

ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಸೆನ್ಸೇಷನ್ ಸೃಷ್ಠಿಸಿದ್ದ ಲಾಯರ್ ಜಗದೀಶ್ ಹಿಂದಿ ಬಿಗ್ ಬಾಸ್ಗೆ ಹೋಗ್ತಾರಾ..? ಬಿಗ್ ಹೌಸ್ನಲ್ಲಿ ಕಿಚ್ಚ ಸುದೀಪ್ ಪಾಠ ಕೇಳಿದ್ದ ಜಗದೀಶ್ ಈಗ ಸಲ್ಮಾನ್ ಖಾನ್ ಪಾಠ ಕೇಳ್ತಾರಾ? ಇಂಥಾದ್ದೊಂದು ವಿಚಾರ ಈಗ ಭಾರಿ ಸಂಚಲನ ಸೃಷ್ಟಿಸಿದೆ. ಯಾಕಂದರೆ, ಬೇರೆ ಯಾರೋ ಜಗದೀಶ್ ಹಿಂದಿ ಬಿಗ್ ಬಾಸ್ಗೆ ಹೋಗ್ತಾರೆ ಅಂದಿದ್ರೆ ನಂಬೋಕಾಗ್ತಿರಲಿಲ್ಲ.. ಆದ್ರೆ, ಸ್ವತಃ ಲಾಯರ್ ಜಗದೀಶ್ ಅವರೇ ಬಾಲಿವುಡ್ ಬಿಗ್ ಬಾಸ್ ಕರೆ ಬಂದ ಬಗ್ಗೆ ಬಾಯ್ಬಿಟ್ಟಿದ್ದಾರೆ..
ಹೌದು.. ಕನ್ನಡ ಬಿಗ್ ಬಾಸ್ನಲ್ಲಿ ಬಿಗ್ ಬಾಸ್ಗೇ ಜಗದೀಶ್ ಚಾಲೆಂಜ್ ಮಾಡಿದ್ರು. ಮನೆಯ ಬಾಗಿಲನ್ನೆ ಉಡೀಸ್ ಮಾಡ್ತೇನೆ ಅಂತ ಮೆರೆದಿದ್ರು. ತಮ್ಮ ಲಗಾಮಿಲ್ಲದ ನಾಲಿಗೆಯಿಂದಾಗಿ, ಕನ್ನಡ ಬಿಗ್ ಬಾಸ್ನಿಂದ ಹೊರಕ್ಕೆ ಬಂದಿದ್ದ ಲಾಯರ್ ಜಗದೀಶ್ ಈಗ ಬಿಗ್ ಬಾಸ್ ಹಿಂದಿಗೆ ಹೋಗುವ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ರಿಲೀಸ್ ಮಾಡಿರುವ ಲಾಯರ್ ಜಗದೀಶ್, ಹಿಂದಿ ಬಿಗ್ ಬಾಸ್ನಿಂದ ಆಫರ್ ಬಂದಿದೆ ಅಂತಾ ಹೇಳಿಕೆ ಕೊಟ್ಟಿದ್ದು, ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಲೈವ್ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಜಗ್ಗು ಹಿಂದಿ ಬಿಗ್ ಬಾಸ್ನಿಂದ ಬಂದ ಆಫರ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹಿಂದಿ ಬಿಗ್ ಬಾಸ್ಗೆ ಹೋಗುತ್ತಿರುವ ವಿಷಯ ತಿಳಿದ ಪ್ಯಾನ್ಸ್ ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಜಗದೀಶ್ ಪ್ಯಾನ್ಸ್ ಸಲ್ಮಾನ್ ಖಾನ್ ಜೊತೆಗಿನ ಫೋಟೋ ಹಂಚಿಕೊಡು, ಜಗದೀಶ್ಗೆ ಸಪೋರ್ಟ್ ಮಾಡಿ ಎಂಬ ಕ್ಯಾಪ್ಷನ್ ನೀಡುತ್ತಿದ್ದಾರೆ..
