ಡೆಲ್ಲಿ ಬೆಡಗಿಗೆ ಕ್ಲೀನ್ ಬೋಲ್ಡ್ ಆದ್ರಾ ಅಭಿಷೇಕ್ ಶರ್ಮಾ?
ಟೀಂ ಇಂಡಿಯಾದ ಯಂಗ್ ಓಪನರ್ ಅಭಿಷೇಕ್ ಶರ್ಮಾ ಐಪಿಎಲ್ನಲ್ಲಿ(IPL) ಸನ್ರೈಸರ್ಸ್ ಪರ ಆಡಿದ ನಂತರ ಟೀಮ್ ಇಂಡಿಯಾಗೆ ಪ್ರವೇಶಿಸಿದರು. ಅದರಲ್ಲೂ 2024ರ ಸೀಸನ್ ನಲ್ಲಿ ತಮ್ಮ ಆಕ್ರಮಣಕಾರಿ ಪ್ರದರ್ಶನದಿಂದ ಎಲ್ಲರ ಮನಗೆದ್ದಿದ್ದರು ಅಭಿಷೇಕ್ ಶರ್ಮಾ(Abhishek Sharma). ಈಗ ಇಂಗೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ… ಸಧ್ಯ ಅವರ ಲವ್ ಸ್ಟೋರಿ ವಿಚಾರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ವಾಂಖೆಡೆ ಅಂಗಳದಲ್ಲಿ ಬೌಂಡರಿಗಳ ಬೋರ್ಗರೆತ, ಸಿಕ್ಸರ್ಗಳ ಸುರಿಮಳೆ ಸುರಿಸಿದ ಯುವ ಆಟಗಾರ ಜಸ್ಟ್ 37 ಎಸೆತಕ್ಕೆ ಬಂದ ಸೆಂಚುರಿ ಚಚ್ಚಿ ಬಿಸಾಕಿದ್ರು. ಈ ಸೆನ್ಸೇಷನಲ್ ಶತಕದ ಬಳಿಕ ಸೆಂಚುರಿ ಸ್ಟಾರ್ ಸಿಂಗಲ್ಲಾ? ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ ನಡೆದಿದೆ. ಅಭಿಷೇಕ್ ಶರ್ಮಾ ಹೆಸ್ರಿನ ಜೊತೆ ಹಿಂದೆ ಹಲವು ಯುವತಿಯರ ಹೆಸರು ತಳುಕು ಹಾಕಿಕೊಂಡಿದ್ದು ಗೊತ್ತಿರಬಹುದು. ಆದ್ರೀಗ ಅಭಿಷೇಕ್ ಲೈಫಲ್ಲಿ ಹೊಸ ಹುಡುಗಿಯ ಎಂಟ್ರಿಯಾಗಿದೆ.
ಡೆಲ್ಲಿ ಬೆಡಗಿಗೆ ಪಂಜಾಬ್ ಪುತ್ತರ್ ಕ್ಲೀನ್ ಬೋಲ್ಡ್?

ವಾಂಖೆಡೆ ಅಂಗಳದಲ್ಲಿ ಅಭಿಷೇಕ್ ಶರ್ಮಾ(Abhishek Sharma) ಎಷ್ಟು ವೇಗವಾಗಿ ಸೆಂಚುರಿ ಸಿಡಿಸಿದ್ರೋ ಅಷ್ಟೇ ವೇಗವಾಗಿ ಗೂಗಲ್ ಅಭಿಷೇಕ್ ಹುಡುಗಿಯ ಯಾರು ಅನ್ನೋ ಪ್ರಶ್ನೆಗೆ ಉತ್ತರ ಹುಡುಕಾಟ ನಡೆಸಿದ್ದಾರೆ. ಹಾಗೇ ಹುಡುಕಾಟ ನಡೆಸಿದವರಿಗೆ ಸಿಕ್ಕ ಉತ್ತರ ಲೈಲಾ ಫೈಸಲ್. ಅಭಿಷೇಕ್ ಶರ್ಮಾ ಸೆಂಚುರಿ ಹೊಡೆದ ಬೆನ್ನಲ್ಲೇ ಈ ಲೈಲಾ ಫೈಸಲ್ ಇನ್ಸ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಒಂದಲ್ಲ, ಶುಭಾಶಯ ಕೋರಿ ಎರಡೆರಡು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಲವ್ ಗಾಸಿಪ್ಗೆ ಕಿಡಿ ಹಚ್ಚಿದೆ.
