Site icon BosstvKannada

Trump ಡಬಲ್‌ಗೇಮ್‌.. ಭಾರತ ವಿರುದ್ಧ ಷಡ್ಯಂತ್ರ!

Trump

ಭಾರತ ಹಾಗೂ ಅಮೆರಿಕಾ ನಡುವೆ ಉತ್ತಮ ಸಂಬಂಧವೇನೋ ಇದೆ. ಆದ್ರೆ ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ Trump ಡಬಲ್‌ ಗೇಮ್‌ ಆಡ್ತಿರೋದು ಬೆಳಕಿಗೆ ಬರ್ತಿದೆ. ಮೊನ್ನೆಯಷ್ಟೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ನಾನೇ ಸೂಚನೆ ನೀಡಿದ್ದು ಅಂತ ಹೇಳಿ ಭಾರತಕ್ಕೆ ಮುಜುಗರ ಉಂಟು ಮಾಡಿದ್ರು. ಇದೀಗ ಭಾರತದ ವಿರುದ್ಧದ ತೆರಿಗೆ ಯುದ್ಧದಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಮಿತಿಮೀರಿ ಮಾತನಾಡಿದ್ದಾರೆ. ಭಾರತ ತೆರಿಗೆ ವಿಚಾರದಲ್ಲಿ ಅಮೆರಿಕಾಗೆ ಒಂದಿಂಚೂ ಸಡಿಲ ಮಾಡದಿರುವುದೇ ಟ್ರಂಪ್‌ ಈ ರೀತಿ ಸಂಚು ರೂಪಿಸಲು ಕಾರಣವಾಗಿದೆ.

ಅಮೆರಿಕ ಮೂಲಕ ಕಂಪನಿಯಾದ ಆ್ಯಪಲ್ ಸಿಇಓಗೆ ಭಾರತದಲ್ಲಿ ಹೂಡಿಕೆ ಮಾಡದಂತೆ ಸೂಚಿಸುತ್ತಿದ್ದಾರೆ. ಭಾರತದಲ್ಲಿ ಆ್ಯಪಲ್ ಕಂಪನಿಯ ಯಾವುದೇ ಫ್ಯಾಕ್ಟರಿ ತೆರೆಯದಂತೆ ಆ್ಯಪಲ್ ಸಿಇಓ ಟಿಮ್ ಕುಕ್‌ಗೆ ಸಂದೇಶ ರವಾನಿಸಿದ್ದಾರೆ. ಭಾರತ ಅವರ ದಾರಿಯನ್ನು ಅವರು ನೋಡಿಕೊಳ್ತಾರೆ. ನೀವು ಅವರನ್ನು ಕಟ್ಟಿ ಬೆಳೆಸಬೇಡಿ ಅಂತ ಟ್ರಂಪ್‌ ನೀಡಿರೋ ಸೂಚನೆಯಿಂದ ಅವರ ಮತ್ತೊಂದು ಮುಖ ಬಯಲಾಗಿದೆ. ಈ ನಿರ್ಧಾರ ಭಾರತದ ಬಗೆಗೆ ಅವರಿಗಿರುವ ಹೊಟ್ಟೆಕಿಚ್ಚನ್ನ ಎತ್ತಿ ತೋರಿಸುತ್ತಿದೆ. ಭಾರತ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ. ಹೀಗಾಗಿ ಅಮೆರಿಕಾದಲ್ಲಿ ಹೂಡಿಕೆ ಮಾಡಿ ಅಂತ ಟ್ರಂಪ್‌ ಹೇಳಿಕೆ ನೀಡಿರೋದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

Also Read: Spotify, YouTube Music ನಿಂದ ಪಾಕಿಸ್ತಾನದ ಹಾಡುಗಳು ಮಂಗಮಾಯ!

ದೋಹಾದಲ್ಲಿ ನಡೆದ ಉದ್ಯಮ ಕಾರ್ಯಕ್ರಮದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ನನಗೆ ಟಿಮ್ ಕುಕ್ ಜೊತೆ ಸ್ವಲ್ಪ ಸಮಸ್ಯೆ ಇದೆ. ನಾನು ಆತನಿಗೆ ಹೇಳುತ್ತಿದ್ದೇನೆ,ನನ್ನ ಸ್ನೇಹಿತ, ನಿಮ್ಮನ್ನು ನಾನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇನೆ. ನೀವು 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದ್ದೀರಿ, ಆದರೆ ಅದನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡೆ. ನೀವು ಭಾರತದಲ್ಲಿ ಹೂಡಿಕೆ ಮಾಡುವುದು ಬೇಡ, ನೀವು ಭಾರತವನ್ನು ನೋಡಿಕೊಳ್ಳಲು ಬಯಸಿದರೆ, ನೀವು ಭಾರತದಲ್ಲಿ ಹೂಡಿಕೆ ಮಾಡಬಹುದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದ್ದರಿಂದ ಭಾರತದಲ್ಲಿ ಮಾರಾಟ ಮಾಡುವುದು ತುಂಬಾ ಕಷ್ಟ” ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Exit mobile version