Site icon BosstvKannada

ನಟಿ ಭಾವನ ರಾಮಣ್ಣಗೆ ಹೆಣ್ಣು ಮಗು ಜನನ, ಒಂದು ಮಗು ನಿಧನ!

ಐವಿಎಫ್‌ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣಗೆ ಆಘಾತವೂ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ನಟಿ ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.

ನಟಿ ಭಾವನಾ ರಾಮಪ್ಪ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ದುರ್ವಿಧಿ ಒಂದು ಮಗು ಮೃತಪಟ್ಟಿದ್ದು ಮತ್ತೊಂದು ಮಗು ತಾಯಿ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ನಟಿ ಭಾವನಾ ಗರ್ಭಿಣಿಯಾಗಿ 7 ತಿಂಗಳ ಪೂರ್ಣಗೊಳಿಸುತ್ತಿದ್ದಂತೆಯೇ ಒಂದು ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯಂತೆ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಈ ವೇಳೆ ಒಂದು ಮಗು ಮೃತಪಟ್ಟಿದೆ. ಇದೀಗ ಹೆಣ್ಣು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

40 ವರ್ಷದ ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯಿಯಾಗುವ ಸಂಭ್ರಮದಲ್ಲಿದ್ದು ಅದೂ ಅವಳಿ ಜವಳಿ ಮಕ್ಕಳಿಗೆ. ಮದುವೆಯಾಗದೆ ಸಿಂಗಲ್ ಮದರ್ ಅನಿಸಿಕೊಳ್ಳುತ್ತಿರುವ ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳನ್ನು ತಮ್ಮ ಜೀವನಕ್ಕೆ ಬರಮಾಡಿಕೊಂಡಿದ್ದಾರೆ. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಒಂದು ಮಗು ಸಾವನ್ನಪ್ಪಿದೆ. ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ.

Read Also : ಸ್ಯಾಂಡಲ್‌ವುಡ್‌ಗೆ ಚಿನ್ನದ ಮೊಟ್ಟೆಯಾದ ರಾಜ್‌ ಬಿ. ಶೆಟ್ಟಿ : ಸು ಫ್ರಮ್ ಸೋ ಬೆನ್ನಲ್ಲೇ ಲೋಕಃ ಯಶಸ್ಸು..!

Exit mobile version