
ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧಕ್ಕೆ ಕೊನೆಗೂ ಬ್ರೇಕ್.. ಟ್ರಂಪ್ ಹೇಳಿದ ಆ ಒಂದು ಮಾತಿನಿಂದಲೇ ರಣಯುದ್ಧ ನಿಂತು ಹೋಗುತ್ತಾ? ಹಾಗಾದ್ರೆ, ಟ್ರಂಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ..? ಟ್ರಂಪ್ ಎಚ್ಚರಿಕೆಗೆ ಹೆದರಿತಾ ಬಲಿಷ್ಠ ರಷ್ಯಾ..? ಒಂದೊಮ್ಮೆ ಯುದ್ಧ ನಿಂತು ಹೋದರೆ ಅಮೆರಿಕಕ್ಕೆ ಆಗುವ ಅತಿದೊಡ್ಡ ಲಾಭವೇನು? ಇದೆಲ್ಲವನ್ನೂ ಸಂಪೂರ್ಣವಾಗಿ ಹೇಳ್ತೀವಿ..
ರಷ್ಯಾ ಉಕ್ರೇನ್ ಶುರುವಾಗಿ ಎರಡೂವರೆ ವರ್ಷ ಕಳೆದಿದೆ. ಅಂದ್ರೆ ಮುಂದಿನ ವರ್ಷದ ಫೆಬ್ರವರಿಗೆ ಮೂರು ವರ್ಷ ಪೂರೈಸಲಿದೆ. ಎರಡೂ ದೇಶಗಳ ಯುದ್ಧ ದಾಹಕ್ಕೆ ಲೆಕ್ಕಕ್ಕೇ ಸಿಗದಷ್ಟು ಜನರ ಜೀವನ ಬಲಿಯಾಗಿದೆ.. ಸೈನಿಕರ ಬಲಿದಾನ ನಡೆದಿದೆ. ಪುಟ್ಟ ಮಕ್ಕಳಿಂದ ಹಿಡಿದು, ನಾಗರಿಕರವರೆಗೂ ಯುದ್ಧದ ಪರಿಣಾಮ ಎದುರಿಸಿದ್ದಾರೆ. ಅಷ್ಟೇ ಅಲ್ಲ.. ಈ ಯುದ್ಧ ಷೇರುಮಾರುಕಟ್ಟೆಯ ಭಾರಿ ಏರಿಳಿತಕ್ಕೂ ಕಾರಣವಾಗಿದೆ.. ಇಷ್ಟೊಂದು ಜಾಗತಿಕ ತಲ್ಲಣ ಸೃಷ್ಟಿಸಿರುವ ರಷ್ಯಾ-ಉಕ್ರೇನ್ ಕದನಕ್ಕೆ ಅಸಲಿ ಕಾರಣವಾದ್ರೂ ಏನು? ಝೆಲೆನ್ಸ್ಕಿ ಮೇಲೆ ಪುಟಿನ್ಗೆ ಕಡುಕೋಪ ಯಾಕೆ ಅನ್ನೋದನ್ನು ಮೊದಲು ನಿಮಗೆ ಹೇಳಲೇಬೇಕು..
ಉಕ್ರೇನ್ ನ್ಯಾಟೋ ಸೇರಿದ್ದಕ್ಕೆ ರಷ್ಯಾಗೆ ಕೆಂಡದಂತಾ ಕೋಪ! :
ಅಷ್ಟಕ್ಕೂ 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ ಉಕ್ರೇನ್ ಸ್ವತಂತ್ರ ರಾಷ್ಟ್ರವಾಯಿತು. ಆ ನಂತರ ರಷ್ಯಾದೊಂದಿಗಿನ ಸಂಬಂಧ ಕಡಿಮೆ ಮಾಡಿ, ಆರ್ಥಿಕವಾಗಿ ಸಬಲವಾಗುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿತು.. ಇದಾದ ನಂತರ ನ್ಯಾಟೊ ಸದಸ್ಯತ್ವವನ್ನು ಉಕ್ರೇನ್ ಪಡೆದಿತ್ತು. ಇದೇ.. ಇದೇ.. ವಿಚಾರ ಇದೀಗ ರಷ್ಯಾವನ್ನು ಕೋಪದಲ್ಲಿ ಮುಳುಗಿಸಿದೆ.
