ಪ್ರತಿ ಕೆಲಸದಲ್ಲೂ ಜನರನ್ನು ಕಾಣುವ, ಪ್ರತಿ ಕಾಯಕದಲ್ಲೂ ಜನರ ಅಭಿವೃದ್ಧಿ ಬಯಸುವ, ಬಡವರ ಬಾಳಿಗೆ ಆಶ್ರಯ ಬಯಸುವ ನಾಯಕ ಅಂದ್ರೆ ಎಚ್.ಡಿ.ಕುಮಾರಸ್ವಾಮಿ.. ಮಾಜಿ ಮುಖ್ಯಮಂತ್ರಿಗಳಾಗಿ, ಹಾಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರಣ್ಣ, ಯಾವಾಗಲೂ ಲವಲವಿಕೆಯಿಂದ ಇರುವ ಮಾಸ್ ಲೀಡರ್.. ಆದ್ರೆ, ಇತ್ತೀಚಿನ ದಿನಗಳಲ್ಲಿ ಕುಮಾರಸ್ವಾಮಿ ಮಂಕಾಗಿದ್ದಾರೆ. ಅನಾರೋಗ್ಯ ಎಂಬ ಭೂತ ಅವರ ಕೆಲಸ, ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಹಾಗಾದ್ರೆ, ನಿಜಕ್ಕೂ ಕುಮಾರಸ್ವಾಮಿ ಅವರಿಗೆ ಏನಾಗಿದೆ? ಪದೇಪದೆ ಅನಾರೋಗ್ಯ ಯಾಕೆ ಕಾಡುತ್ತಿದೆ ಅನ್ನೋದನ್ನು ಸ್ವತಃ ಪುತ್ರ ನಿಖಿಲ್‌ಕುಮಾರ್ ತಿಳಿಸಿದ್ದಾರೆ.
ನಿಖಿಲ್ ಹೇಳಿದ್ದೇನು? ಎಚ್‌ಡಿಕೆ ಕಾಡ್ತಿರೋ ಆತಂಕವೇನು?
ರಾಜ್ಯ ರಾಜಕಾರಣದಲ್ಲಿ ದೊಡ್ಮನೆ ಅಂದ್ರೆ ಅದು ದೇವೇಗೌಡರ ಮನೆ. ಅಖಂಡ ಭಾರತಕ್ಕೆ ಪ್ರಧಾನಿಯಾಗಿ ರಾಜಕೀಯ ನಡೆಸಿರುವ ದೊಡ್ಡ ಗೌಡ್ರು 92 ವರ್ಷವಾದ್ರೂ ಇನ್ನೂ ಉತ್ಸಾಹಿಯಾಗಿ ರಾಜ್ಯ, ದೇಶದ ರಾಜಕಾರಣ ಮಾಡುತ್ತಿದ್ದಾರೆ. ಅವರ ಮಗನಾಗಿ ರಾಜ್ಯರಾಜಕೀಯದಲ್ಲಿ ಪಾದರಸದಂತೆ ಓಡಾಡಿ ಬೆಂಕಿ ಮಾತಿನಿಂದ ವಿರೋಧಪಕ್ಷದ ನಾಯಕರ ಬಾಯಿ ಮುಚ್ಚಿಸುತ್ತಿದ್ದ ಪ್ರೀತಿಯ ಕುಮಾರಣ್ಣ ಯಾಕೋ ಇತ್ತೀಚಿಗೆ ತುಂಬಾ ಮಂಕಾಗಿದ್ದಾರೆ ಅಂತಾ ಹಲವು ಅನುಮಾನಗಳನ್ನ ಅವರ ಅಭಿಮಾನಿಗಳೇ ಎಚ್‌ಡಿಕೆ ಹೋದಲ್ಲಿ, ಬಂದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೇಳ್ತಿದ್ರು.
