
ಜಮೀರ್ ಬ್ಯಾಕ್ ಟು ಬ್ಯಾಕ್ ಯಡವಟ್ಟಿಗೆ ಉಪಸಮರದಲ್ಲಿ ಕಾಂಗ್ರೆಸ್ಗೆ ಫುಲ್ ಡ್ಯಾಮೇಜ್! ಜಮೀರ್ ಮಾತಿಗೆ ಸೈನಿಕ ನಿಗಿ ನಿಗಿ ಕೆಂಡ, ಸಂಪುಟದಿಂದ ಜಮೀರ್ ಗೇಟ್ಪಾಸ್ಗೆ ಟೈಂಬಾಂಬ್ ಫಿಕ್ಸ್ ಮಾಡದ್ರಾ ಡಿಕೆಶಿ? ಜಮೀರ್ ಸೀಟು ಉಳಿಯುತ್ತಾ? ಉರುಳುತ್ತಾ?.
ಒಂದು ಕಡೆ ರಾಜ್ಯ ರಾಜಕೀಯದಲ್ಲಿ ಉಪಸಮರದ ಹವಾ ಜೋರಾಗಿದೆ. ಈ ಕಡೆ ಕಾಂಗ್ರೆಸ್ಗೆ ಸೋಲಿನ ಭಯ ಶುರುವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಉಪಸಮರದ ಬೈಎಲೆಕ್ಷನ್ನಲ್ಲೂ ಗ್ಯಾರಂಟಿ ಹಿಂದೆ ಬಿದ್ದಿತ್ತು. ಆದರೆ ಕಾಂಗ್ರೆಸ್ ನಾಯಕ ಜಮೀರ್ ಭಾಯ್ ಆಡಿದ ಆ ಒಂದು ಮಾತು ಕೈ ಪಕ್ಷಕ್ಕೇ ಕುತ್ತು ತಂದಿದೆ. ಇಷ್ಟೇ ಅಲ್ಲ.. ಕಾಂಗ್ರೆಸ್ ಪಾಳಯದಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಹೌದು.. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಮಾತು ಸಚಿವ ಜಮೀರ್ಗೆ ಅನ್ವಯಿಸೋದ್ರಲ್ಲಿ ಡೌಟೇ ಇಲ್ಲ. ವಿವಾದ.. ವಿವಾದ.. I Don’t Like It! But ವಿವಾದ Likes Me ಅನ್ನೋ ಜಮೀರ್, ಮೈಕ್ ಹಿಡಿದು ಮಾತಾಡೋಕೆ ಶುರು ಮಾಡಿದ್ರು ಅಂದ್ರೆ ಅಲ್ಲೊಂದು ಯಡವಟ್ಟು ಪಕ್ಕಾ ಅಂತ ಎಲ್ಲಿರಿಗೂ ಗೊತ್ತು. ಸದ್ಯ ಕುಮಾರಸ್ವಾಮಿಗೆ ಕರಿಯ ಎಂದಿದ್ದು ಈಗ ಜಮೀರ್ಗೆ ರಾಜಕೀಯ ಭವಿಷ್ಯಕ್ಕೆ ಅಡೆತಡೆ ಉಂಡು ಮಾಡಿದೆ. ವಿಪಕ್ಷಗಳಿಗೆ ಆಹಾರವಾಗಿರುವ ಜಮೀರ್ ಭಾಯ್ ಈಗ ಸ್ವಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಚ್ಡಿಕೆ ಹಾಗೂ ಮನೆಯವರ ವಿರುದ್ಧ ಆ ರೀತಿಯ ಪದ ಪ್ರಯೋಗ ಸರಿ ಅಲ್ಲ ಎಂದು ಕಾಂಗ್ರೆಸ್ ನಾಯಕರೇ ರೊಚ್ಚಿಗೆದಿದ್ದು, ಜಮೀರ್ ವಿರುದ್ಧ ಸೈನಿಕ ಸಿಪಿವೈ ಹಾಗೂ ಡಿಕೆಶಿ ನಿಗಿ ನಿಗಿ ಕೆಂಡವಾಗಿದ್ದಾರೆ. ಜಮೀರ್ ಹೇಳಿಕೆ ಎಫೆಕ್ಟ್ ಚನ್ನಪಟ್ಟಣ ಚುನಾವಣೆ ಮೇಲೂ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ಗೆ ಸೋಲಿನ ಭೀತಿ ಶುರುವಾಗಿದೆ.. ನಾನ್ ಕಾಂಗ್ರೆಸ್ ಪರ ನಿಂತು ತಪ್ಪು ಮಾಡಿದೆ, ನಾನ್ ಏನಾದರೂ ಸೋತರೆ ಅದಕ್ಕೆ ಜಮೀರ್ ಕಾರಣ ಎಂದು ಸಿಪಿ ಯೋಗೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಎಚ್ಡಿಕೆಗೆ ಕರಿಯ ಎಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಾಂಗ್ರೆಸ್ನಲ್ಲೇ ತೀವ್ರ ಅಸಮಾಧಾನದ ಅಲೆ ಎದ್ದಿದೆ. ಅಲ್ಲದೇ, ಡಿಸಿಎಂ ಡಿ.ಕೆ.ಶಿವಕುಮಾರ್ ಜಮೀರ್ ವಿರುದ್ಧ ಕೆಂಡ ಕಾರಿದ್ದು, ಇಷ್ಟು ದಿನ ಜಮೀರ್ ವಿವಾದಾತ್ಮಕ ಹೇಳಿಕೆಯನ್ನು ಸಹಿಸಿಕೊಂಡಿದ್ದು ಸಾಕು ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಹೈಕಮಾಂಡ್ ಬಾಗಿಲು ಬಡಿದ್ದಾರೆ. ಸದ್ಯ ಈ ಗುಸು ಗುಸು ಮಾತು ಚಿಕ್ಕಪೇಟೆಯಿಂದ ದೆಹಲಿವರಗೂ ಹಲ್ಚಲ್ ಹೆಬ್ಬಿಸಿದೆ.
ಸದ್ಯ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಜಮೀರ್ ಅಹಮದ್ ವಿರುದ್ಧ ಸ್ವಪಕ್ವದವರೇ ಸಿಡಿದೆದ್ದು, ಸಂಪುಟದಿಂದ ಗೇಟ್ ಪಾಸ್ ಸಿಗುತ್ತಾ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕುಮಾರಸ್ವಾಮಿಗೆ ಕರಿಯ ಎಂದಿದ್ದು ತಪ್ಪು ಎಂದು ಡಿಕೆಶಿ ಖಂಡಿಸಿದ್ದು, ಜಮೀರ್ ಅವರನ್ನು ತಿದ್ದುವ ಕೆಲಸ ಮಾಡುತ್ತೇವೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೆ.. ಆದ್ದರಿಂದ ಅವರು ಕ್ಷಮೆ ಕೂಡ ಯಾಚಿಸಿದ್ದಾರೆ ಎಂದು ಹೇಳಿದ್ದರು. ಅದಲ್ಲದೇ ಅವರ ವಿರುದ್ಧ ಯಾವ ರೀತಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂಬುದನ್ನು ನಾನು ಇಲ್ಲಿ ಹೇಳಲು ಆಗಲ್ಲ ಎಂದಿದ್ದ ಡಿಕೆ ಶಿವಕುಮಾರ್ ಜಮೀರ್ ಗೇಟ್ಪಾಸ್ ಸುಳಿವು ಕೊಟ್ಟಿದ್ದಾರೆ.
ಅದೇನ ಆಗಲಿ, ಇರಲಾರದೇ ಇರುವೆ ಬಿಟ್ಟುಕೊಂಡು, ಮಾತಿನ ಬರದಲ್ಲಿ ಆಡಿದ ಮಾತು ಸದ್ಯ ಜಮೀರ್ ಅವರ ಬುಡಕ್ಕೆ ಬೆಂಕಿ ಬಿದ್ದಿದೆ. ಇನ್ನು ಜಮೀರ್ ಅವರ ಸೀಟು ಉಳಿಯುತ್ತಾ? ಅಥವಾ ಉರುಳುತ್ತಾ? ಅದನ್ನ ನೀವೇ ಕಮೆಂಟ್ ಮಾಡಿ ತಿಳಿಸಿ?