ವಿರಾಟ್ ಕೊಹ್ಲಿ(Virat Kohli Test Retirement)ಯ ದಿಢೀರ್ ನಿವೃತ್ತಿಯು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಯ ನಡುವೆಯೇ ಬಿಸಿಸಿಐ ಸೂಚನೆ ಮೇರೆಗೆ ಕೊಹ್ಲಿ ಟೆಸ್ಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ವಿರಾಟ್ ಕೊಹ್ಲಿಗೆ ನಿವೃತ್ತಿ ಘೋಷಿಸುವಂತೆ ಬಿಸಿಸಿಐ ಮೊದಲೇ ಸೂಚನೆ ನೀಡಿತ್ತು. ಹೀಗಾಗಿಯೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದ್ರೆ ಇದರ ನಡುವೆ ಬಿಸಿಸಿಐ ಕೊಹ್ಲಿಗೆ ಒತ್ತಡ ತರುವ ಮೂಲಕ ನಿವೃತ್ತಿ ಪಡೆದಿದೆ ಎಂಬ ಚರ್ಚೆ ಕೂಡ ಶುರುವಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುವುದಿಲ್ಲ ಎಂಬ ಸೂಚನೆಯನ್ನ ಬಿಸಿಸಿಐ ನೀಡಲಾಗಿತ್ತು. ಇದೇ ಕಾರಣದಿಂದಾಗಿ ಅವರು ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಇದಾಗ್ಯೂ ನಿವೃತ್ತಿಯನ್ನು ಹಿಂಪಡೆಯಲು ಬಿಸಿಸಿಐ ಯಾವುದೇ ಮನವಿ ಮಾಡಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಬಿಸಿಸಿಐನಲ್ಲಿರುವ ಕೆಲವರು ರಾಜಕೀಯ ಮಾಡಿದ್ದಾರೆ ಎನ್ನಲಾಗ್ತಿದೆ.
ಬಿಸಿಸಿಐ ಯಾರಿಗೂ ಮನವಿ ಮಾಡುವುದಿಲ್ಲ. ನಿವೃತ್ತಿ ಎಂಬುದು ಆಟಗಾರನ ನಿರ್ಧಾರ. ಅದು ಅವರ ವೈಯಕ್ತಿಕ ಆಯ್ಕೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಅಲ್ಲದೆ ಇದಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಇನ್ನು ಮುಂದೆ ಟೆಸ್ಟ್ ತಂಡದಲ್ಲಿ ನೀವು ಹೊಂದಿಕೊಳ್ಳುವುದಿಲ್ಲ ಎಂದು ತಿಳಿಸಲಾಗಿತ್ತು. ಹೀಗಾಗಿ ಅವರು ನಿವೃತ್ತಿ ನೀಡಲು ನಿರ್ಧರಿಸಿದ್ದರು. ಆದರೆ ನಿರ್ಧಾರವನ್ನು ಬದಲಿಸುವಂತೆ ಯಾವುದೇ ಮನವಿ ಮಾಡಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
Also Read: Virat Kohli Retires From Test Cricket : ಇದೇ ಕಾರಣಕ್ಕೆ ಟೆಸ್ಟ್ ಮ್ಯಾಚ್‌ಗೆ ನಿವೃತ್ತಿ ಘೋಷಿಸಿದ ಕೊಹ್ಲಿ..!
ಇದೇ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡುವುದಿಲ್ಲ ಎಂದು ವಿರಾಟ್ ಕೊಹ್ಲಿಗೆ ತಿಳಿಸಲಾಗಿತ್ತು. ಇದರಿಂದ ಮನನೊಂದ ದಿಗ್ಗಜ ದಿಢೀರ್ ಆಗಿ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಬೀಳ್ಕೊಡುಗೆ ಇಲ್ಲದೆ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ಒಟ್ಟಿನಲ್ಲಿ 14 ವರ್ಷಗಳ ಕಾಲ ಭಾರತ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ ಬೀಳ್ಕೊಡುಗೆ ಪಂದ್ಯಕ್ಕೆ ಅರ್ಹರಾಗಿದ್ದರು. ಇದಾಗ್ಯೂ ಮೈದಾನದ ಮೂಲಕ ಅವರು ಕೆರಿಯರ್ ಅಂತ್ಯಗೊಳಿಸದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

