


ಎಲ್ಲ ಎಪಿಸೋಡ್ಗಿಂತಲೂ ಇವತ್ತಿನ ಬಿಗ್ ಬಾಸ್ ಎಪಿಸೋಡ್ ಸೂಪರೋ ಸೂಪರು.. ಸಖತ್ ಮಜಾ ಇರುತ್ತೆ ಅನ್ನೋದನ್ನು ನಾವ್ ಹೇಳ್ತಿಲ್ಲ.. ಬಿಗ್ ಬಾಸ್ ಮನೆಯಿಂದ ರಿಲೀಸ್ ಆದ ಪ್ರೊಮೋನೇ ಹೇಳ್ತಿದ್ದು, ಭಾರಿ ಕುತೂಹಲ ಹುಟ್ಟು ಹಾಕಿದೆ… ಹೌದು, ನಿನ್ನೆಯಷ್ಟೆ ಶೋಭಾ ಶೆಟ್ಟಿ ಮತ್ತು ರಜತ್ ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ ಕಂಟೆಸ್ಟೆಂಟ್ ಮನೆಯವರ ಜೊತೆ ಹೊಂದಿಕೊಂಡು ಆಟ ಆಡೋದು ತುಂಬಾನೆ ಕಷ್ಟ. ಆದ್ರೆ, ಶೋಭಾ ಶೆಟ್ಟಿ ಮತ್ತು ರಜತ್ ಬಂದ ದಿನದಿಂದಲೆ ಚಮಕ್ ಕೊಡ್ತಾ ಇದ್ದಾರೆ. ಬಿಗ್ ಬಾಸ್ಗೆ ಈಗ ಕಳೆ ಬಂತು ಅನಿಸ್ತಿದೆ.
ಶೋಭಾ ಶೆಟ್ಟಿಗೆ ಈ ಬಿಗ್ ಬಾಸ್ ಕಷ್ಟ ಆಗಲ್ಲ ಅನ್ಸುತ್ತೆ. ಯಾಕಂದ್ರೆ, ಇದಕ್ಕೂ ಮೊದಲೇ ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ನಲ್ಲಿ ಆಡಿ ಸೈ ಎನಿಸಿಕೊಂಡಿದ್ರು. ಅಲ್ಲಿ ಕೂಡಾ ಫುಲ್ ಅಗ್ರೆಷನ್ ಆಟವನ್ನೇ ಆಡ್ತಿದ್ರು. ತಮ್ಮ ಮಾತಿನ ಮೂಲಕವೇ ಯಾರ ಬಾಯಿ ಕೂಡ ಮುಚ್ಚಿಸೋ ಸಾಮರ್ಥ್ಯ ಇದೆ. ಇನ್ನ ರಜತ್ ಅನೇಕ ಕನ್ನಡ ರಿಯಾಲಿಟಿ ಶೋನಲ್ಲಿ ಆಡಿರೋ ಎಕ್ಸ್ಪೀರಿಯನ್ಸ್ ಇದೆ. ಫಿಸಿಕಲ್ ಟಾಸ್ಕ್ ಬಂದ್ರೆ ಟಕ್ಕರ್ ಕೊಟ್ಟೇ ಕೊಡ್ತಾರೆ. ಇಷ್ಟು ದಿನ ತ್ರಿವಿಕ್ರಮ್ಗೆ ಶಕ್ತಿಯಲ್ಲಿ ಯಾರು ಸಮನಾಗಿಲ್ಲ ಅನ್ನೋ ಹೊತ್ತಿಗೆ ಬಿಗ್ ಬಾಸ್ ರಜತ್ರನ್ನ ಕಳಿಸಿರೋದು ಆಟಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಶೋಭಾ ಶೆಟ್ಟಿ ಮತ್ತು ಶರತ್ ಎಕ್ಸ್ಪೀರಿಯನ್ಸ್, ಹಾಗೆ 50 ದಿನದ ನಂತರ ಬಂದಿರೋ ಕಾರಣ ಆಟ ಹೇಗೆ ಆಡಬೇಕು ಅನ್ನೋ ಐಡಿಯಾ ಇರುತ್ತೆ. ಇವರಿಬ್ಬರು ಮಾತನಾಡೋದನ್ನ ನೋಡಿದ್ರೆನೆ ಗೊತ್ತಾಗುತ್ತೆ ಫುಲ್ ಪ್ರಿಪೇರ್ ಆಗೇ ಬಂದಿದ್ದಾರೆ ಅಂತ.