ತಂದೆಯ ಸ್ಥಿತಿ ನೆನೆದು ಪುತ್ರ ಭಾವುಕ
ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಕೇಂದ್ರ ಸಚಿವರಾದ ಮೇಲೆ ವಾರಕ್ಕೊಮ್ಮೆಯಾದ್ರೂ ಕರುನಾಡಿಗೆ ಬರುತ್ತಿದ್ರು. ಎಚ್‌ಡಿಕೆ ಈಗ ಹೆಚ್ಚಾಗಿ ಕರ್ನಾಟಕಕ್ಕೆ ಬರ್ತಾ ಇಲ್ಲ. ಸದಾ ಪಾದರಸದಂತೆ ಇರುತ್ತಿದ್ದ ದಳಪತಿ, ಈಗ ನೋಡಲು ತೀರ ಸಣ್ಣ ಆಗಿದ್ದಾರೆ.. ಮುಖದಲ್ಲಿ ಕಳೆಯೇ ಇಲ್ಲದಂತಾಗಿದೆ. ತೀರಾ ಸುಸ್ತಾದವರಂತೆ ಕಾಣುತ್ತಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ನಿಖಿಲ್‌ಕುಮಾರ್, ತಂದೆಯ ಸ್ಥಿತಿ ನೆನೆದು ಭಾವುಕರಾಗಿದ್ದಾರೆ.
ಕುಮಾರಣ್ಣ ಆರೋಗ್ಯದಲ್ಲಿ ಏರುಪೇರು
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಸ್ನೇಹ ಬೆಳೆಸಿ, ಎಚ್‌ಡಿಕೆ ಕೇಂದ್ರ ಸಚಿವರಾಗಿ ದೆಹಲಿ ಸೇರಿದ್ರು. ನಂತರ ಪ್ರಜ್ವಲ್ ಪ್ರಕರಣದಿಂದ ಮುಜುಗರಕ್ಕೆ ಒಳಗಾಗಿದ್ದು, ಎಲ್ಲರಿಗೂ ಗೊತ್ತಿದೆ. ಕೆಲವು ತಿಂಗಳಿನಿಂದ ರಾಜ್ಯದಲ್ಲೂ ಕೇಂದ್ರದಲ್ಲೂ ಸರಿಯಾಗಿ ಕಾಣಿಸಿಕೊಳ್ಳದ ಕುಮಾರಣ್ಣ, ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿ ಮೊದಲಿನಿಂದ ಇತ್ತು. ಇದಕ್ಕೆ ಉತ್ತರ ನೀಡಿರುವ ನಿಖಿಲ್, ಶಾಕಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದು, ಇತ್ತೀಚೆಗೆ ಮಾಧ್ಯಮಗಳು ಮತ್ತು ಕಾರ್ಯಕರ್ತರು ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾಗಿದೆ ಅಂತ ಕೇಳ್ತಿದ್ರು.
ಹೀಗಾಗಿ, ನಾನು 80 ಕ್ಷೇತ್ರಗಳಲ್ಲಿ ಸುತ್ತಾಡಿ ಅವರ ಜವಾಬ್ದಾರಿಯನ್ನ ನಾನು ಹೊರುತ್ತಿದ್ದೇನೆ. ಪ್ರತಿನಿತ್ಯ ನಾನು ನನ್ನ ಆಯಸ್ಸು ನನ್ನ ತಂದೆಗೆ ಕೊಡಬೇಕು ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದೀನಿ. ನಾನು ಕೇವಲ ಮಗನಾಗಿ ಈ ಮಾತನ್ನ ಹೇಳ್ತಿಲ್ಲ. ಕುಮಾರಣ್ಣ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮತ್ತೆ ಅವರು ಚೇತರಿಕೆ ಕಾಣುತ್ತಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುತ್ತಾರೆ. ದೇವೇಗೌಡರು, ಕುಮಾರಣ್ಣ ಇಬ್ಬರು ಸಹ ಶತಾಯುಷಿಗಳಾಗುತ್ತಾರೆ ಅನ್ನೋ ನಂಬಿಕೆ ಇದೆ ಅಂತಾ ಭಾವುಕ ಮಾತುಗಳನ್ನ ಆಡಿದ್ದಾರೆ.
