ನಟ ವಿಶಾಲ್‌ಗೆ (Actor Vishal) ಆರೋಗ್ಯ ಮತ್ತೆ ಕೈಕೊಟ್ಟಿದೆ. ಕಳೆದ ಕೆಲ ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ವಿಶಾಲ್(Vishal Health Issue), ಈಗ ಚೇತರಿಕೆ ಕಂಡು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಲು ರೆಡಿಯಾಗಿದ್ರು. ಆದ್ರೆ ವಿಶಾಲ್‌ಗೆ ಮತ್ತೆ ಆರೋಗ್ಯ ಕೈ ಕೊಟ್ಟಿದ್ದು, ಖಾಸಗಿ ಕಾರ್ಯಕ್ರಮ ಒಂದರಲ್ಲಿ ವೇದಿಕೆ ಮೇಲೆ ಎಲ್ಲರ ಜೊತೆ ಮಾತನಾಡುವಾಗ ವಿಶಾಲ್ ದೀಢಿರ್ ಕುಸಿದು ಬಿದ್ದಿದ್ದಾರೆ.
ಚಿತ್ತಿರೈ ಆಚರಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ವಿಲ್ಲುಪುರಂನ ಕೂವಾಗಮ್ ಗ್ರಾಮದ ದೇವಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಸ್ ಕೂವಾಗಮ್ ಎಂದು ತೃತೀಯ ಲಿಂಗಿಗಳ ಸೌಂದರ್ಯ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ವಿಶಾಲ್ ವೇದಿಕೆ ಮೇಲಿದ್ದರು. ಆದರೆ ವೇದಿಕೆ ಮೇಲಿದ್ದ ವಿಶಾಲ್ ಚೆನ್ನಾಗಿಯೇ ಎಲ್ಲರ ಜೊತೆ ನಗು ನಗುತ್ತ ಮಾತನಾಡುತ್ತ ಇದ್ದರು.. ಅದು ಏನಾಯಿತೋ ಏನೋ ಗೊತ್ತಿಲ್ಲ. ಇದ್ದಕ್ಕಿದ್ದಾಗೆ ಪ್ರಜ್ಞೆ ತಪ್ಪಿ ವಿಶಾಲ್ ವೇದಿಕೆ ಮೇಲಿಂದ ಕುಸಿದು ಬಿದ್ದಿದ್ದಾರೆ.
ವಿಶಾಲ್ ಕೆಳಕ್ಕೆ ಬೀಳ್ತಿದ್ದಂತೆ ಕಾರ್ಯಕ್ರಮ ಆಯೋಜಕರು, ಸ್ಥಳೀಯರು ಗಾಬರಿ ಆಗಿದ್ದರು. ಕೂಡಲೇ ವಿಶಾಲ್ ಅವರ ತಂಡ, ಮಾಜಿ ಸಚಿವ ಕೆ.ಪೊನ್ನುಡಿ ಹಾಗೂ ಕಾರ್ಯಕ್ರಮ ಆಯೋಜಕರು ಸ್ಟಾರ್ ನಟನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ವಿಶಾಲ್ ಮ್ಯಾನೇಜರ್, ವಿಶಾಲ್ ಅವರು ಪ್ರಸ್ತುತ ಆರೋಗ್ಯವಾಗಿದ್ದಾರೆ. ಮಧ್ಯಾಹ್ನದ ಊಟ ಮಾಡಿರಲಿಲ್ಲ. ಅದಕ್ಕಾಗಿಯೇ ಅವರು ಮೂರ್ಛೆ ಹೋದರು ಎಂದು ಮಾಹಿತಿ ನೀಡಿದ್ದಾರೆ.. ಅಲ್ಲದೆ ವೈದ್ಯರು ಸಹ ವಿಶಾಲ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ತಾವೇ ನಟಿಸಿದ್ದ ಮದಗಜ ರಾಜ ಎನ್ನುವ ಸಿನಿಮಾ ಕುರಿತು ಸುದ್ದಿಗೋಷ್ಠಿ ನಡೆಸುವಾಗ ವಿಶಾಲ್ ಅವರು ಮೈಕ್ ಹಿಡಿದುಕೊಂಡು ಮಾತಾಡುತ್ತಿದ್ದರು. ಈ ವೇಳೆ ಅವರ ಕೈ ನಡುಗುತ್ತಿತ್ತು.. ಮೈಕ್ ಅನ್ನು ಹಿಡಿದುಕೊಳ್ಳಲು ಆಗುತ್ತಿಲ್ಲ ಎನ್ನುವುದರ ಮಟ್ಟಿಗೆ ಕೈ ಶೇಕ್ ಆಗಿತ್ತು. ಜೊತೆಗೆ ತೊದಲುತ್ತ ಮಾತನಾಡಿದ್ದರು. ಇದರ ಬೆನ್ನಲ್ಲೇ ಇದೀಗ ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಕುಸಿದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ವಿಶಾಲ್‌ಗೆ ಏನಾಗಿದೆ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಆದೇನೆ ಆಗಲಿ… ಆರೋಗ್ಯವೇ ಮಹಾ ಭಾಗ್ಯ ಅಂತಾರೇ ದೊಡ್ಡವ್ರು. ಸದಾ ಚಿತ್ರರಂಗದ ಪರ ನಿಂತು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಅಭಿಮಾನಿಗಳನ್ನು ರಂಜಿಸುತ್ತಿದ್ದ ವಿಶಾಲ್ ಮತ್ತೆ ಆರೋಗ್ಯವಾಗಿ ಬರಲಿ ಅನ್ನೋದೇ ಎಲ್ಲರ ಆಶಯ..

