Site icon BosstvKannada

ತಳ್ಳುಗಾಡಿಯಲ್ಲಿ ಎಟಿಎಂ ಯಂತ್ರ ಹೊತ್ತೊಯ್ದ ಖದೀಮರು

ಬೆಳಗಾವಿ: ಖದೀಮರು ರಾತ್ರೋರಾತ್ರಿ ಎಟಿಎಂ ದೋಚಿ ಯಂತ್ರ (ATM Machine)ವನ್ನು ತಳ್ಳುಗಾಡಿಗೆ ಹಾಕಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ (Belagavi) ಹೊಸ ವಂಟಮೂರಿ ಗ್ರಾಮದಲ್ಲಿ ತಡರಾತ್ರಿ 3 ಗಂಟೆ ವೇಳೆಗೆ ನಡೆದಿದೆ. ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಇಂಡಿಯಾ ಒನ್ ಎಟಿಎಂಗೆ ಕನ್ನ ಹಾಕಿರುವ ಖದೀಮರು, ಗ್ಯಾಸ್ ಕಟ್ಟರ್ ನಿಂದ ಯಂತ್ರ ತೆಗೆದುಕೊಂಡು ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.

ಖದೀಮರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಒಳ ನುಗ್ಗಿದ್ದಾರೆ. ಎಟಿಎಂನಲ್ಲಿನ ಸೈರನ್‌ ಗೆ ಬ್ಲ್ಯಾಕ್‌ ಸ್ಪ್ರೇ ಮಾಡಿ ಅದನ್ನು ಬಂದ್ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಟಿಎಂ ಯಂತ್ರದಲ್ಲಿ ಸುಮಾರು 1.9 ಲಕ್ಷ ರೂ. ಹಣ ಇತ್ತು ಎನ್ನಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Exit mobile version