ಇನ್ನು, 65 ವರ್ಷದ ಕುಮಾರಸ್ವಾಮಿಯವರಿಗೆ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಇನ್ನಿಲ್ಲದಂತೆ ಕಾಡುತ್ತಿದೆ. ಓಪನ್ ಹಾರ್ಟ್ ಸರ್ಜರಿಯೂ ಆಗಿದ್ದು, ಖುದ್ದು ಸಂಸದರರಾಗಿರುವ ಡಾಕ್ಟರ್ ಸಿ.ಎನ್.ಮಂಜುನಾಥ್ ಅವರೇ ಮುಂದೆ ನಿಂತು ಸರ್ಜರಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ.. ಮತ್ತೊಮ್ಮೆ ಬೆಂಗಳೂರಿನ ಮನೆಯಲ್ಲಿದ್ದಾಗ ಮೈಲ್ಡ್ ಸ್ಟ್ರೋಕ್ ಆಗಿತ್ತು ಎನ್ನಲಾಗಿತ್ತು. ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು.. ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳ ಮಧ್ಯೆ ಎಚ್‌ಡಿಕೆ ಆರೋಗ್ಯ ಈಗ ಬಿಗಡಾಯಿಸಿದ್ದು, ತೀರಾ ಸುಸ್ತಾದವರಂತೆ ಕಾಣಿಸ್ತಿರೋದು ಕಾರ್ಯಕರ್ತರಲ್ಲಿ ಆತಂಕ ಹೆಚ್ಚಿಸಿದೆ..
ಕಳೆದ ವರ್ಷ ಮೀಡಿಯಾದವರ ಮುಂದೆ ಮಾತಾಡುವಾಗಲೇ ಮೂಗಿನಿಂದ ರಕ್ತ ಬಂದಿತ್ತು.. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಾಯಕರು ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ದಿಢೀರ್ ಮೂಗಿನಲ್ಲಿ ರಕ್ತಸ್ರಾವವಾಗಿತ್ತು. ಮೂಗಿನಿಂದ ರಕ್ತಸ್ರಾವ ಹೆಚ್ಚಾಗಿ, ಬಿಳಿ ಶರ್ಟ್ ರಕ್ತಮಯವಾಗಿತ್ತು. ಕೂಡಲೇ ಪುತ್ರ ನಿಖಿಲ್ ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರಗೆ ಕರೆದೊಯ್ದಿದ್ರು…
ಆದೇನೆ ಆಗಲಿ… ರಾಜ್ಯದಲ್ಲಿ 2 ಬಾರಿ ಸಿಎಂ ಆಗಿ ಅಧಿಕಾರ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಅವರ ಯೋಜನೆಗಳ ಈಗಲೂ ಜನರ ಮನಸಲ್ಲಿ ಗಟ್ಟಿಯಾಗಿ ಉಳಿದಿವೆ. ಈಗಲೂ ಜನರ ಏಳ್ಗೆಗಾಗಿ, ಜನರ ಅಭಿವೃದ್ಧಿಗಾಗಿ, ಬಡವರ ಕಲ್ಯಾಣಕ್ಕಾಗಿ ಶಕ್ತಿ ಮೀರಿ ಹೋರಾಡುವ ಕುಮಾರಣ್ಣ ಅವರಿಗೆ ಈಗ ಅನಾರೋಗ್ಯ ಕಾಡುತ್ತಿದೆ. ಆದ್ರೆ, ಈ ಎಲ್ಲಾ ಸಮಸ್ಯೆಗಳನ್ನು ಗೆದ್ದು, ದಳಪತಿಯಾಗಿ ಮೊದಲ ರೀತಿಯಲ್ಲಿ ಸಿಂಹ ಗರ್ಜನೆಯಂತೆ ರಾಜ್ಯದಲ್ಲಿ ಮತ್ತೆ ಸಿಎಂ ಆಗಿ ಜನರ ಸೇವೆ ಮಾಡಲಿ ಅನ್ನೋದೇ ಮಣ್ಣಿನ ಮಕ್ಕಳ ಪ್ರಾರ್ಥನೆಯಾಗಿದೆ.
Read Also : RSS ಗೀತೆ ಹಾಡಿದ್ದಕ್ಕೆ ನೋವಾಗಿದ್ರೆ, ನನ್ನ ಕಾರ್ಯಕರ್ತರಿಗೆ, ಪಕ್ಷದ ನಾಯಕರಿಗೆ ಕ್ಷಮೆ ಕೇಳ್ತೇನೆ- ಡಿಕೆ ಶಿವಕುಮಾರ್

