Site icon BosstvKannada

Earthquake Hits Pakistan : ಸಿಂದೂರ ಆಪರೇಷನ್‌ ಬಳಿಕ ಪಾಕ್‌ನಲ್ಲಿ 4.6 ತೀವ್ರತೆಯ ಭೂಕಂಪ

Earthquake Hits Pakistan: ಭಾರತೀಯ ಸೇನೆಯ ಆಪರೇಷನ್‌ ಸಿಂದೂರ್‌ ನಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನಕ್ಕೆ ಇದೀಗ ಭೂಕಂಪದ ದೊಡ್ಡ ಟೆನ್ಶನ್‌ ಶುರುವಾಗಿದೆ. ಆಪರೇಷನ್ ಸಿಂದೂರ್‌ ಮೂಲಕ ಭಾರತೀಯ ಸೇನಾಪಡೆಗಳು ಪಾಕಿಸ್ತಾನಕ್ಕೆ ತಕ್ಕಶಾಸ್ತಿ ಮಾಡಿವೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಈ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.6ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದಲ್ಲಿ 29.12 ಡಿಗ್ರಿ ಉತ್ತರದಲ್ಲಿ ಮತ್ತು 67.26 ಡಿಗ್ರಿ ಪೂರ್ವ ರೇಖಾಂಶದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿದು ಬಂದಿದೆ.

NCS ಹಂಚಿಕೊಂಡಿರುವ ನಕ್ಷೆಯ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿದೆ. ಇದು ಅಫ್ಘಾನಿಸ್ತಾನದ ಗಡಿ ಸಮೀಪದಲ್ಲಿದೆ. ನಕ್ಷೆಯಲ್ಲಿ ತೋರಿಸಿರುವ ಪ್ರಭಾವದ ಪ್ರದೇಶವು ಕ್ವೆಟ್ಟಾ ಮತ್ತು ಸುತ್ತಮುತ್ತಲಿನ ಪಟ್ಟಣಗಳಾದ ಚಮನ್ ಮತ್ತು ಸಿಬಿಯನ್ನು ಒಳಗೊಂಡಿವೆ. ಈ ಭೂಕಂಪನದಲ್ಲಿ ಯಾವುದೇ ರೀತಿಯ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನದಲ್ಲಿ ಕೇವಲ ಮೂರೇ ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ತಜ್ಞರ ಪ್ರಕಾರ, ಪಾಕಿಸ್ತಾನವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನಲ್ಲಿ ಅಸ್ತಿತ್ವದಲ್ಲಿರುವ ಕಾರಣ ಭೂಕಂಪನಶೀಲ ಸಕ್ರಿಯ ವಲಯದಲ್ಲಿದೆ. ಇದರಿಂದ ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರದೇಶಗಳು ಯುರೇಷಿಯನ್ ಪ್ಲೇಟ್‌ನ ದಕ್ಷಿಣ ಅಂಚಿನಲ್ಲಿದ್ದರೆ, ಪಂಜಾಬ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳು ಭಾರತೀಯ ಪ್ಲೇಟ್‌ನ ವಾಯುವ್ಯ ಅಂಚಿನಲ್ಲಿವೆ.ಸಿಂದೂರ ಆಪರೇಷನ್‌ ಬಳಿಕ
ಪಾಕ್‌ನಲ್ಲಿ ಮತ್ತೆ ಭೂಕಂಪ!

ಭಾರತೀಯ ಸೇನೆಯ ಆಪರೇಷನ್‌ ಸಿಂದೂರ್‌ ನಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನಕ್ಕೆ ಇದೀಗ ಭೂಕಂಪದ ದೊಡ್ಡ ಟೆನ್ಶನ್‌ ಶುರುವಾಗಿದೆ. ಹೌದು, ಆಪರೇಷನ್ ಸಿಂದೂರ್‌ ಮೂಲಕ ಭಾರತೀಯ ಸೇನಾಪಡೆಗಳು ಪಾಕಿಸ್ತಾನಕ್ಕೆ ತಕ್ಕಶಾಸ್ತಿ ಮಾಡಿವೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಈ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.6ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದಲ್ಲಿ 29.12 ಡಿಗ್ರಿ ಉತ್ತರದಲ್ಲಿ ಮತ್ತು 67.26 ಡಿಗ್ರಿ ಪೂರ್ವ ರೇಖಾಂಶದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ.

NCS ಹಂಚಿಕೊಂಡಿರುವ ನಕ್ಷೆಯ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿದೆ. ಇದು ಅಫ್ಘಾನಿಸ್ತಾನದ ಗಡಿ ಸಮೀಪದಲ್ಲಿದೆ. ನಕ್ಷೆಯಲ್ಲಿ ತೋರಿಸಿರುವ ಪ್ರಭಾವದ ಪ್ರದೇಶವು ಕ್ವೆಟ್ಟಾ ಮತ್ತು ಸುತ್ತಮುತ್ತಲಿನ ಪಟ್ಟಣಗಳಾದ ಚಮನ್ ಮತ್ತು ಸಿಬಿಯನ್ನು ಒಳಗೊಂಡಿವೆ. ಈ ಭೂಕಂಪನದಲ್ಲಿ ಯಾವುದೇ ರೀತಿಯ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನದಲ್ಲಿ ಕೇವಲ ಮೂರೇ ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

Also Read: Gurudev Sri Sri Ravi Shankar’s 69th birthday ; ಗುರುದೇವ್ ಶ್ರೀ ಶ್ರೀ ರವಿಶಂಕರ ರವರ 69 ನೇ ಜನ್ಮದಿನ : ಸಾಫ್ಟ್‌ವೇರ್‌ ಇಂಜಿನಿಯರ್‌ಗಳಿಂದ ಸ್ವಚ್ಛತಾ ಕಾರ್ಯ

ತಜ್ಞರ ಪ್ರಕಾರ, ಪಾಕಿಸ್ತಾನವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನಲ್ಲಿ ಅಸ್ತಿತ್ವದಲ್ಲಿರುವ ಕಾರಣ ಭೂಕಂಪನಶೀಲ ಸಕ್ರಿಯ ವಲಯದಲ್ಲಿದೆ. ಇದರಿಂದ ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರದೇಶಗಳು ಯುರೇಷಿಯನ್ ಪ್ಲೇಟ್‌ನ ದಕ್ಷಿಣ ಅಂಚಿನಲ್ಲಿದ್ದರೆ, ಪಂಜಾಬ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳು ಭಾರತೀಯ ಪ್ಲೇಟ್‌ನ ವಾಯುವ್ಯ ಅಂಚಿನಲ್ಲಿವೆ.‌

Exit mobile version