ನ್ಯಾಟೋ ಮೇಲೆ ರಷ್ಯಾಕ್ಕೆ ಏಕೆ ದ್ವೇಷ?:

೨ನೆಯ ಮಹಾಯುದ್ಧವು ಜಗತ್ತನ್ನು ೨ ಗುಂಪುಗಳಾಗಿಸಿತ್ತು. ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ೨ ಮಹಾಶಕ್ತಿಗಳಾಗಿದ್ದವು. ಡಿಸೆಂಬರ್ 25, 1991 ರಂದು, ಸೋವಿಯತ್ ಒಕ್ಕೂಟವು 15 ಹೊಸ ದೇಶಗಳಾಗಿ ಒಡೆದು ಹೋಯಿತು. ಅರ್ಮೇನಿಯಾ, ಅಜೆರ್ಬೈಜಾನ್, ಬೆಲಾರಸ್, ಎಸ್ಟೋನಿಯಾ, ಜಾರ್ಜಿಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಲಾಟ್ವಿಯಾ, ಲಿಥುವೇನಿಯಾ, ಮೊಲ್ಡೊವಾ, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್, ಉಕ್ರೇನ್ ಮತ್ತು ಉಜ್ಬೇಕಿಸ್ತಾನ್ ದೇಶಗಳು ಬೇರೆ ಬೇರೆಯಾದ್ವು. ಇದರ ನಂತರ, ಅಮೆರಿಕ ಏಕೈಕ ಸೂಪರ್ ಪವರ್ ಆಗಿ ಉಳಿಯಿತು. ಅಮೆರಿಕ ನೇತೃತ್ವದಲ್ಲಿ, ನ್ಯಾಟೋ ತನ್ನ ವಿಸ್ತರಣೆಯನ್ನು ಮುಂದುವರೆಸಿತು. ಸೋವಿಯತ್ ಒಕ್ಕೂಟದಿಂದ ಹೊರಬಂದ ದೇಶಗಳು ನ್ಯಾಟೋಗೆ ಸೇರಲು ಪ್ರಾರಂಭಿಸಿದವು. ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ 2004 ರಲ್ಲಿ ನ್ಯಾಟೋಗೆ ಸೇರಿಕೊಂಡವು. ಜಾರ್ಜಿಯಾ ಮತ್ತು ಉಕ್ರೇನ್ಗೆ 2008ರಲ್ಲಿ ನ್ಯಾಟೋ ಸದಸ್ಯತ್ವವನ್ನು ನೀಡಲಾಯಿತು. ಆದರೆ ಇದಕ್ಕೆ ರಷ್ಯಾ ತೀವ್ರ ವಿರೋಧವಿತ್ತು. ಆದಾಗ್ಯ ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯಿತಾದರೂ ರಷ್ಯಾದ ರಾಜತಾಂತ್ರಿಕ ಒತ್ತಡ ಮತ್ತು ತಾಂತ್ರಿಕ ಕಾರಣದಿಂದಾಗಿ ಮಿಲಿಟರಿ ಮೈತ್ರಿಗೆ ಸೇರಲು ಸಾಧ್ಯವಾಗಲಿಲ್ಲ. ಉಕ್ರೇನ್ ನ್ಯಾಟೋಗೆ ಸೇರಿದರೆ, ನ್ಯಾಟೋ ಪಡೆಗಳು ಉಕ್ರೇನ್ ಕಾವಲಿಗಾಗಿ ತನ್ನದೇ ಗಡಿಯಲ್ಲಿ ನಿಲ್ಲುತ್ತದೆ. ಇದು ರಷ್ಯಾದ ಅಸ್ಥಿತ್ವಕ್ಕೆ ಕುತ್ತು ತರಬಹುದು ಎಂಬ ಆತಂಕ ರಷ್ಯಾಕ್ಕಿದೆ. ಅಲ್ಲದೆ ನ್ಯಾಟೋ ಮಿತ್ರಕೂಟದಲ್ಲಿರುವುದು ಬಹುತೇಕ ತನ್ನ ಎದುರಾಳಿ ರಾಷ್ಟ್ರಗಳ ಸೇನಾಪಡೆಗಳೇ.. ಹೀಗಾಗಿ ರಷ್ಯಾ ತನ್ನ ಭದ್ರತಾ ಹಿತಾಸಕ್ತಿಯಿಂದಾಗಿ ನ್ಯಾಟೋವನ್ನು ದ್ವೇಷಿಸುತ್ತಿದೆ. ಇಷ್ಟೆಲ್ಲಾ ಇದ್ರೂ ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆದಿದ್ದು ರಷ್ಯಾ ಕಣ್ಣು ಕೆಂಪಗಾಗಿಸಿತ್ತು..
