Site icon BosstvKannada

ಮದುವೆಗೂ ಮುನ್ನವೇ ಸಜೀವ ದಹನವಾದ ಯುವತಿ; ಮಸಣ ಸೇರಿದವರು ಯಾರು?

ತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಹತ್ತಿರ ಮಧ್ಯರಾತ್ರಿ ನಡೆದ ಭೀಕರ ಬಸ್ ಅಪಘಾತದಲ್ಲಿ 6 ಜನ ಸಜೀವವಾಗಿ ದಹನವಾಗಿದ್ದಾರೆ. ಈ ಪೈಕಿ ಫೆಬ್ರವರಿಯಲ್ಲಿ ಮದುವೆಯಾಗ ಬೇಕಿದ್ದ ಯುವತಿ ಕೂಡ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಖಾಸಗಿ ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ನಡೆದಿದೆ. ಲಾರಿ ಚಾಲಕ ಸೇರಿ ಬಸ್ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳು ಚಿತ್ರದುರ್ಗ, ಹಿರಿಯೂರು, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಲ್ಲಿ ಬದುಕುಳಿದ ಒಬ್ಬೊಬ್ಬ ಪ್ರಯಾಣಿಕರ ಕತೆಯೂ ರೋಚಕವಾಗಿದೆ. ಒಂದೇ ಐಟಿ ಕಂಪನಿಯ 7 ಜನ ಸಹೋದ್ಯೋಗಿಗಳು ಬೆಂಕಿಯ ಕೆನ್ನಾಲೆಗೆ ಸಿಲುಕಿದ್ದಾರೆ. ಇವರೆಲ್ಲ ಕವಿತಾ ಮದುವೆ ನಿಗದಿಯಾಗಿದ್ದರಿಂದ ಹಿನ್ನೆಲೆ ಬ್ಯಾಚುಲರ್ ಪಾರ್ಟಿಗೆಂದು ಗೋಕರ್ಣಕ್ಕೆ ತೆರಳುತ್ತಿದ್ದರು. ಅಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಪಾರ್ಟಿಯೂ ನಿಗದಿಯಾಗಿತ್ತು. ಕ್ರಿಸ್ಮಸ್ ರಜೆ ಹಿನ್ನೆಲೆ ತಂಡವೇ ಗೋಕರ್ಣಕ್ಕೆ ಹೊರಟಿತ್ತು. ಆ ಪೈಕಿ ಬಿಂದು ಮತ್ತು ಆಕೆಯ 5 ವರ್ಷದ ಮಗು ಗ್ರೇಯ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳಾದ ಶಶಾಂಕ್ ಮತ್ತು ಸಂಧ್ಯಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಮಾನಸ ಐಡಿಯಲ್ಲಿ ನಾಲ್ಕು ಜನರಿಗೆ ಟಿಕೆಟ್ ಬುಕ್ ಆಗಿತ್ತು. ಬೆಂಗಳೂರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾನಸ ಪಿಜಿಯಲ್ಲಿ ವಾಸವಿದ್ದರು. ನವ್ಯಾ, ಮಿಲನ ಸೇರಿ ಅಭಿಷೇಕ್ ಎಂಬವರ ಜೊತೆ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದರು. ಮಾನಸಾಗೆ ಮದುವೆಯೂ ನಿಗದಿಯಾಗಿತ್ತು. ಆದರೆ ಹಸೆಮಣೆ ಏರುವುದಕ್ಕೂ ಮುನ್ನವೇ ಮಸಣ ಸೇರಿದ್ದಾರೆ. ರಶ್ಮಿ ಮತ್ತು ನವ್ಯಾ ಎಂಬವರು ಕೂಡ ಘಟನೆಯಲ್ಲಿ ಸಾವನ್ನಪ್ಪಿರುವುದು ದೃಢವಾಗಿದೆ.

Exit mobile version