
ವಕ್ಫ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮವನ್ನ ತಡೆಯಲು ಕೇಂದ್ರ ಸರ್ಕಾರ 2025ರಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನ ಜಾರಿಗೊಳಿಸಿತ್ತು. ವಕ್ಫ್ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವ್ಯಾಪಕ ವಿರೋಧದ ನಡುವೆಯೂ ಜಾರಿಗೊಳಿಸಿದೆ. ಹಾಗಾಗಿ, ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್, ಕಾಯ್ದೆಗೆ ಸಂಪೂರ್ಣ ತಡೆ ನೀಡಲು ನಿರಾಕರಿಸಿದೆ. ಆದರೆ, ಕೆಲವು ಅಂಶಗಳಿಗೆ ಮಾತ್ರ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಒಬ್ಬ ವ್ಯಕ್ತಿಯು ವಕ್ಫ್ ಮಂಡಳಿಗಳಿಗೆ ತನ್ನ ಭೂಮಿಯನ್ನು ದಾನ ಮಾಡಲು ಕನಿಷ್ಠ 5 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸಿರಬೇಕು. ಆಗ ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ದಾನ ಕೊಡಲು ಅರ್ಹ ಎಂಬುದು 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಅಂಶಕ್ಕೆ ಸದ್ಯಕ್ಕೆ ತಡೆ ನೀಡಲು ಒಪ್ಪಿದೆ. ಜೊತೆಯಲ್ಲಿ ವಕ್ಫ್ ಆಸ್ತಿಯನ್ನು ಯಾವುದು ಎಂದು ಗುರುತಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಸರ್ಕಾರದಿಂದ ನಿಯೋಜಿಸಲಾಗಿರುವ ಅಧಿಕಾರಿಗೆ ನೀಡಿರುವ ಅಂಶಕ್ಕೂ ಸಹ ತಡೆಯನ್ನು ನೀಡಲಾಗಿದೆ.
Read Also ಪ್ರಿಯಾಂಕ, ಉಪೇಂದ್ರ ಮೊಬೈಲ್ ಹ್ಯಾಕ್ : ಹಣ ಕೇಳಿದ್ರೆ ಕೊಡಬೇಡಿ ಎಂದು ಉಪ್ಪಿ