ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದ ಚಿನ್ನದ ಬೆಲೆ ಗುರುವಾರವಷ್ಟೇ ಸ್ವಲ್ಪ ಕುಗ್ಗಿ, ಬಂಗಾರ ಪ್ರಿಯರು ಸಂತಸ ಪಡುವಂತಾಗಿತ್ತು. ಆದರೆ, ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದ್ದು ಶುಭ ಸಮಾರಂಭ ಹೆಚ್ಚು ನಡೆಯುವ ಇಂದಿನ ದಿನಗಳಲ್ಲಿ ಚಿನ್ನ ಏರಿಕೆಯತ್ತ ಮತ್ತೆ ಮುಖ ಮಾಡಿದ್ದು ನೋವು ತರುತ್ತಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯ ಮಧ್ಯೆ ಸ್ವಲ್ಪ ಇಳಿಕೆಯಾಗುತ್ತಿತ್ತು. ಮದುವೆ ಸಮಾರಂಭ ಹೆಚ್ಚು ನಡೆಯುವ ಈ ಅವಧಿಯಲ್ಲೇ ಚಿನ್ನದ ಬೆಲೆ ಇಳಿಯುತ್ತಿರುವುದಂತೂ ಹಲವರಿಗೆ ಸಂತಸ ತಂದಿತ್ತು. ಆದರೆ ಇಂದು ಮತ್ತೆ ಏರಿಕೆಯಾಗಿದ್ದು, ಮತ್ತೆ ಬೇಸರ ವ್ಯಕ್ತವಾಗುತ್ತಿದೆ.
ದಾಖಲೆ ಏರಿಕೆಯ ಹಾದಿ ಹಿಡಿದಿದ್ದ ಚಿನ್ನ ಡಿ. 2ರ ನಂತರ ಏರಿಳಿತ ಕಂಡು ಬರುತ್ತಿರುವುದು ಕೂಡ ಸ್ವಲ್ಪ ಖುಷಿ ತರುತ್ತಿದೆ. ಗುರುವಾರ 850 ರೂ.ನಷ್ಟು ಕಡಿಮೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ 270 ರೂ.ನಷ್ಟು ಏರಿಕೆಯಾಗಿದೆ.
ಶುಕ್ರವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 12,993 ರೂ. ಇದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ 1,29,930 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 270 ರೂ ಏರಿಕೆ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 11,910 ರೂಪಾಯಿ ಇದ್ದು, ಇಂದು 25 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,19,100 ರೂ. ಇದೆ. ಇಂದು 250 ರೂ.ನಷ್ಟು ಹೆಚ್ಚಾಗಿದೆ.
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,993 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,29,930 ರೂ. ಇದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 187 ರೂ. ಆಗಿದೆ. ಅಂದರೆ, ಕೆಜಿಗೆ 1,87,000 ರೂ. ಇದೆ.
ಸೂಚನೆ: ಇಲ್ಲಿ ನಾವು ನೀಡಿರುವ ದರದ ಮಾಹಿತಿಯೇ ಖಚಿತ ಎಂದು ಹೇಳಲು ಆಗುವುದಿಲ್ಲ. ಪ್ರಮುಖ ಮಳಿಗೆಗಳಿಂದ ಪಡೆದ ಮಾಹಿತಿಯನ್ನು ನಾವು ನೀಡಿರುತ್ತೇವೆ. ಆದರೆ, ಜಿಎಸ್ ಟಿ ಸೇರಿದಂತೆ ಹಲವು ದರಗಳನ್ನು ಮಳಿಗೆಗಳು ನಿಗದಿ ಮಾಡಬಹುದು. ಹೀಗಾಗಿ ನಾವು ನೀಡಿರುವ ಮಾಹಿತಿಯೇ ಅಂತಿಮ ಎಂದು ಪರಿಗಣಿಸುವಂತಿಲ್ಲ.
