Site icon BosstvKannada

ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಹಿಂಸಾಚಾರ; ಇಂತಹ ಕೃತ್ಯ ಸರಿಯೇ?

ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಅಕ್ಷರಶಃ ಜ್ವಾಲಾಮುಖಿಯಂತಾಗಿ ಬಿಟ್ಟಿದೆ. ಶೇಖ್ ಹಸೀನಾ ಭಾರತಕ್ಕೆ ಪಲಾಯನವಾದ ನಂತರ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳು ಭೀಕರವಾಗುತ್ತಿವೆ. ಹಾದಿ ಹತ್ಯೆಯ ಆಕ್ರೋಶ ಈಗ ಅಲ್ಲಿ ಎಲ್ಲೆಲ್ಲೋ ಬೆಂಕಿ ಎನ್ನುವಂತಾಗಿ ಬಿಟ್ಟಿದೆ. ಆ ಕುರಿತಾದ ಒಂದು ಸ್ಟೋರಿ ಈಗ ನಿಮ್ಮ ಮುಂದೆ.

ರಾಜಕೀಯವೇ ಇರಲಿ, ಬೇಡಿಕೆಯ ಪ್ರತಿಭಟನೆಯೇ ಇರಲಿ ಬಾಂಗ್ಲಾದಲ್ಲಿ ಹಿಂಸಾಚಾರದ ಹಾದಿ ಹಿಡಿಯುತ್ತಿವೆ. ಬಾಂಗ್ಲಾದೇಶದ ದಂಗೆಯ ನಾಯಕ ಷರೀಫ್ ಒಸ್ಮಾನ್ ಹಾದಿ ಹತ್ಯೆಯ ನಂತರ ಆರಂಭವಾದ ಹಿಂಸಾಚಾರ ಮಿತಿಮೀರುತ್ತಿದೆ. ಯಾವುದೇ ಹಿಂಸಾಚಾರ ನಡೆಯಲಿ ಹಿಂದೂಗಳನ್ನು ಟಾರ್ಗೆಟ್ ಮಾಡುವ ಉಗ್ರ ಮನಸ್ಥಿತಿಯೂ ಅಲ್ಲಿ ಹೊರ ಬರುತ್ತಿದೆ. ಪ್ರವಾದಿ ನಿಂದನೆಯ ಸುಳ್ಳು ಆರೋಪ ಹೊರಿಸಿ 30 ವರ್ಷದ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ಅಷ್ಟಕ್ಕೇ ನಿಲ್ಲದ ಉದ್ರಿಕ್ತರ ಗುಂಪು ಆತನ ಶವವನ್ನೇ ಸುಟ್ಟು ಹಾಕಿ ವಿಕೃತಿ ಮೆರೆದಿತ್ತು. ಹಿಂದು ಯುವಕ ದೀಪು ಚಂದ್ರಾ ದಾಸ್ ಭೀಕರ ಹತ್ಯೆಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ಲಿನ ತುರ್ತು ಕಾರ್ಯಾಚರಣೆ ಬಟಾಲಿಯನ್ 7 ಜನ ಆರೋಪಿಗಳ ಹೆಡೆಮೂರಿ ಕಟ್ಟಿದರೆ, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅದ್ಯಾಕೋ ಉಗ್ರ ಮನಸ್ಥಿತಿಯಿಂದ ಬಾಂಗ್ಲಾ ಸಾಯ್ತಾ ಇದೆಯೋ ಗೊತ್ತಿಲ್ಲ..ನೆಮ್ಮದಿಯಾಗಿ ಬದುಕಬೇಕೆಂಬ ಅಮಾಯಕರ ಬದುಕಿಗೂ ಬೆಂಕಿ ಇಡುತ್ತಿರುವುದು ಶೋಚನೀಯ. ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ನಾಯಕರೊಬ್ಬರ ಮನೆಗೆ ಬೆಂಕಿ ಹಚ್ಚಿ, 7 ವರ್ಷದ ಪುತ್ರಿಯನ್ನು ಸುಟ್ಟಿದ್ದಾರೆ. ಅದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಯಲ್ಲಿ ಜನ ಇರುವುದನ್ನು ಗಮನಿಸಿದ ಪಾಪಿಗಳು ಮನೆ ಲಾಕ್ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪರಿಣಾಮ ನಾಯಕ ಬಿಲಾಲ ಹೂಸೈನ್ ಅವರ 7 ವರ್ಷದ ಪುತ್ರಿ ಆಯೇಷಾ ಅಖ್ತರ್ ಬೆಂಕಿಗೆ ಆಹುತಿಯಾಗಿದ್ದರೆ, ಅವಳ ಇಬ್ಬರು ಸಹೋದರಿಯರಾದ 16 ವರ್ಷದ ಸಲ್ಮಾ ಅಖ್ತರ್, 14 ವರ್ಷದ ಸಮಿಯಾ ಅಖ್ತರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಟುಂಬಸ್ಥರ ಗೋಳಾಟವಂತೂ ಮುಗಿಲು ಮುಟ್ಟಿದೆ.

ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿ ಆರಂಭವಾದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಲ್ಲಿನ ಜನ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಇನ್ನಾದರೂ ಬಾಂಗ್ಲಾದಲ್ಲಿ ಹಿಂಸೆ ನಿಂತು ಶಾಂತಿ ನೆಲೆಸಲಿ…

Exit mobile version