೩ ವರ್ಷದ ಸನಿಹದಲ್ಲಿ ರಷ್ಯಾ-ಉಕ್ರೇನ್ ಯುದ್ಧ..! :
ನ್ಯಾಟೋ ಸದಸ್ಯತ್ವ ಪಡೆದಿದ್ದ ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ವಿರೋಧಿಸುತ್ತಲೇ ಬಂದಿತ್ತು.. ಆದ್ರೆ, ೨೦೨೨ರ ಫೆಬ್ರವರಿ ೨೩ರಂದು ರಷ್ಯಾ ಸಮರ ಸಾರಿ ಬಿಟ್ಟಿತ್ತು.. ತನ್ನ ಬಲಿಷ್ಠ ಸೇನೆಯನ್ನು ಏಕಾಏಕಿ ಉಕ್ರೇನ್ ಬಾರ್ಡರ್ನಲ್ಲಿ ತಂದು ನಿಲ್ಲಿಸಿ ಬಿಟ್ಟಿತ್ತು.. ಅಲ್ಲಿಂದ ಇಲ್ಲಿವರೆಗೂ ಯುದ್ಧ ದಾಹ ತೀರುತ್ತಲೇ ಇಲ್ಲ.. ಆದ್ರೀಗ ಈ ಯುದ್ಧ ಭೂಮಿಗೆ ವಿಶ್ವದ ದೊಡ್ಡಣ್ಣನ ಎಂಟ್ರಿ ಆಗಿದೆ.. ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅಖಾಡಕ್ಕೆ ಧುಮುಕಿದ್ದು, ರಷ್ಯಾಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ..
ಯುದ್ಧ ಮುಂದುವರಿಸದಂತೆ ರಷ್ಯಾ ಅಧ್ಯಕ್ಷ ಪುಟಿನ್ಗೆ ಟ್ರಂಪ್ ಸಲಹೆ:
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್, ಕಡು ವಿರೋಧಿಯಾಗಿರುವ ರಷ್ಯಾಗೆ ಯುದ್ಧ ಮುಂದುವರಿಸದಂತೆ ತಾಕೀತು ಮಾಡಿದ್ದಾರೆ.. ಪುಟಿನ್ ಜತೆಗೆ ಮಾತಾಡಿರುವ ಟ್ರಂಪ್, ಉಕ್ರೇನ್ನಲ್ಲಿ ಯುದ್ಧ ಉಲ್ಬಣಗೊಳಿಸದಂತೆ ಒತ್ತಾಯಿಸಿದ್ದಾರೆ ಅಂತಾ ಅಮೆರಿಕ ಮಾಧ್ಯಮಗಳು ಹೇಳಿಕೊಂಡಿವೆ.. ಅಲ್ಲದೇ, ಉಕ್ರೇನ್ನ ಯುದ್ಧದ ನಿರ್ಣಯವನ್ನು ಶೀಘ್ರದಲ್ಲೇ ಚರ್ಚಿಸಲು ಹೆಚ್ಚಿನ ಮಾತುಕತೆಗೆ ಆಸಕ್ತಿ ಹೊಂದಿದ್ದೇವೆ. ಹೋರಾಟವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂದು ಎಂದು ಟ್ರಂಪ್ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗ್ತಿದೆ.
