ರಾಜಕೀಯ ಜನ್ಮ ನೀಡಿದ, ಜನ ನಾಯಕನನ್ನಾಗಿ ಬೆಳೆಸಿದ, ಕೇಂದ್ರ ಮಂತ್ರಿಯನ್ನಾಗಿ ಮಾಡಿದ ಕರ್ಮಭೂಮಿಯಲ್ಲಿ ವಿ.ಸೋಮಣ್ಣನವರ ಜನ್ಮದಿನವನ್ನ ಅದ್ಧೂರಿಯಾಗಿ ಆಚರಿಸಲಾಯ್ತು.. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣರವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ, ವಿನೂತನವಾಗಿ ಆಚರಿಸಿ ಸಂಭ್ರಮಿಸಿದರು.. ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಜನರ ಗಮನ ಸೆಳೆದರು. ಬೆಳಗ್ಗೆಯಿಂದಲೇ ಸಾವಿರಾರು ಕಾರ್ಯಕರ್ತರು ಮನೆ ಮತ್ತು ಕಚೇರಿ ಬಳಿ ಬಂದು ಶುಭಾಶಯ ಕೋರಿದ್ರು..
ಈ ಬಾರಿ ಗೋವಿಂದರಾಜನಗರ ಕ್ಷೇತ್ರ ಪ್ರತಿನಿಧಿಸುತ್ತಿಲ್ಲವಾದ್ರೂ ಸೋಮಣ್ಣ ಅವರಿಗೆ ರಾಜಕೀಯ ಶಕ್ತಿ ತುಂಬಿದ್ದು ಇದೇ ಗೋವಿಂದರಾಜನಗರ ಕ್ಷೇತ್ರ.. ಇಲ್ಲಿನ ಮತದಾರರು, ಬಿಜೆಪಿಯ ಕಾರ್ಯಕರ್ತರು ಇಂದು ಸೋಮಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಇದಕ್ಕೂ ಮುನ್ನ ವಿ. ಸೋಮಣ್ಣ ಗೋವಿಂದರಾಜನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಇದರ ಜತೆಗೆ ಇಂದು ವಿ. ಸೋಮಣ್ಣ ಅವರ ಪುತ್ರ ಡಾ. ಅರುಣ್ ಸೋಮಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾವಿರಾರು ಅಭಿಮಾನಿಗಳು ಮತ್ತು ಮುಖಂಡರು ಕೇಕ್ ಮತ್ತು ಹೂ ಗುಚ್ಛ ನೀಡಿ ಶುಭಕೋರಿದರು. ಮಗ ಅರುಣ್ ರಾಜಕೀಯಕ್ಕೆ ಬರೋದು ಖಚಿತ, ಯಾವ ಕ್ಷೇತ್ರ ಎಂಬುದು ಮುಂದಿನ ದಿನಮಾನದಲ್ಲಿ ಗೊತ್ತಾಗುತ್ತದೆ ಎಂದು ಹೇಳಿದ್ರು..

