
ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ಚುನಾವಣಾ ಕಾವು ಜೋರಾಗಿದೆ. ಇದರ ಮಧ್ಯೆ ಕಾಂಗ್ರೆಸ್-ಬಿಜೆಪಿ ನಾಯಕರ ವಾಗ್ಯುದ್ಧ ಭಾರಿ ಸದ್ದು ಮಾಡುತ್ತಿದೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತಿನ ಕದನ ಏರ್ಪಟ್ಟಿದೆ. ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ ಮಾತಾಡಿರುವ ಯೋಗಿ, ಮುಸ್ಲಿಂ ತುಷ್ಟೀಕರಣದ ಜೊತೆಗೆ ಕರ್ನಾಟಕದ ಇತಿಹಾಸ ಕೆದಕಿದ್ದಾರೆ. ಮುಸ್ಲಿಂ ಪರ ಮಾತನಾಡುವ ಖರ್ಗೆಗೆ ಯೋಗಿ ರಜಾಕಾರರನ್ನ ನೆನಪು ಮಾಡಿಸಿದ್ದಾರೆ. ನಿಮ್ಮ ತಾಯಿ ಸಹೋದರಿಯರನ್ನ ಕಗ್ಗೊಲೆ ಮಾಡಿದ ರಜಾಕಾರರು ನೆನಪಿದ್ದಾರಾ ಎಂಬ ರೀತಿಯ ಪ್ರಶ್ನೆಗಳನ್ನ ಮಾಡಿದ್ದಾರೆ. ರಜಾಕಾರರು ಈ ಹೆಸರನ್ನ ಅನೇಕ ಜನ ಕೇಳಿರಲಿಕ್ಕಿಲ್ಲ. ಹಾಗಾದರೆ ಈ ರಜಾಕಾರರು ಯಾರು? ಇವರ ಹಿನ್ನೆಲೆ ಏನು?
ಹೈದ್ರಾಬಾದ್ ಕರ್ನಾಟಕ ಅಂದ್ರೆ ಈಗಿನ ಕಲ್ಯಾಣ ಕರ್ನಾಟಕದಲ್ಲಿ ರಜಾಕಾರರ ಅಟ್ಟಹಾಸ ಹೇಗಿತ್ತು. ಈಗಲೂ ಅಲ್ಲಿನ ಜನರಿಗೆ ರಜಾಕಾರರ ಹೆಸರು ಕೇಳಿದ್ರೆ ರಕ್ತ ಕುದಿಯುತ್ತೆ. ರಜಾಕಾರರು ಅಂದ್ರೆ ನರ ರೂಪದ ರಕ್ಕಸರು ಅಂದರೆ ತಪ್ಪಾಗಲ್ಲ. ಹೌದು ರಜಾಕಾರರು ಎಂಥಾ ಮತಾಂಧರಾಗಿದ್ರು ಅಂದ್ರೆ ಇವರ ಕ್ರೌರ್ಯವನ್ನ ಅಲ್ಲಿನ ಜನರು ಎಂದಿಗೂ ಮರೆಯೋದಿಲ್ಲ. ಆ ರೀತಿಯ ದಾನವರ ಆರ್ಭಟವನ್ನ ಮೆರೆದಿದ್ರು ಈ ರಜಾಕಾರರು. ರಜಾಕಾರರು ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆಯ ಅರೆಸೇನಾ ವಿಭಾಗವಾಗಿತ್ತು. ಬಹದ್ದೂರ್ ಯಾರ್ ಜಂಗ್ ಈ ಸಂಘಟನೆಯನ್ನ 1938ರಲ್ಲಿ ಸ್ಥಾಪನೆ ಮಾಡ್ತಾನೆ. ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಈಗ ಆಲ್ ಇಂಡಿಯಾ ಪಕ್ಷವಾಗಿ ಬೆಳೆದಿದೆ.
1947 ಆಗತಾನೆ ದೇಶ ಸ್ವತಂತ್ರವಾಗಿತ್ತು. ಆದರೆ ದೇಶದ ಎಲ್ಲಾ ಭಾಗಗಳಿಗೂ ಸ್ವಾತಂತ್ರ್ಯ ಇತ್ತಾ ಅನ್ನೇ ಪ್ರಶ್ನೆ ಉದ್ಭವಿಸಿತ್ತು. ಆದ್ರೆ, ಅನೇಕ ರಾಜಮನೆತನಗಳು ತಮ್ಮ ರಾಜ್ಯವನ್ನ ಬಿಟ್ಟುಕೊಡಲು ರೆಡಿ ಇರಲಿಲ್ಲ ಅನ್ನೋ ವಿಚಾರವನ್ನು ಇಲ್ಲಿ ಗಮನಿಸಲೇಬೇಕು. ಅದರಲ್ಲಿ ಈ ಹೈದರಾಬಾದಿನ ನಿಜಾಮ ಕೂಡ ಒಬ್ಬ. ದೇಶದ ಎಲ್ಲ ಪ್ರದೇಶಕ್ಕೆ 1947 ಕ್ಕೆ ಸ್ವತಂತ್ರವಾದರೆ ಹೈದ್ರಬಾದ್ ಮಾತ್ರ 1948 ಕ್ಕೆ ಸ್ವತಂತ್ರವಾಗುತ್ತೆ. ಹೈದರಾಬಾದಿನ ನಿಜಾಮ ಪಾಕಿಸ್ತಾನ ಸೇರುವ ಬಯಕೆಯನ್ನ ಹೊಂದಿದ್ದ. ಆದರೆ ಅಲ್ಲಿನ ಜನರು ಸ್ವತಂತ್ರವನ್ನ ಬಯಸಿದ್ದು, ಇದೆ ಕಾರಣದಿಂದ ಈಗಿನ ಕಲ್ಯಾಣ ಕರ್ನಾಟಕದ ಜನರು ನಿಜಾಮನ ವಿರುದ್ದ ದಂಗೆಯನ್ನ ಮಾಡ್ತಾರೆ. ಇದನ್ನ ಶಮನ ಮಾಡಲು ರಜಾಕಾರರ ಸಹಾಯವನ್ನ ನಿಜಾಮ ಕೇಳ್ತಾನೆ. ಖಾಸಿಂ ರಜ್ವಿ ಈ ಸೇನೆಯ ಮುಖ್ಯಸ್ತನಾಗಿದ್ದ. ಖಾಸಿಂ ರಜ್ವಿ ಎಂಥ ಮತಾಂಧನಾಗಿದ್ದ ಈತನ ಕೌರ್ಯ ರಕ್ತ ಸಿಕ್ತ ಇತಿಹಾಸಕ್ಕೆ ಕಾರಣವಾಯ್ತು.

