ನಿರಂತರವಾಗಿ ಭಾರತವನ್ನು ಕೆಣಕಿದ್ದ ಪಾಕಿಸ್ತಾನಕ್ಕೆ ಈಗ ಉಸಿರಾಡದ ಸ್ಥಿತಿ ನಿರ್ಮಾಣವಾಗಿದೆ. ಹೇಗಾದ್ರೂ ಮಾಡಿ ಜೀವ ಉಳಿಸಿಕೊಳ್ಳೋಕೆ ಕೊನೇ ಕ್ಷಣದ ಹೋರಾಟ ನಡೆಸಿದೆ.. ಯಾಕಂದ್ರೆ, ಪಾಕಿಸ್ತಾನ ಬಿಟ್ಟ ರಾಕೆಟ್, ಮಿಸೈಲ್‌ಗಳನ್ನು ಭಾರತೀಯ ಸೇನೆ ಕ್ಷಣಾರ್ಧದಲ್ಲೇ ಹೊಡೆದುರುಳಿಸುತ್ತಿದೆ. ಜೊತೆಗೆ ಪಾಕಿಸ್ತಾನದ ಕರಾಚಿ, ಇಸ್ಲಾಮಾಬಾದ್‌ನಂತಹ ದೊಡ್ಡ ನಗರಗಳಿಗೆ ನುಗ್ಗಿ ಭಯಾನಕ ದಾಳಿ ಮಾಡುತ್ತಿದೆ. ಇದರ ಪರಿಣಾಮ ಈಗ ಹೇಗಾಗಿದೆ ಅಂದ್ರೆ, ಭಾರತದ ಹೊಡೆತಕ್ಕೆ ಪಾಕಿಸ್ತಾನ ವಿಲ ವಿಲ ಒದ್ದಾಡುತ್ತಿದೆ. ಇಂಥಾ ಹೊತ್ತಲ್ಲಿ ಪಾಕಿಸ್ತಾನಕ್ಕೆ ಅದೊಬ್ಬ ಸ್ನೇಹಿತ ಬೆನ್ನೆಲುಬಾಗಿ ನಿಂತಿದ್ದಾನೆ.. ಸಂಕಷ್ಟ ಕಾಲದಲ್ಲಿ ಭಾರತ ಮಾಡಿದ ಸಹಾಯವನ್ನು ಮರೆತು ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟಿದ್ದು, ಜಗತ್ತಿನಾದ್ಯಂತ ಆಕ್ರೋಶ ಹೆಚ್ಚಾಗುತ್ತಿದೆ.
ಇಂಡಿಯನ್ ಆರ್ಮಿಯ ಪಾಶುಪತಾಸ್ತ್ರ ಎದುರಿಸಲಾಗದ ಪಾಕಿಸ್ತಾನ(Pakistan)ಕ್ಕೆ ಈಗ ಭಾರತದ ಹಳೆಯ ಸ್ನೇಹಿತನ ಬೆಂಬಲ ಸಿಕ್ಕಿದೆ.. ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದಾಗ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಮಾಡಿದ ಸಹಾಯವನ್ನೂ ಮರೆತು, ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟಿದೆ.. ಅದೂ ಯಾವ ಮಟ್ಟಿಗೆ ಅಂದ್ರೆ, ಶಸ್ತ್ರಾಸ್ತ್ರಗಳಿಂದ ಹಿಡಿದು, ಸೈನಿಕರವರೆಗೂ ಸಪೋರ್ಟ್(Turkey Support Pakistan) ಮಾಡಿದೆ. ಈ ಸಂದರ್ಭದಲ್ಲಿ, ಟರ್ಕಿ ಪಾಕಿಸ್ತಾನಕ್ಕೆ ಸೈನಿಕ ಸಹಾಯವನ್ನು ಒದಗಿಸಿದೆ ಅಂತಾ ಹೇಳಲಾಗ್ತಿದೆ. ಅಲ್ಲದೇ ಏಪ್ರಿಲ್ 27ರಂದು ಆರು ಟರ್ಕಿಶ್ C-130 ಹರ್ಕ್ಯುಲಸ್ ಸಾಗಣೆ ವಿಮಾನಗಳು ಸೈನಿಕ ಸಾಮಗ್ರಿಗಳೊಂದಿಗೆ ಪಾಕಿಸ್ತಾನದಲ್ಲಿ ಇಳಿದಿವೆ ಅಂತಾ ವರದಿಯಾಗಿದೆ. ಇದರ ಜೊತೆಗೆ, ಟರ್ಕಿ(Turkey)ಯ ಯುದ್ಧನೌಕೆಯೊಂದು ಕರಾಚಿಯಲ್ಲಿ ಇಳಿದಿದೆ ಅಂತಲೂ ವರದಿಯಾಗಿದೆ. ಅಷ್ಟೇ ಅಲ್ಲ.. ನಿನ್ನೆಯೂ ಸಹ ಟರ್ಕಿಯ ಯುದ್ಧ ವಿಮಾನವೊಂದು ಪಾಕಿಸ್ತಾನದಲ್ಲಿ ಲ್ಯಾಂಡ್ ಆಗಿದೆ ಅಂತಾ ಸುದ್ದಿಯಾಗಿದ್ದು, ಪಾಕ್ ಜೊತೆಗಿನ ಟರ್ಕಿ ಸ್ನೇಹ ಸಂಬಂಧ ದೃಢ ಅಂತಲೇ ವಿಶ್ಲೇಷಣೆ ಮಾಡಲಾಗ್ತಿದೆ..

