

ನಿಮಗೊಂದು ಶಾಕಿಂಗ್ ಸುದ್ದಿ.. ನಿಮ್ಮ ಬಿಪಿಎಲ್ ಕಾರ್ಡ್ ಅನರ್ಹ ಆಗಿರಬೇಕು.. ಹೋಗಿ ಈಗಲೇ ಚೆಕ್ ಮಾಡಿ.. ಯಾಕಂದ್ರೆ, ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲೂ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.. ಕೆಲವೊಂದಿಷ್ಟು ಮಾನದಂಡಗಳನ್ನು ಆಧರಿಸಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಸಜ್ಜಾಗಿದೆ..
ಯೆಸ್.. ರಾಜ್ಯದಲ್ಲಿ 6.5 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಅದರಲ್ಲಿ 4.6 ಕೋಟಿ ಜನರು ಬಿಪಿಎಲ್ ಕಾರ್ಡ್ ಫಲಾನುಭವಿಗಳಿದ್ದಾರೆ. ಅರ್ಹ ಅಲ್ಲದವರೂ ರೇಷನ್ ಕಾರ್ಡ್ ಪಡೆದು ಸರ್ಕಾರಿ ಸೌಲಭ್ಯ ಪಡೆದುಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ.. ಈ ಕಾರಣದಿಂದಾಗಿ ಉಳ್ಳವರು ಪಡೆದಿರುವ ೧೪ ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವುದಾಗಿ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪರೇ ಸ್ಪಷ್ಟ ಪಡಿಸಿದ್ದಾರೆ.. ಈಗಾಗ್ಲೇ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಪಡೆಯಲು ರಾಜ್ಯ ಸರ್ಕಾರವು ನಿಗದಿತ ಮಾನದಂಡ ರೂಪಿಸಿದೆ. ಆ ನಿಯಮಗಳನ್ನು ಉಲ್ಲಂಘಿಸಿದ್ದರೆ ಅಂತಹವರ ಕಾರ್ಡ್ಗಳನ್ನು ಪತ್ತೆ ಮಾಡಿ ಅನರ್ಹ ಎಂದು ಪರಿಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ರದ್ದು ಮಾಡುತ್ತಿದ್ದಾರೆ.
ಈ ಅಂಶಗಳಿದ್ದರೆ BPL ಕಾರ್ಡ್ ಅನರ್ಹ..!
- ನಿಮ್ಮ ಕುಟುಂಬದಲ್ಲಿ ಯಾರಾದ್ರೂ ಸರ್ಕಾರಿ ನೌಕರರು ಇದ್ರೆ ಕಾರ್ಡ್ ರದ್ದು
- ಸರ್ಕಾರಿ ಅನುದಾನಿತ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿ/ನಿಗಮ/ಸ್ವಾಯತ್ತ ಸಂಸ್ಥೆಗಳು, ನೌಕರರು ಇದ್ದರೆ ಅನರ್ಹ
- ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿ ಮಾಡುತ್ತಿದ್ದರೆ ಅನರ್ಹ
- ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳಿದ್ರೆ ರದ್ದು
- ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವ ಕುಟುಂಬಗಳು
- ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್ ಸೇರಿ ಜೀವನೋಪಾಯಕ್ಕೆ ವಾಣಿಜ್ಯ ವಾಹನ ಹೊಂದಿದ ಕುಟುಂಬ ಹೊರತುಪಡಿಸಿ 4 ಚಕ್ರದ ವಾಹನ ಇದ್ದ ಎಲ್ಲಾ ಕುಟುಂಬಗಳು ಅನರ್ಹ
- ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಅನರ್ಹ
ನೋಡಿದ್ರಲ್ಲ.. ಈ ಎಲ್ಲಾ ಅಂಶಗಳನ್ನೂ ನೀವು ಹೊಂದಿದ್ರೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತೆ.. ಅಂದರೆ ಸರಿಸುಮಾರಿ ೧೪ ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳು ಅನರ್ಹಗೊಳ್ಳಲಿವೆ. ಸರ್ಕಾರದ ಈ ನಿರ್ಧಾರ ನೂರಕ್ಕೆ ನೂರರಷ್ಟು ಸರಿಯಾಗಿದೆ. ಯಾಕೆ ಅಂತಾ ಹೇಳ್ತೀವಿ ಕೇಳಿ.
