Site icon BosstvKannada

ರಾಜ್ಯಪಾಲರಿಗೆ ಕೊಟ್ಟ ಭಾಷಣದಲ್ಲಿ ಏನಿತ್ತು? ಏನಿಲ್ಲ


ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರವು ವಿಶೇಷ ಜಂಟಿ ಅಧಿವೇಶನ ಕರೆದಿತ್ತು. ಆದರೆ ರಾಜ್ಯಪಾಲರು, ಭಾಷಣದ ವೇಳೆ ಸರ್ಕಾರ ಕೊಟ್ಟಿದ್ದನ್ನು ಪೂರ್ತಿ ಓದದೆ ಮೊದಲು, ಕೊನೆ ಪ್ಯಾರಾಗಳನ್ನು ಮಾತ್ರ ಓದಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಸಿಎಂ, ಸ್ಪೀಕರ್, ಎಲ್ಲ ಸದಸ್ಯರಿಗೆ ಜಂಟಿ ಅಧಿವೇಶನಕ್ಕೆ ಸ್ವಾಗತ. ಸರ್ಕಾರ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸ 2 ಪಟ್ಟು ಹೆಚ್ಚಿಸಲು ಸರ್ಕಾರ ಬದ್ಧ. ಜೈಹಿಂದ್, ಜೈ ಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ.

ಆದರೆ, ಭಾಷಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಿಸಿದೆ ಎನ್ನಲಾಗಿದೆ. ‘ರಾಮ್’ ಹೆಸರು ಬಳಸದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜಿ ಬದಲು ವಿಬಿ ಗ್ರಾಮ್ ಜಿ ಎಂದು ನಮೂದು ಮಾಡಿದೆ. ರಾಜ್ಯಪಾಲರ ಭಾಷಣದ ಪ್ರತಿಯಲ್ಲಿನ ಅಂಶ ವಿಧಾನಸಭೆಯಲ್ಲಿ ದಾಖಲಾಗುತ್ತೆ. ಅಧಿಕೃತ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಾಯಿಸಿದೆ ಎನ್ನಲಾಗಿದೆ.

ಭಾಷಣ ಓದದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ರಾಷ್ಟ್ರಗೀತೆಗೆ ರಾಜ್ಯಪಾಲರು ಅವಮಾನ ಮಾಡಿದ್ದಾರೆಂದು ದೂರಿದ್ದಾರೆ. ಇನ್ನೊಂದೆಡೆ ರಾಜ್ಯಪಾಲರು ನಿರ್ಗಮಿಸುವ ವೇಳೆ ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದ ಆಡಳಿತ ಪಕ್ಷದ ನಡೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರಿಗೆ ಅಗೌರವ ತೋರಿದ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

Exit mobile version