ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಜೈಹಿಂದ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳ ಬರಹಗಾರ ಎಸ್.ಎಸ್ ಡೇವಿಡ್ ಅವರು ನಿಧನರಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಅದ್ಭುತ ರೈಟರ್ ಆಗಿದ್ದ ಎಸ್.ಎಸ್ ಡೇವಿಡ್ ಅವರು ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಿನಿಮಾಗಳಿಗೆ ಕಥೆ ಬರೆಯುವುದು ಅಲ್ಲದೇ ಹಾಯ್ ಬೆಂಗಳೂರು ಹಾಗೂ ಧೈರ್ಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಎಸ್.ಎಸ್ ಡೇವಿಡ್ ಅವರು ಮೆಡಿಕಲ್ ಶಾಪ್ಗೆ ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗ ಮಧ್ಯೆ ಪಲ್ಸ್ ರೇಟ್ ಕಡಿಮೆ ಆಗಿದ್ದರಿಂದ ಎಸ್.ಎಸ್ ಡೇವಿಡ್ ಅವರು ಉಸಿರು ಚೆಲ್ಲಿದರು.
ಸೌತ್ ಇಂಡಿಯಾದಲ್ಲಿ ತಮ್ಮ ಕಥೆ-ಚಿತ್ರಕಥೆ ಮೂಲಕ ಹೊಸ ಅಲೆ ಎಬ್ಬಿಸಿದ್ದ ಡೇವಿಡ್ ಮದುವೆ ಆಗಿರಲಿಲ್ಲ. ಈಗ ಅವರು ಅನಾಥ ಶವವಾಗಿದ್ದಾರೆ. ಸಾವಿನ ಬಳಿಕ ಅವರನ್ನು ನೋಡಲು ಯಾರೂ ಇಲ್ಲವಾಗಿದ್ದಾರೆ. ಕುಟುಂಬದವರು ಅವರ ಶವ ಪಡೆಯಲು ಸಿದ್ಧರಿಲ್ಲ ಅಂತಾ ಹಿರಿಯ ಕಲಾವಿದರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
Read Also : ವಿಷ್ಣು ಸಮಾಧಿ ವಿವಾದ : ಬಾಲಣ್ಣ ಕುಟುಂಬದಿಂದ ಭೂಮಿ ವಾಪಸ್ ಪಡೆಯಲು ಸರ್ಕಾರ ಚಿಂತನೆ

