ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ತೀವ್ರ ಚರ್ಚೆಗೆ ಕಾರಣವಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ನಾಯಕರು ಹಲವು ಹೇಳಿಕೆಗಳನ್ನು ಕೂಡ ನೀಡಿದ್ದರು. ತಮ್ಮ ನಾಯಕರ ಬಗ್ಗೆ ಒಲವು ತೋರಿಸಿ ಮಾತನಾಡಿದ್ದರು. ಈ ಮಧ್ಯೆ ಸಿಎಂ ಬಣದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ಮಾಡಿದ್ದರು. ಈ ವಿಷಯ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈಗ ಅದೇ ವಿಚಾರವಾಗಿ ಡಿಕೆಶಿ ಮಾತನಾಡಿದ್ದಾರೆ.
ಹೌದು! ನಾನು ಸತೀಶ್ ಜಾರಕಿಹೊಳಿ (Satish Jarkiholi) ಭೇಟಿಯಾಗಿ ಮಾತಾಡಿದ್ದು ನಿಜ. ರಾಜಕಾರಣದಲ್ಲಿ ಬಾಂಧವ್ಯ, ನೆಂಟಸ್ತನ, ಸ್ನೇಹ ಸಂಬಂಧಗಳು ಇರುತ್ತವೆ. ನಾನು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಆಗಿದ್ದು ನಿಜ. ನಾವಿಬ್ಬರು ಕೊಲೀಗ್‌ಗಳು. ಕ್ಯಾಬಿನೆಟ್‌ನಲ್ಲಿ ಇರುತೇವೆ. ಹಲವು ಬಾರಿ ರಾತ್ರಿ ಊಟ ಹಾಗೂ ಬೆಳಗಿನ ಉಪಹಾರವನ್ನು ಸೇರಿಯೇ ಸೇವಿಸಿದ್ದೇವೆ. ನಾನು ಎಂ.ಬಿ. ಪಾಟೀಲ್ ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಪಕ್ಕದ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣ ನಮ್ಮೊಂದಿಗೆ ಕಾಂಪಿಟೇಶನ್ ಮಾಡುತ್ತಿವೆ. ಹೀಗಾಗಿ ನಾವು ಕೂಡ ಹೇಗೆ ಸ್ಪರ್ಧೆ ಮಾಡಬೇಕು ಎಂದು ಚರ್ಚಿಸಿದ್ದೇವೆ. ನಾವೆಲ್ ಕೋಲಿಗ್ ಗಳು ಆಗಿರುವುದರಿಂದಾಗಿ ಈ ಕುರಿತು ಚರ್ಚೆ ಮಾಡಿದ್ದೇವೆ. ಆದರೆ, ನೀವು ವಿರೋಧಿಗಳಂತೆ ಬಿಂಬಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

