Site icon BosstvKannada

ಪೆಸಿಫಿಕ್‌ ಸಾಗರದಲ್ಲಿ ಅಬ್ಬರದ ಸುನಾಮಿ ಅಲೆ : ಫಿಲಿಫಿನ್ಸ್‌, ಚಿಲಿ ದೇಶಗಳಿಗೂ ಅಲರ್ಟ್‌!

ಫೆಸಿಫಿಕ್‌ ಸಾಗರದಲ್ಲಿ ಸುನಾಮಿ ಅಲೆ ಅಬ್ಬರಿಸಿದೆ. ಜಗತ್ತಿನ 10 ಅತ್ಯಂತ ಶಕ್ತಿಶಾಲಿ ಭೂಕಂಪಗಳಲ್ಲಿ ಒಂದು. ರಷ್ಯಾದ ಪೂರ್ವಭಾಗದ ಕಮ್ಚಟ್ಕಾ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಷ್ಯಾ, ಜಪಾನ್‌, ಅಮೆರಿಕ- ಮೊದಲಾದ ಕಡೆ ಭಾರಿ ಸುನಾಮಿ ಸೃಷ್ಟಿಯಾಗಿದೆ. ಇನ್ನೂ ಅಮೆರಿಕದ ಅಲಾಸ್ಕಾ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಸುನಾಮಿ ಅಲೆಗಳನ್ನು ಉಂಟುಮಾಡಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಈ ಭೂಕಂಪವು 14 ವರ್ಷಗಳಲ್ಲಿ ವಿಶ್ವದ ಅತ್ಯಂತ ಪ್ರಬಲ ಭೂಕಂಪವಾಗಿದೆ.

ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಭೂಕಂಪ

ರಷ್ಯಾದ ಪೂರ್ವಭಾಗದ ಕಮ್ಚಟ್ಕಾ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಷ್ಯಾ, ಜಪಾನ್‌, ಅಮೆರಿಕ- ಮೊದಲಾದ ಕಡೆ ಭಾರಿ ಸುನಾಮಿ ಸೃಷ್ಟಿಯಾಗಿದೆ.

ರಷ್ಯಾ ಕರಾವಳಿಗೆ ಅಪ್ಪಳಿಸಿದ 13 ಅಡಿ ಎತ್ತರದ ಸುನಾಮಿ

ರಷ್ಯಾದ ಕರಾವಳಿಗೆ ಹದಿಮೂರು ಅಡಿ ಎತ್ತರದ ಸುನಾಮಿ ಅಪ್ಪಳಿಸಿದೆ. ರಷ್ಯಾದ ತೀರ ಪ್ರದೇಶಗಳಲ್ಲಿ ಭಾರೀ ಎತ್ತರದ ಅಲೆಗಳು ಕಾಣಲು ಆರಂಭಿಸಿದೆ.

ಅಮೆರಿಕ, ಜಪಾನ್‌ಗೂ ಸುನಾಮಿ ಅಲೆಗಳ ಅಪಾಯ

ಅಮೆರಿಕ, ಜಪಾನ್ ಮೊದಲಾದ ನೆರೆಯ ದೇಶಗಳು, ನ್ಯೂಜಿಲೆಂಡ್‌ನ ದಕ್ಷಿಣಕ್ಕೆ ಪೆಸಿಫಿಕ್ ದ್ವೀಪಗಳು ಹಾಗೂ ಕುರಿಲ್, ಹವಾಯಿಯನ್ ಮೊದಲಾದ ದ್ವೀಪಗಳಿಗೆ ಪೆಸಿಫಿಕ್ ಮಹಾಸಾಗರದ ಸುನಾಮಿಯ ಎಚ್ಚರಿಕೆ ನೀಡಲಾಗಿದೆ. ಸಂಭಾವ್ಯ ಸುನಾಮಿ ಅಪಾಯವು ಒಂದು ದಿನಕ್ಕಿಂತ ಹೆಚ್ಚು ಕಾಲ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲಾ ಫಿಲಿಫಿನ್ಸ್‌, ಚಿಲಿ ದೇಶಗಳಿಗೂ ಅಲರ್ಟ್‌ ಘೋಷಿಸಲಾಗಿದೆ.

ಜಪಾನ್‌ನ 20 ಲಕ್ಷ ಜನರ ಸ್ಥಳಾಂತರ, ಬೀಚ್‌ಗಳಲ್ಲಿ ಕಟ್ಟೆಚ್ಚರ
ಸುರಕ್ಷತಾ ದೃಷ್ಟಿಯಿಂದ ಜಪಾನ್‌ನ ಕರಾವಳಿ ತೀರದ 20 ಲಕ್ಷ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಇನಾಜ್ ಬೀಚ್ ಸೇರಿದಂತೆ ಹಲವು ಜನಪ್ರಿಯ ಕಡಲತೀರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸುನಾಮಿ ಪರಿಣಾಮ ಎಲ್ಲೆಲ್ಲಿ ಇರಲಿದೆ?
ರಷ್ಯಾದ ಕುರಿಲ್ ದ್ವೀಪ, ಅಮೆರಿಕದ ಹವಾಯಿ ದ್ವೀಪ, ಅಲಸ್ಕಾದ ಅಲ್ಯೂಟಿಯನ್ ದ್ವೀಪ, ಉತ್ತರ ಕ್ಯಾಲಿಫೋರ್ನಿಯಾದ ಕೆಲಭಾಗಗಳು, ಜಪಾನ್‌ನ ಹೊಕ್ಕೈಡೊ ದ್ವೀಪ, ಟೋಕೊಯೊ ಕೊಲ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಸುನಾಮಿಯ ಅಲೆಗಳು ಅಪ್ಪಳಿಸಿವೆ. ಕರಾವಳಿಯುದ್ದಕ್ಕೂ ಸುನಾಮಿ ಅಲೆಗಳು ಈಗಾಗಲೇ ಪರಿಣಾಮ ಬೀರಲು ಪ್ರಾರಂಭಿಸಿವೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ.

ಒವಾಹುದ ಉತ್ತರ ತೀರದಲ್ಲಿರುವ ಹಲೈವಾದಲ್ಲಿ ಅತಿ ಹೆಚ್ಚು ಎತ್ತರದ (4 ಅಡಿ/1.2 ಮೀ.) ಭೂಕಂಪ ದಾಖಲಾಗಿದೆ. ಹೊಕ್ಕೈಡೊ, ಟೋಕಿಯೊ ಕೊಲ್ಲಿಯುದ್ದಕ್ಕೂ 2 ಅಡಿ (60 ಸೆಂ.ಮೀ.) ಎತ್ತರದ ಸುನಾಮಿ ಪತ್ತೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇನ್ನಷ್ಟು ದೊಡ್ಡ ಅಲೆಗಳು ಏಳಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Exit mobile version