ಇವತ್ತಿನ ಎಪಿಸೋಡ್ ತಂಬಾನೆ ಸ್ಪೆಷಲ್ ಆಗಿರಲಿದೆ. ಮನೆಯಲ್ಲಿ ಇವತ್ತು ಸಹ ಗ್ರೂಪ್ ಮಾಡಿ ಆಡೋ ಆಟ ಇದೆ. ವೈಲ್ಡ್ ಕಾರ್ಡ್ ಕಂಟೆಸ್ಟೆಂಟಾಗಿ ಬಂದಿರೋ ಶೋಭಾ ಶೆಟ್ಟಿ ಮತ್ತು ರಜತ್ ಮದ್ಯೆ ಟೀಮ್ ಕ್ಯಾಪ್ಟನ್ ಆಗಲು ಯಾರು ಅರ್ಹ, ಯಾರು ಅನರ್ಹ ಅಂತ ಪ್ರಶ್ನೆ ಬಂದಿತ್ತು.. ಆಗ ರಜತ್ಗೆ ಹೆಚ್ಚಿನ ಅನರ್ಹ ಮತ ಬಂದರೆ, ಶೋಭಾ ಶೆಟ್ಟಿ ಅರ್ಹ ಮತ ಬಂದಿದೆ.
ಇನ್ನು, ಇಲ್ಲಿ ಮಂಜಣ್ಣ ಮತ್ತೆ ಶೋಭಾ ಶೆಟ್ಟಿ ಮದ್ಯೆ ಜಗಳ ಹೊತ್ತಿಕೊಂಡಿದೆ. ಮಂಜಣ್ಣ ಕೊಟ್ಟ ಕಾರಣವನ್ನ ಶೋಭಾ ಪ್ರಶ್ನೆ ಮಾಡ್ತಾರೆ. ಇಲ್ಲಿ ಶೋಭಾ ಶೆಟ್ಟಿ, ಮಂಜಣ್ಣನ ಬಾಯಿ ಮುಚ್ಚಿಸ್ತಾರೆ ಅಂದ್ರೆ ಮೆಂಟಲಿ ಎಷ್ಟು ಸ್ಟ್ರಾಂಗ್ ಇದ್ದಾರೆ ಅಂತಾ ಗೊತ್ತಾಗುತ್ತೆ. ಟೋಟಲಿ ಮಂಜಣ್ಣನ್ ಬೆವರಿಳಿಸಿಬಿಟ್ರು. ಇಲ್ಲಿವರೆಗೆ ಬಿಗ್ ಬಾಸ್ ಮನೆಯಲ್ಲಿ ಕೆಲವು ಸದಸ್ಯರಿಗೆ ಹಾಗೂ ಅವರು ಕೊಡೋ ಕಾರಣಗಳಿಗೆ ಪ್ರಶ್ನೆ ಮಾಡೋರು ಇರ್ಲಿಲ್ಲ. ಆದ್ರೆ ಈಗ ಶೋಭಾ ಶೆಟ್ಟಿ ಎಲ್ಲರಿಗೂ ಸರಿಯಾಗೆ ಕ್ಲಾಸ್ ತಗೋತಾರೆ ಅಂತಾ ಅನಿಸ್ತಿದೆ. ಈ ಮನೆಯಲ್ಲಿ ಒಬ್ಬ ಸ್ಟ್ರಾಂಗ್ ಲೇಡಿ ಕಂಟೆಸ್ಟೆಂಟ್ನ ಕೊರತೆ ಇತ್ತು. ಈಗ ಫುಲ್ಫಿಲ್ ಆಗಿದೆ ಅನಿಸ್ತಿದೆ. ಇವರನ್ನ ನೋಡ್ತಾ ಇದ್ರೆ ಸೀಸನ್ 10ರ ಸಂಗೀತಾ ಶೃಂಗೇರಿಯನ್ನ ನೋಡಿದಹಾಗೆ ಅನಿಸ್ತಿದೆ.