ಅಣ್ತಮ್ಮ ಇಲ್ಲಿ ಯಾರು ಬೆಳೆಸಲ್ಲ, ನಾವೇ ಬೆಳಿಬೇಕು. ಈ ಡೈಲಾಗ್ ಸದ್ಯ ನಮ್ಮ ರಾಜ್ ಬಿ ಶೆಟ್ರಗೆ ಪಕ್ಕಾ ಸೂಟ್ ಆಗುತ್ತೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸ್ಟಾರ್ ನಟರಿಗೆ ಸಪೋರ್ಟ್ ಇಲ್ಲದೇ, ಒಂದು ಮೊಟ್ಟೆಯ ಕಥೆ ಮೂಲಕ ಸಕ್ಸಸ್ ಜರ್ನಿ ಶುರು ಮಾಡಿದ್ದ ಶೆಟ್ರು, ಸದ್ಯ ಸು ಫ್ರಮ್ ಸೋ ಮೂಲಕ ಇಡೀ ಇಂಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿ, ಕನ್ನಡ ಚಿತ್ರರಂಗಕ್ಕೆ ಚಿನ್ನದ ಮೊಟ್ಟೆಯಾಗಿದ್ದಾರೆ. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿ, ಭರ್ಜರಿ ಯಶಸ್ಸು ಪಡೆದಿದ್ದಾರೆ.
ಸು ಫ್ರಮ್ ಸೋ ಸಿನಿಮಾಗೆ ನಿರ್ಮಾಪಕರಾಗಿ ಕೋಟಿ ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದು ಎಲ್ಲರಿಗೂ ಗೊತ್ತು. ಈಗ ವಿತರಕರಾಗಿ ಹೊಸ ಹೆಜ್ಜೆ ಇಟ್ಟಿದ್ದ ಶೆಟ್ರಿಗೆ ಮತ್ತೆ ಅದೃಷ್ಟ ಹುಡಿಕೊಂಡು ಬಂದಿದೆ. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ದುಲ್ಖರ್ ಸಲ್ಮಾನ್ ನಿರ್ಮಾಣದ ಲೋಕಃ ಸಿನಿಮಾನ ಕರ್ನಾಟಕದಲ್ಲಿ ರಾಜ್ ಅವರು ಹಂಚಿಕೆ ಮಾಡುತ್ತಿದ್ದಾರೆ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಆರೇ ದಿನಕ್ಕೆ ಚಿತ್ರದ ಬಜೆಟ್‌ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ. ಲೋಕಃ ಸಿನಿಮಾ ಕೊಚ್ಚಿಯಲ್ಲಿ ಮಾತ್ರವಲ್ಲದೆ ಬೆಂಗಳೂರಿನಲ್ಲೂ ಸಾಕಷ್ಟು ದೊಡ್ಡ ಯಶಸ್ಸು ಕಂಡಿದ್ದು, ಕರ್ನಾಟಕದಿಂದಲೂ ದೊಡ್ಡ ಮಟ್ಟದಲ್ಲಿ ಹಣ ಹರಿದು ಹೋಗುತ್ತಿದೆ. ರಾಜ್ ಅವರು ಈ ಚಿತ್ರದ ಮೂಲಕ ಹಂಚಿಕೆಯಲ್ಲೂ ಗೆಲುವು ಕಂಡಿದ್ದಾರೆ.
ಲೋಕಃ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಬಜೆಟ್ 30 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಸಿನಿಮಾದ ಕಲೆಕ್ಷನ್ ಆರು ದಿನಕ್ಕೆ 38.95 ಕೋಟಿ ರೂಪಾಯಿ ಆಗಿದೆ. ವಾರದ ದಿನಗಳಲ್ಲೂ ಸಿನಿಮಾನ ಜನರು ಮುಗಿ ಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಸೂಪರ್ ಹೀರೋ ಪಾತ್ರಗಳು ಎಂದಾಗ ಕೇವಲ ನಟರು ಮಾತ್ರ ಇರುತ್ತಿದ್ದರು. ಆದರೆ, ಇದೇ ಮೊದಲ ಭಾರಿಗೆ ನಟಿಯೊಬ್ಬರು ಸೂಪರ್ ಹೀರೋ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಲ್ಯಾಣಿ ಅವರ ಚಂದ್ರ ಪಾತ್ರ ಅನೇಕರಿಗೆ ಇಷ್ಟ ಆಗಿದೆ. ಈ ಸಿನಿಮಾ ಇನ್ನೂ ಕೆಲವು ವಾರ ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
Read Also : ಸಿಎಂ ಭೇಟಿಯಾದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್: ʼದಾದಾʼಗೆ ಕರ್ನಾಟಕ ಪ್ರಶಸ್ತಿ ಘೋಷಣೆಯಾಗುತ್ತಾ..?