BosstvKannada

ಫೇಸ್ಬುಕ್‌, ಎಕ್ಸ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್‌ ಮೀಡಿಯಾ ಬ್ಯಾನ್‌..!

ಈಗಿನ ಜನ್‌ರೇಷನ್‌ ನವರಿಗೆ ಸೋಷಿಯಲ್‌ ಮೀಡಿಯಾವೇ ಬದುಕಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇಲ್ಲ ಅಂದ್ರೆ ಅವರು ಮೂರ್ಖರು ಅನ್ನೋ ಪರಿಸ್ಥಿತಿ ಬಂದಿದೆ. ಸದ್ಯ ಜಗತ್ತೇ ಸೋಷಿಯಲ್‌ ಮೀಡಿಯಾದಲ್ಲಿ ಮುಳುಗಿದೆ. ರೀಲ್ಸ್‌, ಬ್ಲಾಗ್ಸ್‌, ವ್ಲಾಗ್ಸ್‌, ಟ್ವೀಟ್‌,ಚಾಟ್‌ ಅಂತಾ ಟೈಮ್‌ ಪಾಸ್‌ ಮಾಡೋದೆ ಕೆಲಸವಾಗಿದೆ.

ಹೀಗಿರುವಾಗ ಸಡನ್‌ ಆಗಿ ಸೋಷಿಯಲ್‌ ಮೀಡಿಯಾ ಬ್ಯಾನ್‌ ಆದ್ರೆ ಬಳಕೆದಾರರ ಪರಿಸ್ಥಿತಿ ತೀರಾ ಶೋಚನೀಯವಾಗುತ್ತದೆ.
ಆದ್ರೆ ಈ ದೇಶದಲ್ಲಿ ಸೋಷಿಯಲ್‌ ಮೀಡಿಯಾವನ್ನ ಬ್ಯಾನ್‌ ಮಾಡಲಾಗಿದೆ. ನೇಪಾಳದಲ್ಲಿ ಫೇಸ್ಬುಕ್‌, ಎಕ್ಸ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್‌ ಮೀಡಿಯಾಗಳಿಗೆ ನಿಷೇಧ ವಿಧಿಸಲಾಗಿದೆ.

ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಸ್ಥಳೀಯ ಮಟ್ಟದಲ್ಲಿ ನೋಂದಣಿಯಾಗಿರಲಿಲ್ಲ. ಜಾಹೀರಾತುಗಳ ಮೇಲೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು.

ಸ್ಥಳೀಯ ನೋಂದಣಿವರೆಗೂ ಬಳಕೆಗೆ ತಡೆ ಹಾಕುವಂತೆ ಕೋರ್ಟ್‌ ಸೂಚಿಸಿತ್ತು. ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.

Read Also : ಜಿಎಸ್‌ಟಿ ಹೊರೆ ಇಳಿಸಿದ ಕೇಂದ್ರ ಸರ್ಕಾರ.. ಯಾವುದೆಲ್ಲಾ ಅಗ್ಗ, ಯಾವುದೆಲ್ಲಾ ದುಬಾರಿ?

Exit mobile version