ಈ ಲೈಲಾ ಫೈಸಲ್ಗೂ ಅಭಿಷೇಕ್ ಶರ್ಮಾ(Abhishek Sharma) ಎಲ್ಲಿಂದ ಸಂಬಂಧ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಿರಬಹುದು. ಈ ಪ್ರಶ್ನೆಗೆ ಪಕ್ಕಾ ಉತ್ತರ ಸದ್ಯಕ್ಕಂತೂ ಸಿಕ್ಕಿಲ್ಲ. ಇವರಿಬ್ಬರು ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿರೋ ಒಂದು ಫೋಟೋ ವೈರಲ್ ಆಗ್ತಿದೆ. ಈ ಫೋಟೋನೇ ಇವರಿಬ್ಬರ ರಿಲೇಶನ್ಶಿಪ್ ರೂಮರ್ಸ್ಗೆ ಪುಷ್ಟಿ ನೀಡಿದೆ. ಜೊತೆಗೆ ಕಳೆದ ಕೆಲ ತಿಂಗಳಿನಿಂದ ಇವರಿಬ್ಬರು ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಅಭಿಷೇಕ್ ಶರ್ಮಾ ಆನ್ಫೀಲ್ಡ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದಾಗೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಲೈಲಾ ಫೈಸಲ್ ಶುಭಾಶಯ ಕೋರ್ತಾರೆ. ಪೋಟೋ ಹಾಗೂ ಪೋಸ್ಟ್ಗಳೇ ಸದ್ಯ ಡೇಟಿಂಗ್ ಗಾಸಿಪ್ಗೆ ಆಹಾರವಾಗಿವೆ.
ಲೈಲಾ ಫೈಸಲ್ ಜೊತೆಗೆ ಅಭಿಷೇಕ್ ಹೆಸರು ತಳುಕು ಹಾಕಿಕೊಂಡಿದೆ. ಇದಕ್ಕೂ ಹಿಂದೆ ಮಾಡೆಲ್ ದಿಯಾ ಮೆಹ್ತಾ ಜೊತೆಗೆ ಅಭಿಷೇಕ್ ಹೆಸ್ರು ಓಡಾಡಿತ್ತು. 2019ರಲ್ಲಿ ಮಿಸ್ ರಾಜಸ್ತಾನ್ ಆಗಿ ಹೊರಹೊಮ್ಮಿದ್ದ ಈಕೆಯ ಜೊತೆಗೆ ಅಭಿಷೇಕ್ ಡೇಟಿಂಗ್ ನಡೆಸ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಐಪಿಎಲ್(IPL) ವೇಳೆ ಸನ್ರೈಸರ್ಸ್ ಹೈದ್ರಾಬಾದ್ ತಂಡದ ಡ್ರೆಸ್ಸಿಂಗ್ ರೂಮ್ಗೆ ದಿಯಾ ಮೆಹ್ತಾ ಎಂಟ್ರಿಕೊಟ್ಟಿದ್ರು. ದಿಯಾ ಶರ್ಮಾ ಅಭಿಷೇಕ್ ಶರ್ಮಾ ಕೈ ಹಿಡಿದುಕೊಂಡಿದ ಒಂದು ಫೋಟೋ ಕೂಡ ವೈರಲ್ ಆಗಿತ್ತು.
ಅಭಿಷೇಕ್ ಲವ್ ಲೈಫ್ನ ಫ್ಲ್ಯಾಶ್ ಬ್ಯಾಕ್..!
ಸದ್ಯ ಲವ್ ಲೈಫ್ನ ಹಿಂದೆ ಒಂದು ಕರಾಳ ಫ್ಲಾಶ್ಬ್ಯಾಕ್ ಕಥೆಯಿದೆ. ತಾನ್ಯಾ ಸಿಂಗ್ ಎಂಬ ಯುವತಿಯ ಜೊತೆಗೆ ಅಭಿಷೇಕ್ ಮೊದಲು ಡೇಟಿಂಗ್ ನಡೆಸಿದ್ರು. ಸುಮಾರು 1 ವರ್ಷಗಳ ಕಾಲ ರಿಲೇಷನ್ಶಿಪ್ನಲ್ಲಿದ್ರು. 2024ರ ಜನವರಿಯಲ್ಲಿ ಇಬ್ಬರ ನಡುವೆ ವೈಮನಸ್ಸು, ಬ್ರೇಕ್ ಆಪ್ ಆಗಿತ್ತು. ಬಳಿಕ ಅಭಿಷೇಕ್ ಅಂತರ ಕಾಯ್ದುಕೊಂಡ್ರೂ ತಾನ್ಯಾ ಅಭಿಷೇಕ್ನ ಬಿಡಲಿಲ್ಲ. ಪದೇ ಪದೆ ಕಾಲ್ ಹಾಗೂ ಮಸೇಜ್ ಮಾಡುತ್ತಲೇ ಇತ್ತು. ಅಂತಿಮವಾಗಿ ಮನನೊಂದಿದ್ದ ತಾನ್ಯಾ, 2024ರ ಫೆಬ್ರವರಿ 19ರಂದು ಆತ್ಮಹತ್ಯೆಗೆ ಶರಣಾದ್ರು.
ಸಧ್ಯು ಅಭಿಷೇಕ್ ಶರ್ಮಾ ಬಾಳಲ್ಲಿ ಹೊಸ ಯುವತಿಯ ಆಗಮನವಾಗಿದೆ ಎಂದು ವೈರಲ್ ಆಗುತ್ತಿದ್ದು, ಈ ಬಗ್ಗೆ ಸ್ಫೋಟಕ ಬ್ಯಾಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.