Site icon BosstvKannada

ತಲೆನೋವು-ವಾಂತಿಗೆ ನಿಮ್ಮ ಹೊಟ್ಟೆಯೇ ಕಾರಣ!

ಹಾಳಾದ್‌ ಈ ತಲೆನೋವು ಆಗಾಗ ಬರ್ತಾ ಇರುತ್ತೆ.. ಏನ್‌ ಕಾರಣ ಅಂತಾನೆ ಗೊತ್ತಿಲ್ಲ ಅನ್ನೋದು ತುಂಬಾ ಜನರ ಚಿಂತೆ. ಇದಿಕ್ಕೆ ಕಾರಣ ನಿಮ್ಮ ಹೊಟ್ಟೆ ಆಗಿರ್ಬಹುದು. ಯೆಸ್‌, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತಲೆನೋವು ಉಂಟಾಗುತ್ತೆ ಅಂತಾ ವಿವಿಧ ಅಧ್ಯಯನಗಳಿಂದ ತಿಳಿದುಬಂದಿದೆ.

ಅಲ್ಲದೇ ದೇಹದಲ್ಲಿ ಇನ್‌ಫ್ಲಮೇಷನ್‌ ಅಂದ್ರೆ ಉರಿಯೂತ ಜಾಸ್ತಿ ಆದ್ರೂ ಕೂಡ ತಲೆನೋವು ಕಾಣಿಸಿಕೊಳ್ಳುತ್ತೆ. ಕೆಲವ್ರಿಗೆ ಇದ್ರ ಜೊತೆಗೆ ವಾಂತಿ ಕೂಡ ಆಗುತ್ತೆ. ಅಜೀರ್ಣ, ಗ್ಯಾಸ್‌, ಮಲಬದ್ಧತೆ ಈ ರೀತಿಯ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ತಲೆನೋವು ಜೊತೆಗೆ ವಾಂತಿ ಕಾಣಿಸಿಕೊಳ್ಬಹುದು. ಈ ಸಮಸ್ಯೆಗಳಿಗೆ ಪರಿಹಾರ ಸಿಗ್ಬೇಕು ಅಂದ್ರೆ ಮೊದ್ಲು ನಿಮ್ಮ ಗಟ್‌ ಹೆಲ್ತ್‌ ಇಂಪ್ರೂವ್‌ ಆಗ್ಬೇಕು. ನಿಮ್ಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ರೆ, ಅದ್ರಿಂದ ತಲೆನೋವು ಬರುವ ಸಾಧ್ಯತೆ ಇದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸದೊಂದಿಗೆ ನೀರು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಂಬೆಯಲ್ಲಿರುವ ವಿಟಮಿನ್ ಸಿ ದೇಹದ ಪಿಹೆಚ್ ಮಟ್ಟವನ್ನು ನಿಯಂತ್ರಿಸುತ್ತೆ. ಅಲ್ಲದೆ, ಇದರ ಉತ್ಕರ್ಷಣ ನಿರೋಧಕವು ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡುತ್ತೆ ಮತ್ತು ತಲೆನೋವನ್ನು ನಿವಾರಿಸುತ್ತೆ. ಪುದೀನಾ ಟೀ ಕೂಡ ತಲೆನೋವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

ಒಂದು ಕಪ್ ಪುದೀನಾ ಚಹಾವು ಸ್ನಾಯುಗಳನ್ನು ಸಡಿಲಗೊಳಿಸುತ್ತೆ. ಒತ್ತಡವನ್ನು ಕಡಿಮೆ ಮಾಡುತ್ತೆ. ಇದನ್ನು ಕುಡಿಯುವುದರಿಂದ ತಲೆನೋವನ್ನು ತಕ್ಷಣವೇ ಗುಣಪಡಿಸಬಹುದು. ಇನ್ನು, ಮೆಗ್ನೀಸಿಯಮ್ ಕೂಎ ತಲೆನೋವನ್ನು ಕಡಿಮೆ ಮಾಡಲು ಅತ್ಯುತ್ತಮವಾಗಿದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಹೆಚ್ಚು ಮೆಗ್ನೀಸಿಯಮ್ ಭರಿತ ಆಹಾರಗಳನ್ನು ಸೇರಿಸಿ. ಇದೇ ರೀತಿಯ ಇನ್ನಷ್ಟು ಹೆಲ್ತ್‌ ಟಿಪ್ಸ್‌ಗಾಗಿ ಡಾಕ್ಟರ್‌ ಬಾಸ್‌ ಯೂಟ್ಯೂಬ್‌ ಚಾನಲ್‌ನ ಸಬ್‌ಸ್ಕ್ರೈಬ್‌ ಮಾಡಿ, ಬೆಲ್‌ ಐಕನ್‌ ಕ್ಲಿಕ್‌ ಮಾಡಿ.

Exit mobile version