Site icon BosstvKannada

ಪುರಿ ಜಗನ್ನಾಥ್ ಕಾಲ್ತುಳಿತ ಪ್ರಕರಣದ ಬಗ್ಗೆ ಬಿಜೆಪಿಗರು ಯಾಕೆ ಮಾತನಾಡುತ್ತಿಲ್ಲ : ಸುರ್ಜೇವಾಲಾ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಆಗಮಿಸಿದ್ದಾರೆ. ಇಂದಿನಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ಸುರ್ಜೇವಾಲಾ ಮೊಕ್ಕಾಂ ಹೂಡಿ ಶಾಸಕರ ಅಹವಾಲು ಕೇಳಲಿದ್ದಾರೆ. ಇನ್ನು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರು ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ತುಂಬಾ ಮಾತಾಡಿದ್ರು. ಈಗ ಪುರಿ ಜಗನ್ನಾಥ್ ದೇಗುಲದಲ್ಲೂ ಕಾಲ್ತುಳಿತ ಉಂಟಾಗಿದೆ. ಪುರಿ ಜಗನ್ನಾಥ್ ಕಾಲ್ತುಳಿತ ಪ್ರಕರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಅಂತಾ ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಎಲ್ಲರ ಜೀವ ಮುಖ್ಯ, ಎಲ್ಲರ ಜೀವವೂ ಒಂದೆ. ಎಲ್ಲೇ ಕಾಲ್ತುಳಿತ ಆದ್ರೂ ಎಲ್ಲರದ್ದೂ ಜೀವವೇ. ಮೂರು ಕಾಲ್ತುಳಿತ ಘಟನೆಗಳಿಂದ ನಾವು ಪಾಠ ಕಲಿಯಬೇಕಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳಬೇಕು ಎಂದು ಹೇಳಿದರು. ಸ್ಡೇಟ್ ಕ್ರೌಡ್ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು. ಕ್ರೌಡ್ ಮ್ಯಾನೇಜ್ಮೆಂಟ್ ಮಾಡಲು ದೇಶದಲ್ಲಿ ಮಾದರಿ ನಿಯಮಗಳನ್ನ ರೂಪಿಸಬೇಕು ಎಂದು ಹೇಳಿದರು.

Exit mobile version