

ರಾಷ್ಟ್ರ ರಾಜಧಾನಿ ದೆಹಲಿ ಈಗ ವಿಷದ ತಾಣವಾಗಿ ಬದಲಾಗಿದೆ… ಕೋಟಿ ಕೋಟಿ ಜನರಿಗೆ ಆಶ್ರಯ ನೀಡಿರುವ ದೆಹಲಿ ಈಗ ಅವರ ಜೀವಕ್ಕೇ ಮಾರಕವಾಗುತ್ತಿದೆ.. ಯಾಕಂದ್ರೆ, ಉಸಿರಾಡುವ ಗಾಳಿ ವಿಷ, ಕುಡಿಯುವ ನೀರು ಕಲುಷಿತ.. ಸೇವಿಸುವ ಆಹಾರವೂ ವಿಷಯುಕ್ತ.. ರಾತ್ರಿಯಾದ್ರೆ ದಟ್ಟವಾದ ಮಂಜಿನ ಕಾಟ.. ಅಷ್ಟೇ ಅಲ್ಲ.. ಮನೆಯಿಂದ ಹೊರಗೆ ಕಾಲಿಟ್ರೆ ಸಾಕು ಸಾವು ಬೆನ್ನೇರಿದಂಥಾ ಪರಿಸ್ಥಿತಿ.. ಯಾವಾಗ ಏನಾಗುತ್ತೋ ಅನ್ನೋ ಭಯ.. ದೆಹಲಿಯಲ್ಲಿ ಇಂಥಾ ಭಯಾನಕ ಕೆಟ್ಟ ಸ್ಥಿತಿ ನಿರ್ಮಾಣವಾಗೋಕೆ ಕಾರಣವೇನು? ಜನರು ಸಾವಿನ ಭೀತಿ ಮಧ್ಯೆಯೇ ಬದುಕುವಂತಾ ವಾತಾವರಣ ಸೃಷ್ಟಿಯಾಗಿದ್ಯಾಕೆ? ದೆಹಲಿ ವಿಷದ ತಾಣವಾಗಲು ಅಸಲಿ ಕಾರಣವೇನು ಅನ್ನೋದನ್ನು ಹೇಳ್ತೀವಿ.
ದೆಹಲಿ ಪರಿಸ್ಥಿತಿ ಇಷ್ಟೊಂದು ಡೇಂಜರ್ ಯಾಕಾಯ್ತು ಅಂತಾ ಸಂಪೂರ್ಣವಾಗಿ ಹೇಳ್ತೀವಿ ಅದಕ್ಕೂ ಮೊದಲು ಈಗ ದೆಹಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನಿಮಗೆ ಹೇಳಲೇಬೇಕು.. ಸದ್ಯ ದೆಹಲಿಯಲ್ಲಿ 3 ಕೋಟಿ 38 ಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಆದ್ರೆ, ಆ ಎಲ್ಲಾ ಜನರ ಆರೋಗ್ಯದ ಮೇಲೂ ಸಾವಿನ ವಕ್ರದೃಷ್ಟಿ ಬೀರಿದೆ. ಯಾಕಂದ್ರೆ, ಎಲ್ಲರೂ ದೆಹಲಿಯ ವಿಷಮಕಾರಿ ವಾತಾವರಣದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಮೊದಲನೇ ಅಪಾಯಕಾರಿ ಅಂದರೆ ದೆಹಲಿ ಒಡಲಲ್ಲಿ ಬೀಸುತ್ತಿರುವ ವಿಷಗಾಳಿ… ಇದು ಇಡೀ ದೆಹಲಿಯಾದ್ಯಂತ ಕಂಡು ಬರ್ತಿರುವ ದೃಶ್ಯ.. ರಾಷ್ಟ್ರ ರಾಜಧಾನಿಯ ಪ್ರತಿ ಏರಿಯಾದಲ್ಲೂ ವಾಯುಗುಣಮಟ್ಟ ಕೆಳಮಟ್ಟಕ್ಕೆ ಕುಸಿದಿದೆ.. ದೆಹಲಿಯ ಆನಂದ ವಿಹಾರ ಏರಿಯಾದಲ್ಲೇ ಗಾಳಿ ಅತಿ ಕಳಪೆಯಾಗಿದೆ. ಜನರು ಮನೆಯಿಂದ ಹೊರಗೆ ಬಂದ್ರೆ ವಿಷ ಗಾಳಿಯೇ ಅವರ ದೇಹ ಸೇರುತ್ತಿದೆ.
ಇನ್ನೊಂದು ಶಾಕಿಂಗ್ ಸಂಗತಿ ಅಂದ್ರೆ ದೆಹಲಿಯ ನೀರೂ ಕೂಡ ಮಲೀನವಾಗಿದೆ ಅಂತಾ ವರದಿಗಳು ಬಂದಿವೆ. ಈಗಾಗ್ಲೇ ವಿಷಪೂರಿತವಾಗಿರುವ ಗಾಳಿ, ನೀರಿನೊಂದಿಗೆ ಬೆರೆತು ಜನರ ದೇಹ ಸೇರ್ತಿದೆ. ಮತ್ತೊಂದೆಡೆ, ದೆಹಲಿಯ ಪ್ರಮುಖ ನದಿ ಯಮುನಾ ನದಿ, ಸಂಪೂರ್ಣ ಕಲುಷಿತಗೊಂಡು ದೊಡ್ಡ ಪ್ರಮಾಣದಲ್ಲಿ ನೊರೆ ಏಳುತ್ತಿದ್ದು, ಆತಂಕ ಹೆಚ್ಚಿಸಿದೆ.
