Site icon BosstvKannada

ರಾಹುಲ್ ಗಾಂಧಿಗೆ ಕೆ.ಎನ್. ರಾಜಣ್ಣ ಬರೆದಿರುವ ಪತ್ರದ ಅಸಲಿಯತ್ತಾದರೂ ಏನು?

ಬೆಂಗಳೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭೇಟಿಗೆ ಮನವಿ ಮಾಡುವುದು ಸೇರಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದಾರೆ. ಇದು ಕಾಂಗ್ರೆಸ್ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ರಾಹುಲ್ ಭೇಟಿಗೆ ಅವಕಾಶ ಕೇಳಿದ್ದಾರೆ. ತಪ್ಪು ಮಾಡದ ನನ್ನನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ ಮಾಡದೇ ಎರಡು ವರ್ಷ ಸಚಿವ‌ನಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತಂದಿದ್ದೇನೆ ಎಸ್ಸಿ-ಎಸ್ಟಿ ಮಹಿಳಾ ಮೀಸಲಾತಿ ತಂದಿದ್ದೇನೆ. ಇದರಿಂದ ರಾಜ್ಯಾದ್ಯಂತ ಒಂದು ಲಕ್ಷ ಕಾರ್ಯಕರ್ತರಿಗೆ ಅನುಕೂಲವಾಗಿದೆ. ಹಾಸನ ಉಸ್ತುವಾರಿಯಾಗಿ ಹಳೇ ಮೈಸೂರು ಭಾಗದಲ್ಲಿ ಹಾಸನ ಗೆಲ್ಲುವಂತೆ ಕೆಲಸ ಮಾಡಿದ್ದೇನೆ. ನಾನು ನೆಹರೂ ಫ್ಯಾಮಿಲಿಗೆ ನಿಷ್ಠೆಯಿಂದ ಇದ್ದೇನೆ. ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ಧ ತಮಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಆಗಬೇಕು. ನನ್ನ ಹೇಳಿಕೆಯ ಉದ್ದೇಶವನ್ನ ತಮಗೆ ತಪ್ಪಾಗಿ ಅರ್ಥೈಸುವಂತೆ ಮಾಡಿದವರ ಮೇಲೆ ಕ್ರಮ ಆಗಬೇಕು. ಜೊತೆಗೆ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ತಮ್ಮ ಭೇಟಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಪತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ 2013 ಹಾಗೂ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಎಸ್ಸಿ, ಎಸ್ಟಿ, ಓಬಿಸಿ ಅಲ್ಪಸಂಖ್ಯಾತರು, ಬಡವರು ಸೇರಿ ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ಅಲ್ಲದೇ, ಡಿಕೆ ಶಿವಕುಮಾರ್ ವಿರುದ್ಧ ಇದೇ ಪತ್ರದಲ್ಲಿ ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಸರಿಯಾಗಿ ಕೆಲಸ ಮಾಡಿದ್ದರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇನ್ನೂ 8-10 ಸೀಟ್ ಗೆಲ್ಲಬಹುದಿತ್ತು. ಇದೇ ರೀತಿ ಬೇರೆ ಬೇರೆ ರಾಜ್ಯದವರೂ ಕೆಲಸ ಮಾಡಿದ್ದರೆ 30 ರಿಂದ 40 ಸೀಟ್ ಗೆಲ್ಲಬಹುದಿತ್ತು. ಬಿಎಲ್‌ಆರ್‌ಗಳನ್ನು ನೇಮಕ ಮಾಡಿರುವುದು ಅವರ ನೇಮಕ ಸರಿಯಾಗಿದ್ದರೆ, ವೋಟ್ ಚೋರಿ ಆಗುತ್ತಿರಲಿಲ್ಲ. ಬಿಎಲ್‌ಆರ್‌ಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ. ಕರ್ನಾಟಕದಲ್ಲಿ ವೋಟ್ ಚೋರಿಗೆ ಅವಕಾಶ ಆಗಿದೆ ಎಂದು ಡಿಕೆಶಿ ವಿರುದ್ಧ ಆರೋಪಿಸಿದ್ದಾರೆ.

Exit mobile version