


ಅಬ್ಬಬ್ಬಾ ಅಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು ಹೇಳಿ.. ೫ ಕೋಟಿ.. ೧೦ ಕೋಟಿ ಇರಬಹುದಾ? ಇದೇ ಜಾಸ್ತಿ.. ಇದಕ್ಕಿಂತರ ಜಾಸ್ತಿ ಇರೋಕೆ ಸಾಧ್ಯನೇ ಇಲ್ಲ ಅಂತಾ ನಿಮಗೆ ಅನ್ನಿಸಬಹುದು.. ಆದ್ರೆ, ನಿಮ್ಮ ಅಂದಾಜಿಗೂ ಮೀರಿದ ಬೆಲೆಯ ಕೋಣ ಇದೆ. ಅದರ ಬೆಲೆ ಕೇಳಿದ್ರೆ ನಿಮ್ಮ ತಲೆ ಗಿರ್ರ ಅನ್ನುತ್ತೆ.. ಅಬ್ಬಬ್ಬಾ ಇಷ್ಟೊಂದ ದುಬಾರಿನಾ ಅಂತಾ ನಿಬ್ಬೆರಗಾಗ್ತೀರಿ.. ಹಾಗಾದರೆ, ಆ ಕೋಣದ ಬೆಲೆ ಎಷ್ಟು ಅಂದ್ರೆ ಬರೋಬ್ಬರಿ ೨೩ ಕೋಟಿ ರೂಪಾಯಿ.. ಕೇಳೋಕೆ ಶಾಕ್ ಅನ್ನಿಸಬಹುದಲ್ಲ.. ಆದ್ರೂ ಇದೇ ಸತ್ಯ..
ನಿಜ.. ಈ ಕೋಣಕ್ಕೆ ಬರೋಬ್ಬರಿ 23 ಕೋಟಿ ರೂಪಾಯಿ ಅಂದ್ರೆ ನಂಬೋಕೆ ಆಗಲ್ಲ. ಅಷ್ಟೇ ಅಲ್ಲ.. ಮನುಷ್ಯರು ಡಯಟ್ ಮಾಡೊದನ್ನ ಕೇಳಿದ್ದಿವಿ ಆದ್ರೆ ಈ ಕೋಣವೂ ಡಯಟ್ ಮಾಡುತ್ತೆ.. ಹಾಗಾದ್ರೆ, ಈ ಕೋಣ ಎಲ್ಲಿದೆ? ಡಯಟ್ ವಿಧಾನ ಹೇಗೆ..!
ಈ ದುಬಾರಿ ಕೋಣ ಇರೋದು ಹರಿಯಾಣ ರಾಜ್ಯದಲ್ಲಿ. ಇದರ ಹೆಸರು ಅನ್ಮೋಲ್ ಅಂತಾ. ಗಿಲ್ ಎಂಬ ವ್ಯಕ್ತಿ ಈ ಗೋಲ್ಡನ್ ಕೋಣದ ಮಾಲೀಕ. ಇದು ಸುರ್ತಿ ತಳಿಯ ಕೋಣವಾಗಿದೆ. ಬರೋಬ್ಬರಿ 1500kg ತೂಕವಿದೆ. ಪುಷ್ಕರ್ ಮತ್ತು ಮೀರೆತ್ ನಲ್ಲಿ ನಡೆದ ಕೃಷಿ ಸಮ್ಮೆಳನದಲ್ಲಿ ಪ್ರದರ್ಶನಕ್ಕೆ ತರಲಾಗಿದ್ದ ಈ ಕೋಣದ ಬೆಲೆ ಕೇಳಿ ಅಲ್ಲಿದ್ದ ಜನರು ಬೆಚ್ಚಿ ಬೆರಗಾಗಿದ್ದಾರೆ.
