Site icon BosstvKannada

ನೇಪಾಳದಲ್ಲಿ ಹಿಂಸಾಚಾರ : ಪ್ರಧಾನಿ ಹುದ್ದೆಗೆ ಕೆ.ಪಿ. ಓಲಿ ರಾಜೀನಾಮೆ

ನೇಪಾಳ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯೇ ಬೀಸಿದೆ. ನೇಪಾಳ ಸಾಮಾಜಿಕ ಮಾಧ್ಯಮ ನಿಷೇಧ ಹಿನ್ನೆಲೆ ಪ್ರತಿಭಟನೆ ಭುಗಿಲೆದ್ದಿದೆ. ನೇಪಾಳ GenZ ಪ್ರತಿಭಟನೆಯ ಘರ್ಷಣೆಗಳು, ಕರ್ಫ್ಯೂಗಳು ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಅನ್ನು ನಿರ್ಬಂಧಿಸಿದ್ದಕ್ಕಾಗಿ ಆಕ್ರೋಶ ಹಿಂಸಾಚಾರಕ್ಕೆ ತಿರುಗಿ ಅರಾಜಕತೆ ತಾಂಡವಾಡ್ತಿದೆ.

ನೇಪಾಳದಲ್ಲಿ ಯುವ ಜನತೆಯ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರಧಾನಿ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ. ದೇಶದಲ್ಲಿ ಸ್ಥಿರತೆ ಕಳೆದುಕೊಂಡ ಪರಿಸ್ಥಿತಿ, ಹೆಚ್ಚುತ್ತಿರುವ ಹಿಂಸೆ ಮತ್ತು ಸಾರ್ವಜನಿಕ ಅಸಮಾಧಾನವೇ ಈ ನಿರ್ಧಾರಕ್ಕೆ ಕಾರಣವಾಗಿದೆ. ಸದ್ಯ ನೇಪಾಳ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಅಲ್ಲಿನ ಪಿಎಂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಹೋರಾಟಗಾರರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ಕೆ.ಪಿ. ಶರ್ಮಾ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಹಿತಿಯ ಪ್ರಕಾರ, ಸೇನಾ ಮುಖ್ಯಸ್ಥರು ಸ್ವತಃ ಪ್ರಧಾನಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಪ್ರತಿಭಟನಾಕಾರರು ಕೂಡ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ನಡುವೆ ಓಲಿ ದೇಶ ಬಿಟ್ಟು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಹಲವಾರು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಸಿದ್ಧಪಡಿಸಲಾಗಿತ್ತು ಎಂಬ ವರದಿಗಳು ಬೆಳಕಿಗೆ ಬಂದಿದ್ದವು.

ನೇಪಾಳದಲ್ಲಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ್ದ ನಿಷೇಧವನ್ನು ಅಲ್ಲಿನ ಸರ್ಕಾರ ಕೊನೆಗೂ ವಾಪಾಸ್ ಪಡೆದಿದ್ರೂ ಪ್ರತಿಭಟನೆ ಹಿಂಸಾಚಾರ ರೂಪ ತಾಳಿ ನೇಪಾಳದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.

Read Also : ನೇಪಾಳದಲ್ಲಿ ಭುಗಿಲೆದ್ದ Gen Z ಆಕ್ರೋಶ : 16 ಸಾವು, 100 ಜನರಿಗೆ ಗಾಯ.. ಕರ್ಫ್ಯೂ ಜಾರಿ!

Exit mobile version