
ಸಾಂಸ್ಕೃತಿಕವಾಗಿ ಸಮೃದ್ಧವಾಗಿರೋ ನಮ್ಮ ಕರ್ನಾಟಕದ ವೈಭವವನ್ನು ಜನರಿಗೆ ತಿಳಿಸೋಕೆ ಆರಂಭಿಸಿದ ಸ್ಟಾರ್ ಸುವರ್ಣದ ಹೆಮ್ಮೆಯ ಕಥೆ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ. ಕಥೆಯೊಂದು ಜನರ ಮನ ಮುಟ್ಬೇಕು ಅಂದ್ರೆ ಅದರಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಛಾಪು ಇರಬೇಕು. ಕರುನಾಡ ಸಂಸ್ಕೃತಿ ಹಾಸು ಹೊಕ್ಕಾಗಿರೋ ಕಥೆಯನ್ನು ನಾವು ಆಯ್ಕೆ ಮಾಡುವಾಗ ನಮ್ಮಲ್ಲಿದ್ದ ಉದ್ದೇಶವೊಂದೇ ನಮ್ಮ ನೆಲದ ಕಥೆಯನ್ನ ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕು ಎಂಬುದು. ಪೌರಾಣಿಕ ಕಥಾಹಂದರ ಹೊಂದಿರೋ ಉಧೋ ಉಧೋ ಶ್ರೀ ರೇಣುಕಾ-ಯಲ್ಲಮ್ಮರ ಕಥೆಯು ಇಂದು ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಕನ್ನಡಿಗರ ಮನ ಗೆದ್ದಿದೆ. ವಿಭಿನ್ನ ಪ್ರಯೋಗ, ಪೌರಾಣಿಕ ಹಿನ್ನೆಲೆಯ ಜೊತೆಗಿನ ಈ ಜರ್ನಿ ಇಂದು 1000 ಸಂಚಿಕೆಗಳ ದಾಖಲೆಗೆ ಸಾಕ್ಷಿಯಾಗಿದೆ. ಪ್ರತಿ ನಿತ್ಯ ನಮ್ಮ ರೇಣುಕಾ – ಯಲ್ಲಮ್ಮರ ಬಗೆಗಿನ ಕಥೆಯ ಬಗ್ಗೆ ಮೆಸೇಜುಗಳು, ಫೀಡ್‌ಬ್ಯಾಕ್‌ಗಳು ಬಂದಾಗ ಈ ಪಯಣದ ಬಗ್ಗೆ ಖುಷಿಯಾಗುತ್ತದೆ. ರೇಣುಕಾ – ಯಲ್ಲಮ್ಮರ ಕಥೆಗಳು ನಿಮ್ಮ ಮನ ಮುಟ್ಟಿದೆ ಎಂಬುದೇ ನಮ್ಮ ಗೆಲುವನ್ನು ಸೂಚಿಸುತ್ತೆ. ಈ ಅಭೂತಪೂರ್ವ ಗೆಲುವಿನಲ್ಲಿ ನಮ್ಮ ಜೊತೆಗೆ ನಿಂತ ಎಲ್ಲಾ ಕನ್ನಡಿಗರಿಗೆ ವಂದನೆಗಳು. ಇದೇ ಥರ ಮುಂದೆಯೂ ಜೀವನ ಮೌಲ್ಯ ಮತ್ತು ಮನರಂಜನೆ ಎರಡನ್ನೂ ಸಂಯೋಜಿಸಿ, ವಿಶೇಷ ಅನುಭವಗಳನ್ನು ನೀಡುತ್ತೇವೆ. ನಮ್ಮ ಮಣ್ಣಿನ ವಿಶೇಷತೆಗಳನ್ನು ಸಾರುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಪ್ರತಿದಿನ ರಾತ್ರಿ 9:00 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣದಲ್ಲಿ.