ಸದ್ಯ ಚಳಿಗಾಲ ಶುರುವಾಗಿರೋದ್ರಿಂದ ದೆಹಲಿಯಲ್ಲಿ ವಿಷಗಾಳಿ, ಕಲುಷಿತ ನೀರಿನ ಜತೆಗೆ ದಟ್ಟವಾದ ಮಂಜು ವಿಪರೀತ ಕಾಟ ಕೊಡುತ್ತಿದೆ.. ಸಂಜೆ ೫ ಗಂಟೆ ಹೊತ್ತಿಗೇ ದೆಹಲಿಗೆ ಮಂಜಿನ ಹೊದಿಗೆ ಹಾಕಿ ಬಿಡುತ್ತೆ.. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹೆಡ್ಲೈಟ್ ಹಾಕಿದ್ರೂ ಗೋಚರಿಸುವುದಿಲ್ಲ. ಇದ್ರಿಂದ ಅನೇಕ ಅಪಘಾತಗಳು ಸಂಭವಿಸಿವೆ. ಈಗಲೂ ಸಂಭವಿಸುತ್ತಲೇ ಇವೆ. ಇನ್ನು, ಬೆಳಗ್ಗೆ ೭ ಗಂಟೆಯಾದ್ರೂ ಮಂಜಿನ ಹೊದಿಕೆಯಿಂದಾಗಿ ದೆಹಲಿ ಕತ್ತಲಲ್ಲಿ ಮುಳುಗಿದಂತೆ ಮಾಡುತ್ತೆ. ಇದ್ರಿಂದಾಗಿ ವಿಮಾನಗಳ ಹಾರಾಟ, ರೈಲು ಸಂಚಾರದಲ್ಲೂ ವಿಳಂಬವಾಗಿ ಪ್ರಯಾಣಿಕರು ಪರದಾಡ್ತಿರೋದು ಅಷ್ಟಿಷ್ಟಲ್ಲ. ಅತಿಯಾದ ಹೊಗೆ ಮಾಲಿನ್ಯದಿಂದಾಗಿ ಗೋಚರತೆ ಶೂನ್ಯವಾಗಿದ್ದು, ನಗರವು ‘ಗ್ಯಾಸ್ ಚೇಂಬರ್’ ಆಗಿ ಪರಿವರ್ತನೆಯಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಈಗ ದೆಹಲಿಯ ನಿವಾಸಿಗಳು ಇನ್ನಿಲ್ಲದ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ. ವಿಷ ಗಾಳಿ, ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇನ್ನೂ ಆಘಾತಕಾರಿ ಅಂದ್ರೆ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈಗಾಗ್ಲೇ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಲಾಗಿದ್ದು, ಮನೆಯಲ್ಲಿದ್ದೇ ಮಕ್ಕಳು ಆನ್ಲೈನ್ನಲ್ಲಿ ಪಾಠ ಕೇಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಬದಲಾವಣೆ ಪ್ರಕಾರ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗಳ ಸಮಯ ಬೆಳಗ್ಗೆ 8:30 ರಿಂದ ಸಂಜೆ 5 ರವರೆಗೆ, ಕೇಂದ್ರ ಸರ್ಕಾರಿ ಕಚೇರಿಗಳ ಸಮಯ ಬೆಳಗ್ಗೆ 9 ರಿಂದ ಸಂಜೆ 5:30 ರವರೆಗೆ ಮತ್ತು ದೆಹಲಿ ಸರ್ಕಾರಿ ಕಚೇರಿಗಳ ಸಮಯ ಬೆಳಗ್ಗೆ 10 ರಿಂದ ಸಂಜೆ 6:30 ರವರೆಗೆ ನಿಗದಿಪಡಿಸಿ ಸಿಎಂ ಅತಿಷಿ ಆದೇಶ ಹೊರಡಿಸಿದ್ದಾರೆ.
ಸದ್ಯ ದೆಹಲಿ ಮಾಲಿನ್ಯ ಕಂಟ್ರೋಲ್ ಮಾಡಿ ಜನರಿಗೆ ಆರೋಗ್ಯಕರ ವಾತಾವರಣ ಸೃಷ್ಟಿಸಲು ದೆಹಲಿ ಸರ್ಕಾರ ಶತಃಪ್ರಯತ್ನ ನಡೆಸ್ತಿದೆ.. ಆದ್ರೆ, ವಿಷಯುಕ್ತ ವಾತಾವರಣದಿಂದ ದಿಲ್ಲಿವಾಸಿಗಳಿಗೆ ಯಾವಾಗ ಮುಕ್ತಿ ಸಿಗುತ್ತೋ ಅಂತಾ ಕಾಯುತ್ತಿದ್ದಾರೆ.