ರಷ್ಯಾ-ಉಕ್ರೇನ್ ಯುದ್ಧ ನಿಂತರೆ ಅಮೆರಿಕಕ್ಕೆ ಏನು ಲಾಭ? :

ಒಂದು ವೇಳೆ, ರಷ್ಯಾ-ಉಕ್ರೇನ್ ಯುದ್ಧ ನಿಂತರೆ ಅಮೆರಿಕಕ್ಕೆ ಏನು ಲಾಭ? ಅನ್ನೋ ಚರ್ಚೆಯೂ ಜೋರಾಗಿದೆ… ಯಾಕಂದ್ರೆ, ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕಕ್ಕೆ ಯುದ್ಧ ನಿಲ್ಲುವ ಸಿಹಿ ಸುದ್ದಿಯೇ ಬೇಕಾಗಿದೆ.. ಹೀಗೇಯೇ ಯುದ್ಧ ಮುಂದುವರಿದರೆ ಅಮೆರಿಕಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಹೊಡೆತ ಬೀಳಲಿದೆ. ಅದು ಹೇಗೆ ಅಂದ್ರೆ, ಜೋ ಬೈಡೆನ್ ಕಾಲದಲ್ಲಿ ಉಕ್ರೇನ್ಗೆ ಹಣಕಾಸಿನ ಸಹಾಯ ಮಾಡಲಾಗ್ತಿತ್ತು… ಇದು ಅಮೆರಿಕದ ಆರ್ಥಿಕಥೆಗೂ ಧಕ್ಕೆ ಉಂಟು ಮಾಡಿದೆ.. ಇದೇ ಕಾರಣಕ್ಕ ಈಗ ಡೊನಾಲ್ಡ್ ಟ್ರಂಪ್ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಬೇಕು ಅಂತಿದ್ದಾರೆ. ಹಾಗೆ ಅಮೆರಿಕ ಈಗ ಉಕ್ರೇನ್ಗೆ ನೀಡುತ್ತಿರುವ ಯುದ್ಧದ ಪರಿಹಾರ ಹಣವನ್ನ ಕೂಡ ನಿಲ್ಲಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಅಮೆರಿಕ ಇದರಿಂದ ಭರ್ಜರಿ ಲಾಭ ಗಳಿಸಲಿದೆ. ಯಾಕಂದ್ರೆ ಮೊದಲೇ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ನರಳುತ್ತಿರುವ ಅಮೆರಿಕ ಮುಂದಿನ ದಿನಗಳಲ್ಲಿ ಯುದ್ಧ ನಿಲ್ಲುವುದರಿಂದ ಪರೋಕ್ಷವಾಗಿ ಲಾಭ ಪಡೆಯಲಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಕೂಡ ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸಿದ ಕೀರ್ತಿ ಟ್ರಂಪ್ & ಅಮೆರಿಕಗೆ ಸಲ್ಲುತ್ತದೆ.
ಈ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ಬೆನ್ನಿಗೆ ನಿಂತು, ರಷ್ಯಾ & ಉಕ್ರೇನ್ನ ಯುದ್ಧಕ್ಕೆ ಪರೋಕ್ಷವಾಗಿ ಎಂಟ್ರಿ ಕೊಟ್ಟಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಅವರು ಬೇರೆಯದ್ದೇ ಮೈಂಡ್ ಸೆಟ್ ಹೊಂದಿದ್ದಾರೆ. ಇದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.