Site icon BosstvKannada

75 ವರ್ಷಕ್ಕೇ ನಿವೃತ್ತಿ ತೆಗೆದುಕೊಳ್ತಾರಾ ಪ್ರಧಾನಿ ಮೋದಿ? ಮೋದಿ ನಿವೃತ್ತಿ ಚರ್ಚೆಗೆ ಬ್ರೇಕ್‌ ಹಾಕಿತಾ ಆರ್‌ಎಸ್‌ಎಸ್?‌

ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿಗೆ ವಯಸ್ಸು 75 ದಾಟಲಿದೆ. ಪ್ರಧಾನಿ ಹುದ್ದೆಯಿಂದ ನಿವೃತ್ತಿ ಆಗ್ತಾರಾ? ಪವರ್‌ಫುಲ್ ಪ್ರಧಾನಿಯ ರಾಜಕೀಯ ಪುಟ‌ ಕ್ಲೋಸ್‌ ಆಗುತ್ತಾ? ಮೋದಿ ನಂತರದ ಮುಂದಿನ ಪ್ರಧಾನಿ ಯಾರು ಅನ್ನೋ ಹತ್ತು ಹಲವು ಪ್ರಶ್ನೆಗಳು ದೇಶದ ಜನರಲ್ಲಿ ಹುಟ್ಟಿಕೊಂಡಿವೆ. ಹಾಗಾದ್ರೆ, ನಿಜಕ್ಕೂ ಪ್ರಧಾನಿ ಮೋದಿ ರಾಜಕೀಯದಿಂದ ಹಿಂದೆ ಸರಿಯುತ್ತಾರಾ? 75 ವರ್ಷಕ್ಕೇ ನಿವೃತ್ತಿ ತೆಗೆದುಕೊಳ್ತಾರಾ? 11 ವರ್ಷಗಳಿಂದ ನಿಭಾಯಿಸುತ್ತಿರುವ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡ್ತಾರಾ ಅನ್ನೋ ಪ್ರಶ್ನೆಗಳಿಗೆ ಸ್ವತಃ ಆರ್‌ಎಸ್‌ಎಸ್‌ ಅಂಗಳದಿಂದಲೇ ಉತ್ತರ ಹೊರಬಿದ್ದಿದೆ..

ಆರ್‌ಎಸ್‌ಎಸ್‌ನಿಂದ ಹೊರಬಿತ್ತು ಸ್ಪಷ್ಟ ಸಂದೇಶ..!
ನಿಜ.. ಸೆಪ್ಟೆಂಬರ್‌ 17ರಂದು ಪ್ರಧಾನಿ ಮೋದಿ ಬರ್ತ್‌ಡೇ.. ಆ ದಿನ ಬಂದ್ರೆ ಪ್ರಧಾನಿ 75 ವಸಂತ ಪೂರೈಸಲಿದ್ದಾರೆ.. ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಭ್ರಮವಾದ್ರೆ, ದೇಶದ ಜನತೆ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿದೆ. ಯಾಕಂದ್ರೆ, ಪ್ರಧಾನಿ ಮೋದಿ 75 ವರ್ಷಕ್ಕೇ ನಿವೃತ್ತಿ ತೆಗೆದುಕೊಂಡರೆ ಗತಿಯೇನು? ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇದಕ್ಕೆಲ್ಲಾ ಕಾರಣ, ಬಿಜೆಪಿಯ ಬೆನ್ನೆಲುಬು ಆರ್‌ಎಸ್‌ಎಸ್‌ನ ನಿಯಮ… ಈ ಹಿಂದೆಯೇ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, 75 ವರ್ಷದ ದಾಟಿದ ನಾಯಕರು ನಿವೃತ್ತಿ ಪಡೆದು, ಯುವಕರಿಗೆ ಅವಕಾಶ ನೀಡಬೇಕು ಅಂತಾ ಹೇಳಿದ್ದರು. ಸ್ವತಃ ಮೋಹನ್‌ ಭಾಗವತ್‌ ಅವರೂ ಇದೇ ಸೆಪ್ಟೆಂಬರ್‌ 11ಕ್ಕೆ 75 ವಸಂತ ಪೂರೈಸಲಿದ್ದಾರೆ. ಹೀಗಾಗಿ, ಅವರು ನಿವೃತ್ತಿ ಪಡೆದರೆ, ಪ್ರಧಾನಿ ಮೋದಿ ಕೂಡ ಅವರ ಹಾದಿಯನ್ನೇ ಪಾಲಿಸಬೇಕಾಗಬಹುದು ಅಂತಾ ಹೇಳಲಾಗ್ತಿದೆ. ಅಂದರೆ ಆರ್‌ಎಸ್‌ಎಸ್‌ ನಿಯಮವನ್ನು ಪಾಲಿಸಿ ಮೋದಿ ನಿವೃತ್ತಿ ಪಡೆದರೂ ಪಡೆಯಬಹುದು ಅಂತಾ ವಿಶ್ಲೇಷಣೆ ಮಾಡಲಾಗುತ್ತಿದೆ.