ಹಿಂದಿ ಬಿಗ್ ಬಾಸ್ ಬಗ್ಗೆ ಜಗ್ಗುದಾದಾ ಏನಂದ್ರು?
ಕರ್ನಾಟಕದಿಂದ ಬಾಲಿವುಡ್ ಎಂಟ್ರಿ ನಮ್ಮ ಐಶ್ವರ್ಯಾ ರೈಯಿಂದ ಆಗಿದ್ದು. ನಂತರ ಶಿಲ್ಪಾ ಶೆಟ್ಟಿ, ಪ್ರಕಾಶ್ ರೈ, ಕಿಚ್ಚ ಸುದೀಪ್ ಈಗ ಆ ಅದೃಷ್ಠ ಈಗ ನನಗೂ ಕೂಡಿ ಬಂದಿದೆ. ನಮ್ಮ 6 ಕೋಟಿ ಕನ್ನಡಿಗರ ಆಶೀರ್ವಾದ ಪ್ರಪಂಚದಾದ್ಯಂತ ಮಿಂಚಬೇಕು. ಇವತ್ತು ದೇವರಿಂದ ನನಗೆ ಅದೃಷ್ಟ ಬಂದಿದೆ. ಈ ಬಿಗ್ ಬಾಸ್ ಆಫರ್ ಬಾಲಿವುಡ್ನಲ್ಲಿ ಮಿಂಚೋಕೆ ಸಹಾಯ ಆಗುತ್ತೆ. ನಿಮ್ಮ ಪ್ರೀತಿಯ ಜಗ್ಗು ದಾದಾಗೆ ಎಲ್ಲರೂ ಸಪೋರ್ಟ್ ಮಾಡಿ ಎಂದಿದ್ದಾರೆ.
ಇನ್ನು, ಕನ್ನಡ ಬಿಗ್ ಬಾಸ್ನಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ನೇರ ನುಡಿಯಿಂದ ಜನರ ಮನಸು ಗೆದ್ದಿದ್ದ ಜಗದೀಶ್, ಬಿಗ್ ಬಾಸ್ನ TRP ಕಿಂಗ್ ಅಂತಾನೆ ಕರೆಸಿಕೊಳ್ತಿದ್ರು. ಮಾತು ಮಾತಿಗೂ ಸದಸ್ಯರೊಂದಿಗೆ ಜಗಳವಾಡುತ್ತಿದ್ದ ಜಗದೀಶ್, ನೋಡುಗರಿಗೆ ಎಂಟರ್ಟೇನ್ಮೆಂಟ್ನ ಭರಪೂರ ಪ್ಯಾಕೇಜ್ ನೀಡುತ್ತಿದ್ರು. ಆಟ ಚೆನ್ನಾಗಿ ಆಡುತ್ತಿದ್ದ ಇವರು ತಮ್ಮ ಅಸಭ್ಯ ವ್ಯಕ್ತಿತ್ವದಿಂದಲೇ ಹೊರಹೊಗಬೇಕಾಯ್ತು. ಇನ್ನ ಇವರು ಹೊರಗೆ ಬಂದಾಗ ಸಾಕಷ್ಟು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್ ಕೂಡ ತಲ್ಲಣಗೊಂಡಿದ್ರು.. ಇವರು ಹೊರಕ್ಕೆ ಬಂದಾಗ ಬಿಗ್ ಬಾಸ್ ತನ್ನ TRP ಕಳೆದುಕೊಳ್ತು ಎಂಬ ಮಾತುಗಳು ಸಹ ಕೇಳಿಬಂದಿತ್ತು. ಇದೀಗ ಜಗದೀಶ್ ಹಿಂದಿ ಬಿಗ್ ಬಾಸ್ ಆಫರ್ ಬಗ್ಗೆ ಬಾಯ್ಬಿಟ್ಟಿದ್ದು, ನಿಜಾನಾ ಸುಳ್ಳೋ ಗೊತ್ತಾಗಬೇಕಿದೆ..