ಹಿಂದೂಗಳ ಸರಣಿ ಹಬ್ಬದ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಜಿಎಸ್‌ಟಿ ಹೊರೆಯನ್ನು ಇಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಹಿ ಸುದ್ದಿ ನೀಡಿದ್ದಾರೆ. ಮೋದಿ ಸರ್ಕಾರದ ಈ ನಿರ್ಧಾರದಿಂದ ಜನರಿಗೆ ಬಂಪರ್ ಆಫರ್ ಸಿಕ್ಕಿದೆ.
ಹೊಸ ಜಿಎಸ್‌ಟಿ ದರ ಯಾವಾಗಿಂದ ಜಾರಿಯಾಗುತ್ತೆ?
ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿರುವ ಶೇಕಡಾ 5 ಮತ್ತು ಶೇಕಡಾ 18 ದರಗಳೊಂದಿಗೆ ಸರಳೀಕೃತ 2 ಹಂತದ ತೆರಿಗೆ ರಚನೆಗೆ ಅನುಮೋದನೆ ನೀಡಿದೆ.
ಯಾವೆಲ್ಲಾ ವಸ್ತುಗಳು ಅಗ್ಗವಾಗಿವೆ?
18% To 5% GST
ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಸೋಪ್, ಟೂತ್ ಬ್ರಷ್, ಶೇವಿಂಗ್ ಕ್ರೀಮ್
12% To 5% GST
ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು
ಪ್ಯಾಕೇಜ್ ಮಾಡಿದ ಕುರುಕಲು ತಿಂಡಿಗಳು, ಪಾತ್ರೆಗಳು
ಹಾಲುಣಿಸುವ ಬಾಟಲ್‌ಗಳು, ಮಕ್ಕಳಿಗಾಗಿ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು
ಹೊಲಿಗೆ ಯಂತ್ರಗಳು ಮತ್ತು ಬಿಡಿ ಭಾಗಗಳು

18% To Nill
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ
28% To 18% GST
ಪೆಟ್ರೋಲ್ ಮತ್ತು ಹೈಬ್ರಿಡ್, ಎಲ್‌ಪಿಜಿ, ಸಿಎನ್‌ಜಿ ಕಾರುಗಳು
ಡೀಸೆಲ್ ಮತ್ತು ಹೈಬ್ರಿಡ್ ಕಾರುಗಳು, ತ್ರಿಚಕ್ರ ವಾಹನಗಳು
ಮೋಟಾರ್ ಸೈಕಲ್‌ಗಳು, ಸರಕು ಸಾಗಣೆ ವಾಹನಗಳು
ಶೂನ್ಯ ಜಿಎಸ್‌ಟಿಗೆ ಇಳಿಕೆ
ನಕ್ಷೆಗಳು, ಚಾರ್ಟ್‌ಗಳು, ಗ್ಲೋಬ್‌ಗಳು
ಪೆನ್ಸಿಲ್‌ಗಳು, ಶಾರ್ಪನರ್‌ಗಳು, ಕ್ರಯಾನ್‌ಗಳು & ಪೇಸ್ಟಲ್‌ಗಳು
ಅಭ್ಯಾಸ ಪುಸ್ತಕಗಳು ಮತ್ತು ನೋಟ್‌ಬುಕ್, ಎರೇಸರ್
ಯಾವೆಲ್ಲಾ ವಸ್ತುಗಳು ದುಬಾರಿಯಾಗಿವೆ?
40% ಜಿಎಸ್‌ಟಿ
ತಂಬಾಕು, ಪಾನ್‌ಮಸಾಲಾ, ಐಷಾರಾಮಿ ಕಾರು – 40%
ಖಾಸಗಿ ವಿಮಾನ, ಯಾಚ್‌ಗಳು, ಖಾಸಗಿ ಐಷಾರಾಮಿ ಬೋಟ್ – 40%
ಕೂಲ್ ಡ್ರಿಂಕ್ಸ್ – 40%
ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದೆ ಅಂತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ದೇಶದ ಕೋಟಿ ಕೋಟಿ ಜನರಿಗೆ ತೆರಿಗೆ ಹೊರೆ ತಗ್ಗಲಿದೆ ಅಂತಾ ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡ್ತಿದ್ದಾರೆ.
Read Also : ದೀಪಾವಳಿಗೆ ಡಬಲ್ ಧಮಾಕಾ.. ಜಿಎಸ್‌ಟಿಯಲ್ಲಿ ಕ್ರಾಂತಿಕಾರಿ ಬದಲಾವಣೆ