ಲೆಜೆಂಡರಿ ನಟನಿಗೆ ಇದೆಂಥಾ ಅವಮಾನ? ಕೋಟ್ಯಂತರ ಜನರಿಗೆ ಸ್ಫೂರ್ತಿ ಆದ ನಟನ ಸಾಧನೆ ಸರ್ಕಾರ ಕಣ್ಣಿಗೆ ಕಾಣಲಿಲ್ವಾ? ಮೆಟ್ರೋಗಾಗಿ ದುಡಿದ ಶಂಕರ್‌ನಾಗ್‌ಗೆ ಕೊಡೋ ಮರ್ಯಾದೆ ಇಷ್ಟೇನಾ?, ಅಷ್ಟಕ್ಕೂ ನಮ್ಮ ಮೆಟ್ರೋಗೆ ಶಂಕರ್ ನಾಗ್ ಹೆಸರು ಇಡದಿರಲು ಕಾರಣವೇನು? ಆಟೋರಾಜನ ಹೆಸರಲ್ಲಿ ರಾಜಕೀಯ ನಡೀತಿದ್ಯಾ? ಅನ್ನೊ ಅನುಮಾನಗಳು ಸೃಷ್ಟಿಯಾಗಿವೆ.
ಶಂಕರ್‌ನಾಗ್ ಮೆಟ್ರೋ ಕನಸು ಕಂಡಿದ್ದೇ ತಪ್ಪಾ?
ಶಂಕರ್‌ನಾಗ್ ಇದು ಬರೀ ಹೆಸರಲ್ಲ. ವೇಗಕ್ಕೆ ಇನ್ನೊಂದು ಹೆಸರು. ಚಿಕ್ಕವರಿಂದ ದೊಡ್ಡವರ ತನಕ ಎಲ್ಲರಿಗೂ ಸ್ಫೂರ್ತಿಯಾಗಿ ಶಕ್ತಿಯಾಗಿರುವ ನಟ.. ಅಂತಹ ನಟನಿಗೆ ಸರ್ಕಾರ ಅವಮಾನ ಮಾಡಿದೆ ಎಂದು ಕರಾಟೆಕಿಂಗ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹೌದು.. ಮೆಟ್ರೋ ಹೆಸರು ಕೇಳಿದ ತಕ್ಷಣ ನೆನಪಿಗೆ ಬರೋ ಹೆಸರೇ ಶಂಕರ್‌ನಾಗ್.. ಬಸ್, ಆಟೋಗಳು ಸರಿಯಾಗಿ ಓಡಾಡದ ಸಮಯದಲ್ಲಿ ವಿದೇಶಕ್ಕೆ ಹೋಗಿ ಸ್ವಂತ ಹಣ ಖರ್ಚು ಮಾಡಿ ಸಂಶೋಧನೆ ಮಾಡಿ, ಬೆಂಗಳೂರಿಗೆ ಮೆಟ್ರೋ ತರಬೇಕು ಎಂಬ ಮಹಾ ಕನಸು ಕಂಡಿದ್ರು..
ಮೆಟ್ರೋ ನಿಲ್ದಾಣಕ್ಕೆ ಶಂಕ್ರಣ್ಣನ ಹೆಸರು ಇಡಲ್ವಾ…?
ಅಲ್ಲದೇ, ಶಂಕ್ರಣ್ಣ ಬ್ಲೂ ಪ್ರಿಂಟ್ ರೆಡಿ ಮಾಡಿ ಸರ್ಕಾರಕ್ಕೆ ಕೊಟ್ಟಿದ್ರು. ಆದ್ರೆ ಆ ಸಮಯದಲ್ಲಿ ಸರಿಯಾದ ಸಹಕಾರ ಸಿಗದ ಕಾರಣ ಮೆಟ್ರೋ ಆಗಲಿಲ್ಲ. ಆದ್ರೆ ದಶಕಗಳು ಕಳದಂತೆ 2011ರಲ್ಲಿ ಮೊದಲ ಮೆಟ್ರೋ ಬೆಂಗಳೂರಿಗೆ ಬಂದಿದ್ದು ಈಗ ಇತಿಹಾಸ. ಆದ್ರೆ ದಶಕಗಳೇ ಉರುಳಿದ್ರೂ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮನವಿ ಮೇಲೆ ಮನವಿ ಮಾಡಿದ್ರೂ ಇದುವರೆಗೆ ಒಂದೇ ಒಂದು ಮೆಟ್ರೋ ನಿಲ್ದಾಣಕ್ಕೆ ಪ್ರೀತಿಯ ಶಂಕರ್‌ನಾಗ್ ಹೆಸರು ಇಟ್ಟಿಲ್ಲ. ಆದ್ರೆ, ಈಗ ಶಿವಾಜಿನಗರದ ಮೆಟ್ರೋ ಪಾಯಿಂಟ್‌ನ್ನ, ಸೇಂಟ್ ಮೇರಿ ಹೆಸರಿಡಲು ನಿರ್ಧರಿಸಿದೆ.