ಬೀದರದ ಗೋಟಾದ ಜನರು ಸ್ವತಂತ್ರಕ್ಕಾಗಿ ನಿಜಾಮರ ವಿರುದ್ದ ದಂಗೆಯನ್ನ ಏಳ್ತಾರೆ. ಈ ಧಂಗೆಯನ್ನ ರಜಾಕಾರರನ್ನ ಬಳಸಿ ಶಮನ ಮಡ್ತಾನೆ. ಅವರ ಕೌರ್ಯವನ್ನ ಮರೆಯದ ಜನರು ಕಂಡಕಂಡಲ್ಲಿ ರಜಾಕಾರರನ್ನ ಕೋಲ್ಲಲಾರಂಭಿಸ್ತಾರೆ. ಇದರಲ್ಲಿ ಖಾಸಿಂ ರಜ್ವಿ ಆಪ್ತ ಸಹ ಕಪೊಲ್ಲಲ್ಪಡ್ತಾನೆ. ಇದರ ಸೇಡನ್ನ ತಿರಿಸಿಕೋಳ್ಳಬೇಕು ಎಂದು ರಜ್ವಿ ಕಂಡಕಂಡಲ್ಲಿ ಜನರನ್ನ ಕೊಲ್ತಾನೆ. ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಸೈನಿಕ ಕಾರ್ಯಾಚರಣೆಮಾಡಿ ಹೈದ್ರಬಾದನ್ನ ಸ್ವತಂತ್ರ ಭಾರತಕ್ಕೆ ಸೇರ್ಪಡೆ ಮಾಡ್ತಾರೆ.
ಆದರೆ ಇದಕ್ಕು ಮಲ್ಲಿಕಾರ್ಜುನ ಖರ್ಗೆಗೂ ಏನು ಸಂಬಂಧ, ಯೋಗಿ ಯಾಕೆ ಹಾಗೆ ಹೇಳಿದ್ರು ಅಂತ ಯೋಚನೆ ಬರೋದು ಸಹಜ. ವೀಕ್ಷಕರೆ ಮಲ್ಲಿಕಾರ್ಜುನ ಖರ್ಗೆ ಹುಟ್ಟಿದ್ದು ಬಾಲ್ಕಿ ತಾಲೂಕಿನ ವರವಟ್ಟಿಯಲ್ಲಿ. ರಜಾಕಾರರ ಆರ್ಭಟದ ಸಂದರ್ಭದಲ್ಲಿ ಖರ್ಗೆಯವರಿಗೆ ಕೇವಲ 6 ವರ್ಷ ಅಷ್ಟೆ. ಕಂಡಕಂಡ ಊರಿನಮೇಲೆಲ್ಲಾ ದಾಳಿಮಾಡುತ್ತಿದ್ದ ಖಾಸಿಂ ರಜ್ವಿ ಒಂದುದಿನ ವರವಟ್ಟಿಗ್ರಾಮದ ಮೇಲೂ ಸಹ ದಾಳಿಯನ್ನ ಮಾಡ್ತಾನೆ. ಇಡೀ ಊರಿಗೇ ಬೆಂಕಿ ಹಚ್ಚಿ ಜನರನ್ನು ಸಜೀವ ದಹನ ಮಾಡುತ್ತಾನೆ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ತಾಯಿ ಮತ್ತು ತಂಗಿ ಸುಟ್ಟು ಬೂದಿಯಾಗ್ತಾರೆ. ಅದೃಷ್ಠ ಎನ್ನುವಂತೆ ಖರ್ಗೆ ಪಾರಾಗುತ್ತಾರೆ. ನಂತರ ತಂದೆಯೊಂದಿಗೆ ಬೀದರ್ ಗೆ ಬಂದು ವಿದ್ಯಾಭ್ಯಾಸ ಮಾಡಿ ಇಂದು ದೇಶದ ರಾಜಕೀಯದಲ್ಲಿ ಒಳ್ಳೆಯ ಹೆಸರನ್ನ ಹೊಂದಿದ್ದಾರೆ. ಇದೀಗ ಸಿಎಂ ಯೋಗಿ ಆದಿತ್ಯನಾಥ್, ರಜಾಕಾರರನ್ನು ನೆನಪಿಸಿದ್ದು ಭಾರಿ ಚರ್ಚೆ ಹುಟ್ಟು ಹಾಕಿದೆ..