ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಮಿತಿ ಮೀರಿದೆ.. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ತರ ವಾಯು ಮಾಲಿನ್ಯದಿಂದ ಜನ ತತ್ತರಿಸುವ ದಿನಗಳು ದೂರವೇನಿಲ್ಲ…






ಯಾಕಂದ್ರೆ ಬೆಂಗಳೂರು ಕೂಡ ಈಗ ವಾಯು ಮಾಲಿನ್ಯದಿಂದ ತೀರಾ ಹದಗೆಟ್ಟಿದೆ.. ಮಾತ್ರವಲ್ಲದೇ, ಜಲ ಮಾಲಿನ್ಯವೂ ಕೂಡ ಬೆಂಗಳೂರಿನ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ದೆಹಲಿ ವಾಯು ಗುಣಮಟ್ಟ ಸೂಚ್ಯಂಕ 342 ತಲುಪಿದೆ. ಅತ್ಯಂತ ಕಳಪೆ ಮಟ್ಟದಲ್ಲಿ ಇದನ್ನ ಗುರುತಿಸಲಾಗಿದೆ. ಆದರೆ ಬೆಂಗಳೂರು ಈ ಕಳಪೆ ಮಟ್ಟದಲ್ಲಿ ಸಧ್ಯ ಇಲ್ಲದಿದ್ದರೂ ಮುಂದೆ ಇದು ಎಚ್ಚರಿಕೆ ಗಂಟೆಯಾಗಿದೆ.









ನಗರದ ಅನೇಕ ಪ್ರದೇಶಗಳಲ್ಲಿ ಎಕ್ಯೂಐ ಮಟ್ಟ ಕಳಪೆ ವರ್ಗದಲ್ಲೇ ಮುಂದುವರೆದಿದ್ದು ನಗರ, ವಾಯು ಮಾಲಿನ್ಯ ಬಿಕ್ಕಟ್ಟಿನ ಪರಿಣಾಮ ಹೊಂದಿರುವುದನ್ನು ಪ್ರತಿಬಿಂಬಿಸುತ್ತಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ವ್ಯವಸ್ಥೆ ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ.
ದೇಶದ ಪವಿತ್ರ ನದಿಗಳಲ್ಲಿ ಒಂದಾಗಿರುವ ಯಮುನಾ ವಾಯು ಮಾಲಿನ್ಯದ ಪರಿಣಾಮಕ್ಕೆ ಒಳಗಾಗಿದೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತೀರಿ ಅರ್ಥೈಸಿಕೊಳ್ಳಿ ಎಂದು ಕೋರ್ಟ್ ಗಂಭೀರ ಎಚ್ಚರಿಕೆ ನೀಡಿತ್ತು. ಅದೇ ತರ ಬೆಂಗಳೂರಿನ ನದಿಗಳು ಕಾಲುವೆಗಳು ಮಾಲಿನ್ಯದಿಂದ ದೂರವಿಲ್ಲ… ವೃಷಭಾವತಿ ನದಿ ಇಂದು ಮಾಲಿನ್ಯಗೊಂಡು ರಾಜ ಕಾಲುವೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಶೇ. 50ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳೇ ಕಾರಣ. ಕಳೆದ 15 ವರ್ಷಗಳಿಂದೀಚೆಗೆ ವಾಹನಗಳ ಸಂಖ್ಯೆ ಹೆಚ್ಚಳದಿಂದ ಸಂಚಾರ ದಟ್ಟಣೆಯೂ ಅಧಿಕವಾಗಿದೆ. ಹಳೆಯ ವಾಹನಗಳಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ. ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವಲ್ಲಿ ಮೆಟ್ರೋ ದೊಡ್ಡ ಪಾತ್ರ ವಹಿಸಿದೆ. ಆದ್ರೆ ನಗರದಲ್ಲಿ ನಡೆಯುವ ದೊಡ್ಡ ದೊಡ್ಡ ಕಾಮಗಾರಿಗಳು ಕೂಡ ಮಾಲಿನ್ಯಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಪ್ರಾರಂಭದಲ್ಲೇ ಎಚ್ಚೆತ್ತುಕೊಂಡು ಮಾಲಿನ್ಯವನ್ನ ಕಡಿಮೆ ಮಾಡಿದರೆ ಒಳ್ಳೆಯದು ಇಲ್ಲದಿದ್ದರೆ, ಮತ್ತೊಂದು ದೆಹಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.