ಈ ಬಗ್ಗೆ ಆಟೋ ರಾಜನ ಫ್ಯಾನ್ಸ್ ಗರಂ ಆಗಿದ್ದು, ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಚಿತ್ರರಂಗದಲ್ಲಿ ಇದ್ದಿದ್ದು ಕೆಲವೇ ವರ್ಷಗಳಾದ್ರೂ ಅವರು ಮಾಡಿದ ಸಾಧನೆ ಇಂದಿಗೂ ಜೀವಂತ. ಕೇವಲ 36 ವರ್ಷಕ್ಕೆ ನಮ್ನೆಲ್ಲರನ್ನು ಬಿಟ್ಟು ಹೋದ ಶಂಕರ್‌ನಾಗ್, ಸ್ಫೂರ್ತಿಯಾಗಿ ಉಳಿದಿದ್ದಾರೆ. ಅವರು ಕಂಡ ಕನಸಿನಕೂಸು ಮೆಟ್ರೋ ಅಂದಿನ ಕಾಲದಲ್ಲೇ ಮರಗಳನ್ನು ನಾಶ ಮಾಡದೇ, ಅಂಡರ್‌ಗ್ರಾಂಡ್ ಮೆಟ್ರೋ ಮಾಡಬೇಕು ಎನ್ನುವುದು ಶಂಕ್ರಣ್ಣನ ಆಸೆಯಾಗಿತ್ತು. ಆದ್ರೆ ಲಕ್ಷ ಲಕ್ಷ ಖರ್ಚು ಮಾಡಿ ಕನ್ನಡಿಗರಿಗೆ ಅನುಕೂಲಕ್ಕೆ ಅಖಂಡ ಬೆಂಗಳೂರಿನ ಅಭಿವೃಧ್ಧಿಗೆ ದುಡಿದ ಶ್ರೇಷ್ಠ ನಾಯಕನ ಸಾಧನೆಯನ್ನು ಸರ್ಕಾರಗಳು ಮರೆತಿವೆ. ಅವರರಿಗೆ ಸರ್ಕಾರಗಳು ಅವಮಾನ ಮಾಡುತ್ತಿವೆ ಅಂತಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಆದೇನೆ ಆಗಲಿ… ಅಖಂಡ ಭಾರತ ಅಕ್ಕಪಕ್ಕ ರಾಜ್ಯಗಳಲ್ಲಿ ನಟನೆ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವ್ಯಕ್ತಿಗಳಿಗೆ ಪದ್ಮಶ್ರಿ, ಪದ್ಮವಿಭೂಷಣ, ಡಾಕ್ಟರೇಟ್ ಕೊಟ್ಟು ಗೌರವ ಕೊಟ್ರೆ, ಇಲ್ಲಿ ಮಾತ್ರ ಸಾಧನೆ ಮಾಡಿದವರ ಹೆಸರು ಹೇಳಿಕೊಂಡು ರಾಜಕೀಯ ಮಾಡೋದೇ ಮಹಾನ್ ಸಾಧನೆಯಾಗಿದೆ. ಇಷ್ಟಾದ ಮೇಲೂ ನಿದ್ದೆ ಮಾಡ್ತಿರೋ ಜನಪ್ರತಿನಿಧಿಗಳು, ಸ್ವಲ್ಪ ಎಚ್ಚೆತ್ತು ಶಂಕರ್‌ನಾಗ್ ಹೆಸರನ್ನ ಮುಂಬರುವ ಮೆಟ್ರೋ ನಿಲ್ದಾಣಕ್ಕೆ ಹೆಸರಿಡಬೇಕು ಎಂಬುವುದೇ ಎಲ್ಲರ ಆಶಯ… ಇದಕ್ಕೆ ನೀವೇನ್ ಹೇಳ್ತಿರಾ ಕಮೆಂಟ್ ಮಾಡಿ ಹೇಳಿ…

