Site icon BosstvKannada

WTC 2025 Final : WTCಯಲ್ಲಿ ಸ್ಟೀವ್ ಸ್ಮಿತ್ ಹೊಸ ದಾಖಲೆ!

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳಲ್ಲಿ ಕಾಂಗರೂ ಪಡೆಯ ಸ್ಟೀವ್ ಸ್ಮಿತ್ ಸಹ ಒಬ್ಬರು. ತಮ್ಮ ಬ್ಯಾಟಿಂಗ್‌ ಮೂಲಕವೇ ಜಗತ್ತಿನ ಶ್ರೇಷ್ಠ ಬೌಲರ್‌ಗಳಿಗೆ ಕಾಟಕೊಡುವ ಸ್ಮಿತ್ ಈಗ ಇಂಗ್ಲೆಂಡ್‌ನ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 212 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಸ್ಟೀವ್ ಸ್ಮಿತ್ ತಮ್ಮ ಅಮೋಘ ಬ್ಯಾಟಿಂಗ್‌ ಮೂಲಕ, 112 ಎಸೆತಗಳಲ್ಲಿ 10 ಫೋರ್‌ನೊಂದಿಗೆ 66 ರನ್​ ಬಾರಿಸಿ, ಆಘಾತದಲ್ಲಿದ್ದ ಆಸಿಸ್‌ಗೆ ಆಧಾರ ಸ್ಥಂಭವಾದರು.

ಈ 66 ರನ್‌ಗಳೊಂದಿಗೆ ಟೆಸ್ಟ್​ ಕ್ರಿಕೆಟ್‌ನಲ್ಲಿ, ಲಾರ್ಡ್ಸ್​ ಮೈದಾನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸ್ಟೀವ್ ಸ್ಮಿತ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ವಾರೆನ್ ಬಾರ್ಡ್​​ಸ್ಲೇ 575 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರು ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕದಂದಿಗೆ ಒಟ್ಟು 591 ರನ್ ಕಲೆಹಾಕಿ ಸ್ಮಿತ್ ಮೊದಲ ಸ್ಥಾನವನ್ನ ಅಲಂಕರಿಸಿದ್ದಾರೆ.

Exit mobile version