ಇನ್ನು, 2023ರ ಫೆಬ್ರವರಿಯಲ್ಲಿ ಟರ್ಕಿಯ ಆಗ್ನೇಯ ಭಾಗ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೀಕರ ಭೂಕಂಪದಲ್ಲಿ 50 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಆಗ ಭಾರತವು ತಕ್ಷಣವೇ ಆಪರೇಷನ್ ದೋಸ್ತ್ ಕಾರ್ಯಾಚರಣೆ ಆರಂಭಿಸಿತ್ತು.. ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನಗಳ ಮೂಲಕ NDRF, ವೈದ್ಯಕೀಯ ತಂಡಗಳು, ಔಷಧಿಗಳು, ಆಹಾರ ಸಾಮಗ್ರಿಗಳು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನು ಸಹ ಭಾರತದಿಂದ ಟರ್ಕಿಗೆ ರವಾನಿಸಲಾಗಿತ್ತು. ಭಾರತವು ಟರ್ಕಿಗೆ ಸಹಾಯ ಮಾಡಿದ ಮೊದಲ ರಾಷ್ಟ್ರಗಳಲ್ಲಿ ಒಂದಾಗಿತ್ತು… ಇದೀಗ ಇಂಥಾ ಸಹಾಯವನ್ನೇ ಮರೆತು ಟರ್ಕಿ ಭಾರತಕ್ಕೆ ದ್ರೋಹ ಬಗೆದಿದೆ.. ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕ್ ಬಾಲ ಹಿಡಿದು ಜೈ ಅಂತಿದ್ದು, ವಿಶ್ವದಾದ್ಯಂತ ಈ ಇಸ್ಲಾಮಿಕ್ ದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ..
Also Read: Operation Sindoor : ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆ!
ಸದ್ಯ, ಪಾಕಿಸ್ತಾನಕ್ಕೆ ಟರ್ಕಿ ಏನೋ ಸಹಾಯ ಮಾಡ್ತಿರಬಹುದು.. ಸಹಾಯ ಮಾಡಲೂಬಾರದು ಅಂತಾ ಭಾರತ ಬಯಸುವುದೂ ಇಲ್ಲ.. ಆದ್ರೆ, ಭಯೋತ್ಪಾದನೆ ಅನ್ನೋದು ಎಲ್ಲ ದೇಶಗಳನ್ನೂ ಕಾಡುವ ಭೂತ.. ನಮ್ಮ ಹೋರಾಟವೂ ನೇರವಾಗಿ ಪಾಕಿಸ್ತಾನದ ವಿರುದ್ಧ ಅಲ್ಲ.. ಅಮಾಯಕರನ್ನು ಬಲಿ ಪಡೆಯುವ ಉಗ್ರರಿಗೆ ಪೋಷಣೆ ಯಾಕೆ ನೀಡ್ಬೇಕು? ಭಯೋತ್ಪಾದನೆಯನ್ನು ಸದೆಬಡಿಯೋದು ನಮ್ಮ ದೇಶದ ಉದ್ದೇಶ.. ಇಂಥಾದ್ರಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟಿರೋದು ಉಗ್ರರ ಸಹಾಯಕ್ಕೆ ನಿಂತಷ್ಟೇ ಸಮಾನ ಅಂತಾ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರೋದಂತೂ ಸುಳ್ಳಲ್ಲ.