ಬೆಂಗಳೂರು: ಕ್ರಿಕೆಟ್ ಅಂಗಳಕ್ಕೆ ನಿವೃತ್ತಿ ಹೇಳಿರುವ ಯುವರಾಜ್ ಸಿಂಗ್ ಮದ್ಯ ಮಾರಾಟಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ದುಬಾರಿ ಬೆಲೆಯ ಮದ್ಯ ಮಾರಾಟ ಮಾಡಲು ನಿರ್ಧರಿಸಿದ್ದಾರೆ.
ಯುವರಾಜ್ ಸಿಂಗ್ ಅವರು ಪ್ರೀಮಿಯಂ ಟಕಿಲಾ ಬ್ರ್ಯಾಂಡ್ “ಫಿನೋ” ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಗುರುಗ್ರಾಮದ ಕೋಕಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುರೇಶ್ ರೈನಾ, ಯಜುವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಕೈಫ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಉದ್ಯೋಗವನ್ನು ಯುವರಾಜ್ ಸಿಂಗ್, ಭಾರತೀಯ-ಅಮೇರಿಕನ್ ಉದ್ಯಮಿಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದಾರೆ.
ಭಾರತದಲ್ಲಿ ಈ ಬ್ರ್ಯಾಂಡ್‌ನ ನೇತೃತ್ವವನ್ನು ಆಯೇಷಾ ಗುಪ್ತಾ ವಹಿಸಿದ್ದಾರೆ. ಈಗಾಗಲೇ ಈ ಬ್ರ್ಯಾಂಡ್ ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರದ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ. ಫಿನೋ ನಾಲ್ಕು ವಿಭಿನ್ನ ವೇರಿಯಂಟ್ ಗಳಲ್ಲಿ ಬಿಡುಗಡೆಯಾಗಿದ್ದು, ಪ್ರತಿಯೊಂದೂ ಬಾಟಲಿಗೂ 10 ಸಾವಿರಕ್ಕೂ ಅಧಿಕ ಬೆಲೆ ಇದೆ. ಫಿನೋ ಟಕಿಲಾ ಶುದ್ಧತೆಗೆ ಹೆಸರುವಾಸಿಯಾಗಿದ್ದು, ಈ ಮದ್ಯವನ್ನು ಶೇ. 100ರಷ್ಟು ಬ್ಲೂ ವೆಬರ್ ಅಗೇವ್ ನಿಂದ ತಯಾರಿಸಲಾಗುತ್ತದೆ.
