Site icon BosstvKannada

ಭಾರತಕ್ಕೆ ಬೆದರಿದ ಟ್ರಂಪ್? ತೆರಿಗೆ ಹಿಂತೆಗೆದುಕೊಳ್ಳಲು ನಿರ್ಧಾರ?

ವಾಷಿಂಗ್ಟನ್‌: ಇತ್ತೀಚೆಗಷ್ಟೇ ಅಮೆರಿಕ ಭಾರತ ಸೇರಿ ಹಲವು ರಾಷ್ಟ್ರಗಳ ವಿರುದ್ಧ ತೆರಿಗೆ ಸಮರ ಸಾರಿತ್ತು. ಇದಕ್ಕೆ ಭಾರತ ತಕ್ಕ ಉತ್ತರ ನೀಡಿತ್ತು. ಅಮೆರಿಕದಿಂದ (India – USA) ಆಮದಾಗುವ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸಿತ್ತು. ಹೀಗಾಗಿ ಪೆಟ್ಟು ತಿಂದ ಅಮೆರಿಕ, ಭಾರತದ ಪ್ರತ್ಯುತ್ತರಕ್ಕೆ ಬೆದರಿದೆ. ಹೀಗಾಗಿ ಭಾರತದ ವಸ್ತುಗಳ ಮೇಲೆ ಇದ್ದ ಶೇ. 25ರಷ್ಟು ಹೆಚ್ಚುವರಿ ಸುಂಕ ತೆಗೆದು ಹಾಕಲು ನಿರ್ಧರಿಸಿದೆ ಎನ್ನಲಾಗಿದೆ.

ಭಾರತದ ಮೇಲೆ ವಿಧಿಸಲಾದ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು (Tarrifs) ತೆಗೆದುಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಯಾರಿ ನಡೆಸಿದ್ದಾರೆ ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್‌ ಹೇಳಿದ್ದಾರೆ.

ಭಾರತದ ಮೇಲೆ ಶೇ. 50ರಷ್ಟು ( ಶೇ.25 ಹೆಚ್ಚುವರಿ) ಸುಂಕ ವಿಧಿಸಿದಾಗಿನಿಂದ ರಷ್ಯಾದಿಂದ ತೈಲ ಖರೀದಿಸುವುದು ಗಮನಾರ್ಹವಾಗಿ ಕಡಿಮೆಯಾಗಿದೆ. ಶೇ. 50 ಸುಂಕ ಇದ್ದು, ಇದು ಶಾಶ್ವತವಾಗಿ ಇರುವುದಿಲ್ಲ ಎಂದು ಹೇಳಿದ್ದಾರೆ. ಭಾರತದ ಮೇಲೆ ವಿಧಿಸಲಾದ ಶೇ. 25 ಹೆಚ್ಚುವರಿ ಸುಂಕವನ್ನು ಭವಿಷ್ಯದಲ್ಲಿ ತೆಗೆದುಹಾಕಬಹುದು ಎಂದಿದ್ದಾರೆ.

ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಎೞದು ಆರೋಪಿಸಿ ಭಾರತದ ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸಲಾಗಿತ್ತು. ಭಾರತವು ತಿರುಗೇಟು ನೀಡುತ್ತಿದ್ದಂತೆ ಅಮೆರಿಕ ಈಗ ಬಾಲ ಮುದೂಡಿಕೊಳ್ಳುತ್ತಿದೆ.

Exit mobile version