75 ವರ್ಷದ ನಿವೃತ್ತಿ ನಿಯಮಕ್ಕೆ ಕಂಪ್ಲೀಟ್‌ ಬ್ರೇಕ್?‌
ಸದ್ಯ ಪ್ರಧಾನಿ ಮೋದಿ ಕಳೆದ 11 ವರ್ಷಗಳಿಂದ ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ಮೋದಿ ನಿವೃತ್ತಿ ಪಡೆದರೆ, ದೇಶ ಹಾಗೂ ಬಿಜೆಪಿಯನ್ನು ಯಶಸ್ವಿಯಾಗಿ ಯಾರು ಮುನ್ನಡೆಸುತ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಮೋದಿ ನಿವೃತ್ತಿ ಬೇಡ ಅಂತಲೂ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. 75 ವರ್ಷದ ನಂತರ ನಿವೃತ್ತಿ ನಿಯಮವನ್ನು ಸಡಿಲಿಸಿದ್ದಾರೆ..

ಚರ್ಚೆ ಜೋರಾಗ್ತಿದ್ದಂತೆ RSS ಸ್ಪಷ್ಟನೆ.. ನಿವೃತ್ತಿ ನಿಯಮ ವಾಪಸ್?‌
ಯಾವುದೇ ಸಂದರ್ಭದಲ್ಲಿಯೂ ನಿವೃತ್ತಿಯಾಗಲು ಸಿದ್ಧ. ಆದ್ರೆ ಸಂಘ ಬಯಸೋವರೆಗೂ ನಾನು ಕೆಲಸ ಮಾಡುತ್ತೇನೆ. ನಾನು ನಿವೃತ್ತಿಯಾಗುತ್ತೇನೆ, ಬೇರೆಯವರು ನಿವೃತ್ತಿಯಾಗಬೇಕು ಅಂತಾ ಯಾರಿಗೂ ಹೇಳಿಲ್ಲ. ಅಂತಾ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮೋಹನ್‌ ಭಾಗವತ್‌ರ ಹೇಳಿಕೆ ಪ್ರಧಾನಿ ಮೋದಿಯ ನಿವೃತ್ತಿಯ ಚರ್ಚೆಗಳಿಗೆಲ್ಲಾ ತೆರೆ ಎಳೆದಿದೆ.. ಮೋದಿ ನಿವೃತ್ತಿ ಆಗ್ತಾರೆ, ಆಗಲ್ವಾ ಅನ್ನೋ ವಿಚಾರವೂ ಅಪ್ರಸ್ತುತ ಅನ್ನೋದು ಈ ಮಾತುಗಳಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಆದ್ರೆ, ಒಂದಂತೂ ನಿಜ.. ಈ ಹಿಂದೆ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾನಿ, ಮುರಳಿ ಮನೋಹರ್‌ ಜೋಷಿ 75 ವರ್ಷಕ್ಕೆ ರಿಟೈರ್‌ಮೆಂಟ್‌ ತೆಗೆದುಕೊಂಡಿರೋ ಉದಾಹರಣೆ ಇದೆ. ಅಷ್ಟೇ ಯಾಕೆ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪರನ್ನೂ ಕೂಡ 75 ವರ್ಷಕ್ಕೆ ಸಿಎಂ ಕುರ್ಚಿಯಿಂದಲೇ ಕೆಳಗಿಳಿಸಿದ್ದು ಕಣ್ಮುಂದಿದೆ. ಈ ಎಲ್ಲದರ ಮಧ್ಯೆ ಮೋದಿ 75 ವರ್ಷ ಪೂರೈಸಿದ ನಂತರ ಏನಾಗಲಿದೆ ಅನ್ನೋದನ್ನು ಕಾಲವೇ ಹೇಳಬೇಕಿದೆ.

Read Also : ಬಿಹಾರ ಚುನಾವಣಾ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ.. ಮತಧಿಕಾರ ರ್ಯಾಲಿಯಲ್ಲಿ ಭಾಗಿ

Exit mobile version