ಈ ಕೋಣದ ಆರೋಗ್ಯ ಕಾಪಾಡಲು ನಿತ್ಯ ಸಾವಿರದ ಐದು ನೂರು ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದರ ಆಹಾರ ಪದ್ದತಿ ತುಂಬಾ ವಿಶಿಷ್ಟವಾಗಿದೆ. ನಿತ್ಯ 250 ಗ್ರಾಂ ಬಾದಾಮಿ, ದಿನಕ್ಕೆ 30 ಬಾಳೆಹಣ್ಣು, 4KG ದಾಳಿಂಬೆ, 5 ಲೀಟರ್ ಹಾಲು ಹಾಗೂ 20 ಮೊಟ್ಟೆ ನೀಡಲಾಗುತ್ತದೆ. ಇದಲ್ಲದೆ ಹಿಂಡಿ, ಹಸಿ ಮೇವು, ತುಪ್ಪ, ಸೋಯಾಬಿನ್, ಮೆಕ್ಕೆಜೋಳ ನೀಡ್ತಾರಂತೆ. ಇನ್ನೂ ವಿಶೇಷ ಅಂದ್ರೆ ಈ ಕೋಣಕ್ಕೆ ಆಯಿಲ್ ಕೇಕ್ ತಿನ್ನಿಸಲಾಗುತ್ತೆ.. ಅಲ್ಲದೇ, ದಿನನಿತ್ಯ ಎರಡು ಬಾರಿ ಸ್ನಾನ ಮಾಡಿಸಿ, ಬಾದಾಮಿ ಹಾಗೂ ಸಾಸಿವೆ ಎಣ್ಣೆಯಿಂದ ಮಾಲಿಶ್ ಮಾಡುತ್ತಾರಂತೆ. ಇದರಿಂದ ಸಂತಾನೋತ್ಪತ್ತಿ ಮಾಡುವಲ್ಲಿ ಹಾಗೂ ಮೇಳಗಳಲ್ಲಿ ಪರದರ್ಶನ ನೀಡಲು ಈ ಕೋಣ ಯೋಗ್ಯವಾಗಿರುತ್ತೆ ಅಂತಾ ಮಾಲೀಕರು ಹೇಳಿದ್ದಾರೆ. ಅನ್ಮೋಲ್ ಕೋಣವನ್ನ ಸಾಕಲು ನಿತ್ಯ 25ಲೀಟರ್ ಹಾಲು ಕೊಡುತ್ತಿದ್ದ ಇದರ ತಾಯಿ ಹಾಗು ತಂಗಿಯನ್ನ ಮಾರಾಟ ಮಾಡಲಾಗಿದೆಯಂತೆ..
ಇನ್ನು, ಇಷ್ಟೆಲ್ಲಾ ಖರ್ಚು ಮಾಡಲಾಗುವ ಈ ಕೋಣ ಆದಾಯ ತಂದುಕೊಡುವಲ್ಲೂ ಹಿಂದೆ ಬಿದ್ದಿಲ್ಲ.. ಪ್ರತಿ ತಿಂಗಳಿಗೆ ೪-೫ ಲಕ್ಷ ರೂಪಾಯಿ ಆದಾಯ ತಂದುಕೊಡುತ್ತೆ.. ವಾರಕ್ಕೆ ಎರಡು ಬಾರಿ ವೀರ್ಯದಾನ ಮಾಡಿ ತಿಂಗಳಿಗೆ ನಾಲ್ಕರಿಂದ ಐದು ಲಕ್ಷದವರೆ ಆದಾಯವನ್ನ ಗಳಿಸುತ್ತೆ ಅಂತಾ ಮಾಲೀಕರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಜನ ಈ ಕೋಣದ ಖರೀದಿಗೆ ಮುಂದಾದ್ರೂ ಮಾಲೀಕ ಗಿಲ್ ಮಾರಲು ನಿರಾಕರಿಸಿದ್ದಾರೆ. ಈ ಕೋಣ ನನ್ನ ಮನೆ ಸದಸ್ಯ ಎಂದು ಹೇಳಿಕೊಡಿದ್ದಾರೆ. ಸದ್ಯಕ್ಕೆ ಈ ಕೋಣದ ಬೆಲೆ 23ಕೋಟಿ ಎಂದು ಗಿಲ್ ಹೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಕೋಣ ಸೆನ್ಸೇಷನ್ ಸೃಷ್ಟಿಸಿದೆ.