವೆ ಎಂದು ಬಲೂಚಿಸ್ತಾನದ ನಾಯಕರು ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ್ಯ ಘೋಷಣೆ ಬೆನ್ನಲ್ಲೇ ‘ರಿಪಬ್ಲಿಕ್ ಬಲೂಚಿಸ್ತಾನ’ (‘Republic of Balochistan’) ಅಂತಾ ಬಲೂಚ್ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸ್ವತಂತ್ರ ಬಲೂಚಿಸ್ತಾನವನ್ನು ಭಾರತ ಮತ್ತು ವಿಶ್ವಸಂಸ್ಥೆ ನಮ್ಮನ್ನು ಗುರುತಿಸಿ ಮಾನ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಭಾರತಕ್ಕೆ ಬೆಂಬಲಿಸಿದ ಬಲೂಚಿಸ್ತಾನ, ದೆಹಲಿಯಲ್ಲಿ ಅಧಿಕೃತ ರಾಯಭಾರ ಕಚೇರಿ ತೆರೆಯಲು ಅವಕಾಶ ಕೊಡಬೇಕು ಎಂದು ಬಲೂಚ್ ನಾಯಕರು ಮನವಿ ಮಾಡಿದ್ದಾರೆ. ಬಲೂಚ್ ಹೋರಾಟಗಾರ ಮೀರ್ ಯಾರ್ ಬಲೂಚ್​ (Mir Yar Baloch) ಭಾರತಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ.

ಪಾಕ್ ವಿರುದ್ಧ ಅಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲ ಇದೆ. ಪಿಒಕೆಯನ್ನು ಪಾಕಿಸ್ತಾನ ಖಾಲಿ ಮಾಡಬೇಕೆಂಬ ಭಾರತದ ಆಗ್ರಹಕ್ಕೆ ಬಲೂಚ್ ಬೆಂಬಲಿಸುತ್ತೆ. ನರೇಂದ್ರ ಮೋದಿ ಅವರೇ ನೀವು ಏಕಾಂಗಿಯಲ್ಲ, ನಿಮ್ಮ ಹಿಂದೆ ಬಲೂಚಿಸ್ತಾನದ 60 ಮಿಲಿಯನ್ ಜನರಿದ್ದಾರೆ ಎಂದಿದ್ದಾರೆ.

Also Read: Dinesh Gundu Rao : ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ರಾಜ್ಯ ಸರ್ಕಾದಿಂದಲೇ ನಿರ್ವಹಣೆ!

ಸ್ವಾತಂತ್ರ್ಯ ಘೋಷಿಸಿಕೊಂಡ ಬೆನ್ನಲ್ಲೇ ಬಲೂಚ್ ನಾಯಕರು ಪ್ರತ್ಯೇಕ ಬಲೂಚ್ ನಕ್ಷೆ, ಧ್ವಜವನ್ನು ಪ್ರದರ್ಶಿಸಿದ್ದಾರೆ. ಪಾಕಿಸ್ತಾನ ಸರ್ಕಾರ, ಸೇನೆಯ ದೌರ್ಜನ್ಯದ ವಿರುದ್ಧ ಬಲೂಚ್ ಜನರು ದಶಕಗಳಿಂದ ಹೋರಾಟ ನಡೆಸುತ್ತಿದ್ದರು.

Exit mobile version