ಅಕ್ರಮವಾಗಿ ಬಿಪಿಎಲ್ ಕಾರ್ಡುಗಳನ್ನು ಪಡೆದಿರುವವರಿಗೆ ಅಥವಾ ಅನರ್ಹರಿಗೆ ಕಾರ್ಡ್ಗಳನ್ನು ಹಿಂದಿರುಗಿಸಲು ಸರ್ಕಾರ ಅವಕಾಶ ನೀಡಿದೆ. ಕಾರ್ಡ್ದಾರರು ತಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಲ್ಲಿ ಕಾರ್ಡ್ ರದ್ದು ಮಾಡಿಸಿಕೊಳ್ಳಬಹುದು.
ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರು ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಅಕ್ಕಿ ಪಡೆದುಕೊಂಡಿದ್ದರೆ ಅವರಿಗೆ ದಂಡ ಹಾಕಲಾಗುತ್ತದೆ. ಪ್ರತಿ ಕೆಜಿ ಅಕ್ಕಿಗೆ 33 ರೂಪಾಯಿಗಳಂತೆ ದಂಡ ವಿಧಿಸಲಾಗುತ್ತದೆ. ದಂಡ ಪಾವತಿಗೆ ನಿರಾಕರಿಸಿದರೆ ಕಾನೂನು ಕ್ರಮ ನಿಶ್ಚಿತ ಅಂತಾ ಆಹಾರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಚಿವ ಮುನಿಯಪ್ಪ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ನಾವು ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಎಪಿಎಲ್ ವರ್ಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ. ಪರಿಣಾಮವಾಗಿ, ಕೆಲವು ವ್ಯಕ್ತಿಗಳು ಹೊಸ ಬಿಪಿಎಲ್ ಕಾರ್ಡ್ ಅನ್ನು ಸ್ವೀಕರಿಸದಿರಬಹುದು, ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಮಾತ್ರ ಮರು ವರ್ಗೀಕರಿಸಲಾಗುತ್ತಿದೆ ಅಂತಾ ಹೇಳಿದ್ದಾರೆ. ನಿಮ್ಮ ಬಾಸ್ ಟಿವಿ ಧ್ಯೇಯವೂ ಇದೇ ಆಗಿದೆ.. ಉಳ್ಳವರ ಬಿಪಿಎಲ್ ಕಾರ್ಡ್ ರದ್ದು ಮಾಡಿ, ಕಡುಬಡವರಿಗೆ ಬಿಪಿಎಲ್ ಸೌಲಭ್ಯ ಸಿಗುವಂತಾಗಲಿ.. ಯಾಕೆ ಅಂತಾ ನೋಡೋದಾದ್ರೆ,
- ಸ್ಥಳೀಯ ಮಟ್ಟದಲ್ಲಿ ಬಿಪಿಎಲ್ ಕಾರ್ಡ್ ಸೌಲಭ್ಯ ದುರುಪಯೋಗ
- ಅಧಿಕಾರಿಗಳಿಗೆ, ಮಧ್ಯವರ್ತಿಗಳಿಗೆ ದುಡ್ಡು ಕೊಟ್ಟು ಬಿಪಿಎಲ್ ಕಾರ್ಡ್ ಪಡೆಯುತ್ತಿರುವ ಜನರು
- ಒಂದೇ ಕುಟುಂಬದಲ್ಲಿ 2, 3 ಅದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವ ನಿದರ್ಶನ
- ಉಳ್ಳವರ ಪಾಲಾಗದೇ ಕಡುಬಡವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗಲಿ
- ಬಡವರು ಸರ್ಕಾರಿ ಸೌಲಭ್ಯಗಳಿಂದ ವಂಚಿತ ಆಗಬಾರದು
ಸದ್ಯ ಸರ್ಕಾರ ಅನರ್ಹ ಫಲಾನಿಭವಿಗಳ ಬಿಪಿಎಲ್ ಕಾರ್ಡ್ ರದ್ದು ಮಾಡುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ.. ಆದ್ರೆ, ಸರ್ಕಾರ ಈ ಕಾರ್ಯವನ್ನು ಈ ಮೊದಲೇ ಆರಂಭಿಸಬೇಕಿತ್ತು ಅನ್ನೋದು ನಮ್ಮ ಅಭಿಪ್ರಾಯ.. ಅದೇನೆ ಇರಲಿ, ನೀವು ಕೂಡ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಒಮ್ಮೆ ಭೇಟಿ ನೀಡಿ, ನಿಮ್ಮ ಕಾರ್ಡ್ ರದ್ದಾಗಿದೆಯೋ ಇಲ್ವೋ ಅನ್ನೋದನ್ನು ಚೆಕ್ ಮಾಡಿ.. ಇಲ್ಲದೇ ಹೋದ್ರೆ ರೇಷನ್ ಪಡೆಯಲು ಹೋದಾಗ ಆಘಾತ ಗ್ಯಾರಂಟಿ.