


ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಆತಂಕ ಶುರುವಾಗಿದೆ. ಬಾಂಗ್ಲಾದೇಶದಲ್ಲಿ ಈಗ ಇಸ್ಲಾಮಿಕ್ ರಾಷ್ಟ್ರ ನಿರ್ಮಾಣದ ಕೂಗು ತೀವ್ರಗೊಂಡಿದೆ. ಸಂವಿಧಾನದಿಂದ ಜಾತ್ಯತೀತತೆ ತೆಗೆದು ಇಸ್ಲಾಮಿಕ್ ರಾಷ್ಟ್ರ ಮಾಡುವ ಪ್ರಯತ್ನಗಳು ಜೋರಾಗಿವೆ. ಈ ವಿಷಯವಾಗಿ ಜನರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 15ನೇ ತಿದ್ದುಪಡಿ ಪ್ರಶ್ನಿಸಿದ್ದು, ಸಂವಿಧಾನದಿಂದ ಜಾತ್ಯತೀತ ಪದವನ್ನ ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನು ಅಂಗೀಕರಿಸಿದ್ದೇ ಆದಲ್ಲಿ ದಯನೀಯ ಸ್ಥಿತಿಯಲ್ಲಿರುವ ಅಲ್ಲಿನ ಹಿಂದೂಗಳ ಸ್ಥಿತಿ ಊಹಿಸಿಕೊಳ್ಳಲೂ ಆಗದ ಸ್ಥಿತಿ ನಿರ್ಮಾಣವಾಗಲಿದೆ.
ಬಾಂಗ್ಲಾದೇಶದಲ್ಲಿ ಶೇಕಡಾ 90ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ಅಲ್ಪಸಂಖ್ಯಾತ ಹಿಂದೂ ಹಾಗೂ ಇತರೆ ಧರ್ಮಗಳ ಉಳಿಯುವಿಕೆ ಕಷ್ಟವಾಗಿದೆ. 1974 ರಲ್ಲಿ 13.5% ಇದ್ದ ಜನಸಂಖ್ಯೆ, ಇಂದು 8%ಕ್ಕೆ ಇಳಿಕೆಯಾಗಿದೆ. ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಆಶಯದಿಂದ 1971 ರಲ್ಲಿ ಸ್ವತಂತ್ರ್ಯ ಬಾಂಗ್ಲಾದೇಶ ಸ್ಥಾಪನೆಯಾಯಿತು. ಈ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಅನೇಕ ಹಿಂದೂಗಳಿಗೆ ಮುಸ್ಲಿಂ ರಾಷ್ಟ್ರವಾಗಿ ಮಾಡಲು ಮುಂದಾಗಿರುವ ಪ್ರಯತ್ನಗಳು ಆತಂಕ ಹುಟ್ಟಿಸಿವೆ. ದೇಶ ಕಟ್ಟುವಲ್ಲಿ ಹಿಂದೂಗಳ ಪರಿಶ್ರಮವನ್ನ ಅಲ್ಲಿನ ಜನ ಮರೆತು ಬಿಟ್ರಾ, ಅಲ್ಲ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಜಿಬುರ್ ರೆಹಮಾನ್ರನ್ನೆ ಬಿಟ್ಟಿಲ್ಲ. ಇನ್ನ ಹಿಂದೂಗಳೆಲ್ಲಾ ಯಾವ ಲೆಕ್ಕಾ ಹೇಳಿ. ತನ್ನ ದೇಶ ಅಂತ ಹೋರಾಡಿದ ಜನ ಮಣ್ಣಲ್ಲಿ ಮಣ್ಣಾಗಿ ಹೋಗ್ಬಿಟ್ರು. ಇಂದು ಅಲ್ಲಿ ಹಿಂದೂ ಹೆಸರಿಗೆ ಮಾತ್ರ ದೇಶದ ಜನ ಅವರಿಗೆ ಭಾರತದಲ್ಲಿ ಮುಸಲ್ಮಾನರಿಗೆ ಇರುವ ರೀತಿ ಯಾವ ಅಧಿಕಾರವೂ ಇಲ್ಲ..
ಪಾಕಿಸ್ತಾನದ ಆಳ್ವಿಕೆಯಲ್ಲಿ ಧಾರ್ಮಿಕ ತಾರತಮ್ಯಕ್ಕೆ ಬಾಂಗ್ಲಾದೇಶದಲ್ಲಿ ತಾಂಡವವಾಡುತ್ತಿತ್ತು. ಸ್ವತಂತ್ರ ದೇಶವಾಗಿ ಸುಮಾರು ೫ ದಶಕಗಳ ನಂತರ ರಾಜಕೀಯದಲ್ಲಿನ ಬದಲಾವಣೆ, ಧಾರ್ಮಿಕ ಭಾವನೆಗಳು ಮತ್ತು ರಾಜಕೀಯ ಪ್ರಭಾವಗಳು ಬಾಂಗ್ಲಾದೇಶದ ರಾಜಕೀಯ ಮತ್ತು ಸಾಮಾಜದಲ್ಲಿ ಇಸ್ಲಾಂನ ಪ್ರಭಾವ ಹೆಚ್ಚಲು ಕಾರಣವಾಗಿವೆ. ಪಾಕಿಸ್ತಾನದಂತೆಯೇ ಮೂಲಭೂತವಾದಿಗಳು ಈಗ ಬಾಂಗ್ಲಾದೇಶದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದರ ಪರಿಣಾಮವಾಗಿ, ಬಾಂಗ್ಲಾದೇಶದ ಉನ್ನತ ಅಧಿಕಾರಿಯೊಬ್ಬರು ದೇಶದ ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಇದು ಹಿಂದೂಗಳ ಉಳಿವಿಗೆ ಕುತ್ತು ತಂದಿದೆ.
