Site icon BosstvKannada

ವೀರೇಂದ್ರ ಪಪ್ಪಿ ಇಡಿ ವಶಕ್ಕೆ.. ಕುಸುಮಾಗೂ ಟೆನ್ಷನ್..‌ ಟೆನ್ಷನ್!

ಕಾಂಗ್ರೆಸ್‌ ಯುವ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಇಡಿ ಶಾಕ್‌ ನೀಡಿದೆ. ಬೆಂಗಳೂರಿನ ರಾಜರಾಜೇಶ್ವರನಗರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕುಸುಮಾಗೆ ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್‌ ನೀಡಿದ್ದಾರೆ. ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ‌ ಪಪ್ಪಿ ಜೊತೆಗೆ ಹನುಮಂತರಾಯಪ್ಪ ಅವರು ಹಣಕಾಸಿನ ವ್ಯವಹಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ರೇಡ್‌ ಮಾಡಲಾಗಿದ್ದು, ನಾಗರಭಾವಿಯ ಮುದ್ದನಪಾಳ್ಯ ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತೊಂದ್ಕಡೆ, ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಮನಿ ಲಾಂಡರಿಂಗ್‌ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿ ಅವರ ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ ಮತ್ತು ಗೋವಾ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಸದ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. 20 ಕಾರುಗಳಲ್ಲಿ ಬಂದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

Read Also : ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸಪ್ಪ ಅಪ್ಪ ಹೆಸರಿಡುವಂತೆ ಶಾಸಕ ಕಂದಕೂರ ಮನವಿ

ಅಲ್ದೇ, ಶಾಸಕರ ಸಹೋದರರಾದ ಕೆ.ಸಿ ನಾಗರಾಜ, ಕೆ.ಸಿ ತಿಪ್ಪೇಸ್ವಾಮಿ, ಕುಟುಂಬಸ್ಥರು, ಅವರೊಟ್ಟಿಗೆ ವ್ಯವಹಾರ ಹೊಂದಿದ್ದ ಹಲವು ಮುಖಂಡರ ಮನೆಗಳ ಮೇಲೆಯೂ ಇಡಿ ದಾಳಿ ಮಾಡಿದೆ. ಇದೀಗ ಸಿಕ್ಕಿಂನಲ್ಲಿ ಪ್ರವಾಸದಲ್ಲಿದ್ದ ವೀರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ..

Exit mobile version