Site icon BosstvKannada

ಇಂಡಿಯಾ ಪರ ಆಡಲು ವೈಭವ್ ಸೂರ್ಯವಂಶಿ ಅನರ್ಹ!

ಭಾರತದ ಯುವ ಬ್ಯಾಟರ್‌ ವೈಭವ್ ಸೂರ್ಯವಂಶಿ ತಮ್ಮ ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ಸೆನ್ಸೇಷನ್ ಮೂಡಿಸಿದ ಆಟಗಾರ. IPL ನಲ್ಲಿ ಭರ್ಜರಿ ಆಟವಾಡಿ ಭಾರತಿಯ ಲೆಜೆಂಡ್‌ಗಳು ಹುಬ್ಬೆರಿಸುವಂತೆ ಮಾಡಿದ್ದರು. ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ನಡೆಯುತ್ತಿರುವ ಯೂತ್ ಏಕದಿನ ಸರಣಿಯಲ್ಲಿ ವೈಭವ್ ಭರ್ಜರಿ ಬ್ಯಾಟಿಂಗ್‌ ಮಾಡಿ ಇಂಗ್ಲೆಂಡ್‌ ತಂಡದ ಬೌಲರ್‌ಗಳ ಬೆಂಡೆತ್ತಿದ್ದಾರೆ.

ಕೇವಲ 35 ಎಸೆತದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಸರಣಿಯಲ್ಲಿ 355 ರನ್‌ ಬಾರಿಸುವ ಮೂಲಕ ಯೂತ್ ಏಕದಿನ ಸರಣಿಯಲ್ಲಿ ಅಧಿಕ ರನ್‌ ಬಾರಿಸಿದ ಆಟಗಾರ ಎನಿಸಿದ್ದಾರೆ. ಇಂಥ ಒಬ್ಬ ವಿಸ್ಪೋಟಕ ಆಟಗಾರನಿಗೆ ಭಾರತೀಯ ತಂಡದಲ್ಲಿ ಚಾನ್ಸ್‌ ಇಲ್ಲದಂತಾಗಿದೆ.

ಅಂಡರ್‌ 19 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವೈಭವ್‌ ಸೀನಿಯರ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲು ಅನರ್ಹರಾಗಿದ್ದಾರೆ. ICCಯ ಹೊಸ ನಿಯಮದ ಪ್ರಕಾರ ಸೀನಿಯರ್ ತಂಡದಲ್ಲಿ ಆಡಲು ಕನಿಷ್ಠ 15 ವರ್ಷ ತುಂಬಿರಬೇಕು. ಆದರೆ ವೈಭವ್‌ ಇನ್ನು ಕೇವಲ 14 ವರ್ಷದ ಬಾಲಕನಾಗಿರುವ ಕಾರಣ ಭಾರತದ ಪರ ಆಡಲು ಅನರ್ಹನಾಗಿದ್ದಾನೆ. ವೈಭವ್‌ ಆಟ ಚೆನ್ನಾಗಿದ್ದರೂ ಅವರ ವಯಸ್ಸು ಕಡಿಮೆ ಇರುವ ಕಾರಣ ಇನ್ನು ಒಂದು ವರ್ಷ ಕಾಯಬೇಕಿದೆ.

Exit mobile version