BosstvKannada

Banu Mushtaq ಬೂಕರ್‌ ಗರಿ! ಪ್ರಶಸ್ತಿ ಬೆಲೆ ಎಷ್ಟು..?

ಕನ್ನಡದ ಖ್ಯಾತ ಸಾಹಿತಿ Banu Mushtaq ಅವರ ಕೃತಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಾಚಿಕೊಂಡಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ ಹಾರ್ಟ್‌ ಲ್ಯಾಂಪ್‌ಗೆ ಈ ಪ್ರಶಸ್ತಿ ದೊರೆತಿದೆ. ಕನ್ನಡದ ಕೃತಿಯೊಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು..

ಇನ್ನು, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆಯೋದು ಅಷ್ಟು ಸುಲಭದ ಮಾತಲ್ಲ. ಅಲ್ಲಿ ಭಾರಿ ಪೈಪೋಟಿ ಮತ್ತು ಸ್ಪರ್ಧೆ ಹೆಚ್ಚಾಗಿರುತ್ತದೆ.. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ.

ಬೂಕರ್‌ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿನ 6 ಪ್ರಮುಖ ಕೃತಿಗಳಲ್ಲಿ Banu Mushtaq ಅವರ ಹಾರ್ಟ್‌ ಲ್ಯಾಂಪ್‌ ಕಥಾಗುಚ್ಛವೂ ಒಂದಾಗಿತ್ತು. ಮುಷ್ತಾಕ್‌ ಅವರ ಪರಿಶ್ರಮ ಹಾಗೂ ಕಲೆಯೊಂದಿಗೆ, ಕನ್ನಡಿಗರ ಪ್ರಾರ್ಥನೆಯೂ ಸೇರಿದೆ ಎನ್ನುವಂತೆ ಅವರಿಗೆ ಬೂಕರ್‌ ಪ್ರಶಸ್ತಿ ಲಭಿಸಿದೆ.

Also Read: ಕಾಲಿಗೆ ಬಿದ್ದ ವೈಭವ್‌, Dhoni ರಿಯಾಕ್ಷನ್‌ ಹೇಗಿತ್ತು?

ಈ ಮೂಲಕ ಕನ್ನಡದ ಕೃತಿಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಪ್ರಶಸ್ತಿಯ ಮೊತ್ತವು ಅಂದಾಜು 57.28 ಲಕ್ಷ ರೂಪಾಯಿ ಆಗಿದೆ..

ಇನ್ನು, ಬೂಕರ್‌ ಪ್ರಶಸ್ತಿಗೆ ಭಾಜನರಾದ ಬಾನು ಮುಷ್ತಾಕ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು ಅಂತಾ ಸಿದ್ದರಾಮಯ್ಯ ಬಣ್ಣಿಸಿದ್ದಾರೆ..

Exit mobile version