ಜಾತ್ಯತೀತ ರಾಷ್ಟ್ರ ಬಾಂಗ್ಲಾದಲ್ಲಿ ನಡೆದ ದಂಗೆಯಲ್ಲಿ ಅನೇಕ ಹಿಂದೂಗಳು ಹಾಗೂ ಹಿಂದೂ ಮಂದಿರಗಳನ್ನೇ ಟಾರ್ಗೇಟ್ ಮಾಡಿ ದಾಳಿ ಮಾಡಲಾಗಿತ್ತು. ಹೀಗಿರುವಾಗ ಒಂದುವೇಳೆ ಬಾಂಗ್ಲಾದೇಶ ಮುಸ್ಲಿಂ ರಾಷ್ಟ್ರವಾದಲ್ಲಿ ಪಾಕಿಸ್ತಾನದಂತೆ ಹಿಂದೂಗಳ ಕಗ್ಗೊಲೆ ನಡೆಯುವುದರಲ್ಲಿ ಯಾವುದೆ ಸಂಶಯವಿಲ್ಲ ಅಂತಲೇ ಚರ್ಚೆಯಾಗುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪಾಕಿಸ್ತಾನದಲ್ಲೇ ಉಳಿದ ಹಿಂದೂಗಳ ಇಂದಿನ ಪರಸ್ಥಿತಿ ಎಲ್ಲರಿಗೂ ಗೊತ್ತಿದೆ. ಆದರೆ ಜಾತ್ಯತೀತದ ಅಜೆಂಡಾ ಹೊತ್ತಿದ್ದ ಬಾಂಗ್ಲಾದಲ್ಲಿ ಮೊದ ಮೊದಲು ಹಿಂದೂಗಳು ಚೆನ್ನಾಗಿದ್ರು. ನಂತರ ಬಾಂಗ್ಲಾದೇಶ ಪಿತಾಮಹ ಶೇಕ್ ಮುಜಿಬುರ್ ರೆಹಮಾನ್ ಹತ್ಯೆ ಹಾಗೂ ಜನರಲ್ ಜಿಯಾವುರ್ ರಹಮಾನ್ ನೆತೃತ್ವದಲ್ಲಿ 1975 ರಲ್ಲಿ ನಡೆದ ಮಿಲಿಟರಿ ದಂಗೆಯ ಕಾರಣ ಜಾತ್ಯತೀತತೆಯನ್ನು ಸಂವಿಧಾನದಿಂದ ತೆಗೆದುಹಾಕಲಾಯಿತು. 2005ರಲ್ಲಿ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದಿಂದ ಜಾತ್ಯತೀತತೆಯನ್ನು ತೆಗೆಯುವಂತಿಲ್ಲ. ಇದು ಕಾನೂನುಬಾಹಿರ ಎಂದು ರದ್ದುಗೊಳಿಸಿತ್ತು.
ಮೊದಲೆ ದಂಗೆ ಪಿಡಿತವಾಗಿರುವ ಬಾಂಗ್ಲಾದಲ್ಲಿ ಈಗ ಸೇನೆಯ ಆಡಳಿತ ನಡೆಯುತ್ತಿದೆ. ಕೆಲವರು ಮರುಚುನಾವಣೆಗೆ ಬೇಡಿಕೆ ಇಟ್ಟಿದ್ದಾರೆ. ಚುನಾವಣೆ ನಡೆದು ಜಮಾತ್-ಎ-ಇಸ್ಲಾಮಿಯಂತಹ ಪಕ್ಷ ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಮಾರಣ ಹೋಮ ಖಂಡಿತ ಅನ್ನೋದರಲ್ಲಿ ಸಂದೇಹವೇ ಇಲ್ಲ. ಇನ್ನೂ ಶೇಕ್ ಹಸೀನಾ ರಾಜೀನಾಮೆ ಕೊಟ್ಟಿಲ್ಲ ಎಂಬ ಮಾತುಗಳು ಕೇಳಿ ಬರ್ತಿವೆ. ಅದೇನೆ ಇರಲಿ ಒಂದುವೇಳೆ ಬಾಂಗ್ಲಾ ಮುಸ್ಲಿಂ ರಾಷ್ಟ್ರ ಆದರೆ ಅಲ್ಲಿನ ಹಿಂದೂಗಳ ಗತಿ ಏನು.? ಈ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಾ..? ರೋಹಿಂಗ್ಯಗಳಿಗೆ ಜಾಗ ನೀಡಿರುವ ಭಾರತ ಹಿಂದೂಗಳಿಗೆ ಜಾಗ ನೀಡಲ್ವಾ..? ಬಾಂಗ್ಲಾದಿಂದ ಬರುವ ಹಿಂದುಗಳಿಗೆ ಭಾರತದಲ್ಲಿ ಜಾಗ ಸಿಗುತ್ತಾ..? ಅನ್ನೋ ಪ್ರಶ್ನೆಗಳು ಭಾರಿ ಕುತೂಹಲ ಹುಟ್ಟಿಸಿರೋದಂತೂ ಸುಳ್ಳಲ್ಲ.